‘ರೇಣುಕಾಚಾರ್ಯ ಲೆವೆಲ್ ಬೇರೆ, ನನ್ನ ಲೆವೆಲ್ಲೇ ಬೇರೆ’

Spread the love

ಕಲಬುರಗಿ,ಮೇ16- ರೇಣುಕಾಚಾರ್ಯ ಲೆವೆಲ್ ಬೇರೆ, ನನ್ನ ಲೆವೆಲ್ ಬೇರೆ. ಹೀಗಾಗಿ ನಾನು ಅವರ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಭಾಷ್ ರಾಠೋಡ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಎಂ.ಬಿ.ಪಾಟೀಲ್ ಓರ್ವ ಭ್ರಷ್ಟ ಎಂದು ರೇಣುಕಾಚಾರ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ.

ನಾನು ನನ್ನ ಲೆವೆಲ್‍ನಲ್ಲಿ ಇದ್ದವರೊಂದಿಗೆ ಪ್ರತಿಕ್ರಿಯಿಸುತ್ತೇವೆ ಎಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಗೆಲುವ ನಿಶ್ಚಿತವೆಂದು ಹೇಳಿದರು.

# ಸಿಎಂ ಚರ್ಚೆ ಅನಗತ್ಯ: ಪರಮೇಶ್ವರ್ :  ಮುಖ್ಯಮಂತ್ರಿ ಸ್ಥಾನದಲ್ಲಿ ಈಗಾಗಲೇ ಕುಮಾರಸ್ವಾಮಿ ಇದ್ದಾರೆ. ಹೀಗಾಗಿ ಈ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಖ್ಯಮಂತ್ರಿಯಾಗಲು ಎಚ್.ಡಿ.ರೇವಣ್ಣನವರೂ ಅರ್ಹರಿದ್ದಾರೆ ಎಂಬ ಸಿದ್ದರಾಮಯ್ಯನವರ ಟ್ವೀಟ್‍ಗೆ ಅವರು ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯನವರು ಎಚ್.ಡಿ.ರೇವಣ್ಣ ಇಬ್ಬರೂ ಆತ್ಮೀಯರು. ಯಾವ ಅರ್ಥದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲವೆಂದರು.  ಬಿಎಸ್ ಯಡಿಯೂರಪ್ಪನವರು ನೂರು ಬಾರಿ ಜಪಿಸಿದರೂ ಮುಖ್ಯಮಂತ್ರಿಯಾಗಲ್ಲ. ಅವರದು ಹಗಲುಗನಸು ಎಂದರು.

ನನ್ನ ಸೇರಿ ಅನೇಕರಿಗೆ ಸಿಎಂ ಆಗುವ ಅರ್ಹತೆ ಇದೆ ಎಂದ ಅವರು, ಮೇ 23, 24 ಅಲ್ಲ; ನಾಲ್ಕು ವರ್ಷದವರೆಗೂ ನಾವೇ ರಾಜ್ಯಭಾರ ಮಾಡುತ್ತೇವೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದರು. ಕ್ಷೇತ್ರದ ವಿವಿಧೆಡೆ ಅವರು ಸಂಚರಿಸಿ ಮತ ಯಾಚಿಸಿದರು.