ಜೈಲಿನಿಂದ ಹೊರಬಂದು ಗೆಳತಿಗೆ ಗುಂಡಿಟ್ಟು ಹತ್ಯೆ

Social Share

ನವದೆಹಲಿ,ನ.23-ವಿವಾಹಿತ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಗುಂಡಿಟ್ಟು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ದೆಹಲಿಯ ನರೆಲಾ ಪ್ರದೇಶದ ಓಯೋ ಹೋಟೆಲ್‍ನ ಕೊಠಡಿಯಲ್ಲಿ ಘಟನೆ ನಡೆದಿದ್ದು, ಗೀತಾ ಎಂಬಾಕೆ ಹತ್ಯೆಯಾಗಿದ್ದಾರೆ.

ಆರೋಪಿ ಪ್ರವೀಣ್ ಅಲಿಯಾಸ್ ಸೀಟು ಗಂಭೀರವಾಗಿ ಗಾಯಗೊಂಡಿದ್ದು, ಸಂಜಯ್‍ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೋಟೆಲ್ ಸಿಬ್ಬಂದಿ ಪ್ರಕಾರ ಗೀತಾ ಮಂಗಳವಾರ ಓಯೋ ರೂಂಗೆ ಆಗಮಿಸಿದ್ದರು. ಈ ಜೋಡಿಯ ನಡುವೆ ತಾರಕಕ್ಕೇರಿದ ವಾಗ್ವಾದ ನಡೆದಿದೆ.

ಜೈಲಲ್ಲಿ ಹೊಟ್ಟೆ ಬಿರಿಯೋಹಾಗೆ ತಿಂದು 8 ಕೆಜಿ ತೂಕ ಹೆಚ್ಚಿಸಿಕೊಂಡ ಸತ್ಯೇಂದ್ರ ಜೈನ್

ಆರೋಪಿ ಪಿಸ್ತೂಲ್‍ನಿಂದ ಗೀತಾ ಅವರ ಎದೆಗೆ ಗುಂಡು ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ತಾನು ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿದ್ದಾನೆ.

ಆರೋಪಿ ಪ್ರವೀಣ್ ವಿರುದ್ಧ ಈಗಾಗಲೇ ಮತ್ತೊಂದು ಕೊಲೆ ಪ್ರಕರಣದ ಆರೋಪವಿದೆ. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಸೆಪ್ಟೆಂಬರ್ 21ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಕುಕ್ಕರ್ ಕ್ರಿಮಿ ಕುರಿತು ಬಗೆದಷ್ಟು ಬಯಲಾಗುತ್ತಿವೆ ಸ್ಪೋಟಕ ಮಾಹಿತಿ

Married, man, shoots, girlfriend, Delhi,

Articles You Might Like

Share This Article