ಸಂಗಮ, ಜ.9- ಅನಾಮಧೇಯ ಜಾಹೀರಾತು ನೀಡಿ ಬಿಜೆಪಿ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ವಾಸ್ತವಾಂಶಗಳನ್ನು ಮುಚ್ಚಿಡುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆಯ ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದರು.ಪಾದಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ 1986-87 ಪ್ರಸ್ತಾಪವಾಗಿದೆ. 5600 ಎಕರೆಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಚಿಂತನೆ ನಡೆದಿತ್ತು. ಅಂದಿನಿಂದ 2013ವರೆಗೆ ಹಲವು ಬೆಳವಣಿಗೆಗಳಾಗಿವೆ.
ಕಾವೇರಿ ನೀರಾವರಿ ನ್ಯಾಯಮಂಡಳಿಯ ತೀರ್ಪಿನ ಬಳಿಕ ನಾನು 2013 ಅಕ್ಟೋಬರ್ ನಲ್ಲಿ ಅಕಾರಿಗಳ ಜೊತೆ ಸಭೆ ನಡೆಸಿ ಯೋಜನಾ ವರದಿ ತಯಾರಿಸಲು 4ಜಿ ರಿಯಾಯಿತಿ ನೀಡಲಾಯಿತು. ನಂತರ ಜಾಗತಿಕ ಆಸಕ್ತರನ್ನು ಆಹ್ವಾನಿಸಲಾಗಿತ್ತು. ಖಾಸಗಿ ಕಂಪೆನಿಗಳು 22 ಕೋಟಿ ಟೆಂಡರ್ ನಮೂದು ಮಾಡಿದ್ದವು. ಅದು ಹೆಚ್ಚಾಗಿದೆ ಎಂದು ಕೈ ಬಿಟ್ಟು 3.26 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದರು.
ಅದನ್ನು ಕೇಂದ್ರ ಜಲ ಆಯೋಗಕ್ಕೆ ವರದಿ ರೂಪದಲ್ಲಿ ಸಲ್ಲಿಸಲಾಯಿತು. ಅದಕ್ಕೂ ಮುನ್ನ ಯೋಜನೆಯ ಔಚಿತ್ಯ ವರದಿಯನ್ನೂ ನೀಡಲಾಗಿದೆ. ಬಳಿಕ ನಮ್ಮ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅಂಗೀಕಾರ ದೊರೆತಿದೆ.
ಬಳಿಕ ಕಾವೇರಿ ನದಿ ವಿವಾದದ ತೀರ್ಪು ಪ್ರಕಟಗೊಂಡಿತ್ತು. ಹಿರಿಯ ವಕೀಲ ಪಾಲಿನಾರಿಮನ್ ಅವರು ಕೊನೆಯ ಹಂತದ ವಿಚಾರಣೆಯಲ್ಲಿ ಮಾಡಿದ ವಾದ ಪರಿಗಣಿಸಿ ತಮಿಳುನಾಡಿಗೆ ಹಂಚಿಕೆಯಾಗಿದ್ದ 193 ಟಿಎಂಸಿ ನೀರಿನ ಬದಲು ಸುಪ್ರೀಂಕೋರ್ಟ್ 172 ಟಿಎಂಸಿಯನ್ನು ಮರುಹಂಚಿಕೆ ಮಾಡಿದೆ ಎಂದು ವಿವರಿಸಿದರು.
ಮೇಕೆದಾಟು ಅಣೆಕಟ್ಟಿಗೆ ಮೊದಲು 5692 ಕೋಟಿ ರೂ. ವೆಚ್ಚದಲ್ಲಿ ಯೋಜನೆ ತಯಾರಿಸಲಾಗಿತ್ತು. ಭೂಸ್ವಾೀನ ಪ್ರಕ್ರಿಯ ಮËಲ್ಯ ಹೆಚ್ಚಾಗಿದ್ದರಿಂದ ಪರಿಷ್ಕøತ ಯೋಜನಾ ವೆಚ್ಚ ಒಂಬತ್ತು ಕೋಟಿ ರೂ.ಗೆ ಹೆಚ್ಚಾಯಿತು ಎಂದು ವಿವರಿಸಿದರು.
ಕಾವೇರಿ ನೀರು ನಿರ್ವಹಣಾ ಮಂಡಲಿ ಮತ್ತು ಕೇಂದ್ರ ಪರಿಸರ ಅರಣ್ಯ ಇಲಾಖೆಯ ಅನುಮತಿ ಪಡೆದು ಯೋಜನೆ ಆರಂಭಿಸಲು ಸಾಧ್ಯವಿದೆ. ಈ ಎರಡು ಕೆಲಸಗಳು ಕೇಂದ್ರ ಸರ್ಕಾರದ ಅೀನದಲ್ಲಿ ನಡೆಯಬೇಕಿದೆ. ಬಿಜೆಪಿ ಸರ್ಕಾರ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅನಾಮಧೇಯ ಜÁಹಿರಾತು ನೀಡಿದೆ. ನಾವು ವಾಸ್ತವಾಂಶಗಳನ್ನು ನೀಡಲು ಪ್ರತ್ಯೇಕ ಜÁಹಿರಾತು ನೀಡುತ್ತೇವೆ ಎಂದು ಹೇಳಿದರು.
