ತುಮಕೂರು,ಜು.17- ಮಟ್ಕಾ ದಂಧೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಇನ್‍ಸ್ಪೆಕ್ಟರ್ ಅಮಾನತುಗೊಳಿಸಿದ ಬೆನ್ನಲ್ಲೇ ಇಬ್ಬರು ಎಎಸ್‍ಐ, ಮೂವರು ಕಾನ್‍ಸ್ಟೇಬಲ್‍ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ತಿರುಮಣಿ ಎಎಸ್‍ಐಗಳಾದ ರಾಮಾಂಜಿ ನಯ್ಯ ಅವರನ್ನು ಹುಳಿಯಾರು, ನರಸಿಂಹಮೂರ್ತಿ ಅವರನ್ನು ತುರುವೇಕೆರೆ ಠಾಣೆಗೆ, ವೈಎನ್ ಹೊಸಕೋಟೆ ಠಾಣೆ ಪೇದೆಗಳಾದ ಕೇಶವರಾಜು ತುರುವೇಕೆರೆ ಠಾಣೆ, ಗೋವಿಂದರಾಜು ಹುಲಿಯೂರು ದುರ್ಗ ಠಾಣೆಗೆ, ಪಾವಗಡ ಠಾಣೆಯ ಶ್ರೀನಿವಾಸ್ ತುರುವೇಕೆರೆ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ವರ್ಗಾವಣೆಯಾದ ಸಿಬ್ಬಂದಿ ಮೇಲೆ ಗುರುತರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಇಲಾಖಾ ಶಿಸ್ತುಕ್ರಮ ಬಾಕಿ ಇರಿಸಿ ವರ್ಗಾವಣೆ ಮಾಡಿದ್ದು, ಮಟ್ಕಾ ನಿರ್ಮೂಲನೆಗೆ ಕಠಿಣ ಕ್ರಮ ಕೈಗೊಂಡಿರುವ ಎಸ್ಪಿ ರಾಹುಲ್ ಕುಮಾರ್ ಅವರ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪೊಲೀಸ್ ವಲಯದಲ್ಲಿ ಎಚ್ಚರಿಕೆ ಗಂಟೆಯಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.