ಏರ್‌ಬ್ಯಾಗ್‌ಗಳಲ್ಲಿ ದೋಷ : 17 ಸಾವಿರ ಕಾರುಗಳನ್ನು ವಾಪಸ್ ಪಡೆದ ಮಾರುತಿ

Social Share

ನವದೆಹಲಿ,ಜ.18- ಮಾರುತಿ ಕಾರುಗಳ ಏರ್‌ಬ್ಯಾಗ್‌ಗಳಲ್ಲಿ ದೋಷ ಕಂಡುಬಂದಿರುವ ಹಿನ್ನಲೆಯಲ್ಲಿ ಮಾರುತಿ ಸುಜುಕಿ ಸಂಸ್ಥೆ ಗ್ರಾಹಕರಿಂದ 17,362 ವಾಹನಗಳನ್ನು ವಾಪಸ್ ಪಡೆದುಕೊಳ್ಳಲು ತೀರ್ಮಾನಿಸಿದೆ.

ಆಲ್ಟೋ, ಬ್ರೆಜ್ಜಾ ಮತ್ತು ಬಲೇನೋ ಕಾರುಗಳ ಏರ್ ಬ್ಯಾಗ್‍ಗಳಲ್ಲಿ ದೋಷ ಕಂಡು ಬಂದಿರುವುದರಿಂದ ಏರ್ ಬ್ಯಾಗ್ ನಿಯಂತ್ರಕವನ್ನು ಸರಿಪಡಿಸುವ ಉದ್ದೇಶದಿಂದ ಇಂತಹ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕಳೆದ ಡಿಸಂಬರ್ 8ರಿಂದ ಜನವರಿ 12ರ ನಡುವೆ ತಯಾರಿಸಲಾಗಿರುವ ಅಲ್ಟೋ ಕೆ10, ಎಸ್‍ಪ್ರೆಸ್ಸೋ, ಇಕೋ, ಬ್ರೆಜ್ಜಾ, ಬಲೆನೋ, ಗ್ರಾಂಡ್ ವಿಟಾರಾ ಕಾರುಗಳ ಏರ್‌ಬ್ಯಾಗ್‌ಗಳಲ್ಲಿ ದೋಷ ಕಂಡುಬಂದಿದೆ.

ವೈರಲ್ ಆಯ್ತು ಬಿಜೆಪಿ ಮುಖಂಡನ ಪುತ್ರನ ರೌಡಿಸಂ ವಿಡಿಯೋ

ಈ ಮಾಡಲ್ ಕಾರುಗಳನ್ನು ಖರೀದಿಸಿರುವ ಗ್ರಾಹಕರು ಉಚಿತವಾಗಿ ಏರ್‌ಬ್ಯಾಗ್‌ ನಿಯಂತ್ರಕಗಳನ್ನು ಪರಿಶೀಲಿಸಿಕೊಳ್ಳಬಹುದು ಇಲ್ಲವೆ ವಾಹನಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ.

ವಾಹನ ಅಪಘಾತದ ಸಂದರ್ಭದಲ್ಲಿ ಏರ್‌ಬ್ಯಾಗ್‌ಗಳಲ್ಲಿ ಮತ್ತು ಸೀಟ್ ಬೆಲ್ಟ ಪ್ರಿಟೆನ್ಷನರ್‍ಗಳನ್ನು ನಿಯೋಜಿಸದೇ ದೋಷಕ್ಕೆ ಕಾರಣವಾಗಬಹುದು ಎಂದು ಸಂಸ್ಥೆ ತಿಳಿಸಿದೆ.

Maruti Suzuki, recalls, 17362, vehicles, faulty, airbags,

Articles You Might Like

Share This Article