ನವದೆಹಲಿ, ಡಿ.7- ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿಯ ಮೂರು ಅವಧಿಗಳ ಆಡಳಿತವನ್ನು ಹಿಂದಿಕ್ಕಿ ಅಮ್‍ಆದ್ಮಿ ಪಕ್ಷ ಭರ್ಜರಿ ಬಹುಮತದಿಂದ ಅಧಿಕಾರ ಹಿಡಿದಿದೆ.
ದೇಶದ ರಾಜಧಾನಿ ದೆಹಲಿ ಮಹಾನಗರ ಪಾಲಿಕೆಯಲ್ಲಿನ 250 ಸ್ಥಾನಗಳಿದ್ದು, ಅಧಿಕಾರ ಹಿಡಿಯಲು 126 ಸ್ಥಾನಗಳನ್ನು ಗೆಲ್ಲಬೇಕಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತ ಎಣಿಕೆಯಲ್ಲಿ ಬಿಜೆಪಿ ಮತ್ತು ಅಮ್ ಆದ್ಮಿಪಕ್ಷಗಳ ನಡುವೆ ರೋಚಕ ಪೈಪೊಟಿ ಮುಂದುವರೆದಿತ್ತು.
ಅಮ್‍ಆದ್ಮಿ ಪಕ್ಷ 134 ಕ್ಷೇತ್ರಗಳಲ್ಲಿ ಗೆಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ 104ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, 15 ವರ್ಷಗಳಿಂದ ದೆಹಲಿಯ ಸ್ಥಳಿಯ ಆಡಳಿತದ ಮೇಲೆ ಹೊಂದಿದ್ದ ಹಿಡಿತವನ್ನು ಕಳೆದುಕೊಂಡಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ 10ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಕಳೆದ ಬಾರಿಯ ಪ್ರದರ್ಶನಕ್ಕಿಂತಲೂ ಕಳಪೆ ಸಾಧನೆ ಮಾಡಿದೆ.
ಚುನಾವಣೋತ್ತರದಲ್ಲಿ ನಡೆದಿದ್ದ ಸಮೀಕ್ಷೆಯ ಪ್ರಕಾರ ಅಮ್‍ಆದ್ಮಿ ಸ್ಪಷ್ಟ ಬಹುಮತದೊಂದಿಗೆ ದೆಹಲಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಅಂದಾಜುಗಳಿದ್ದವು. ನಿರೀಕ್ಷೆಯಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್‍ಆದ್ಮಿ ಪಕ್ಷ ಗೆಲುವು ಸಾಧಿಸಿದೆ.
ಎಲ್ಲೆಡೆ ಕಾಂಗ್ರೆಸ್ ಸೋಲಿಗೆ ಅಮ್‍ಆದ್ಮಿ ಪಕ್ಷ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿದ್ದವು, ಈಗ ದೆಹಲಿಯಲ್ಲಿ ಬಿಜೆಪಿಯನ್ನು ಧೂಳಿಪಟ ಮಾಡುವ ಮೂಲಕ ನಮ್ಮ ಪಕ್ಷ ಎರಡು ಪಕ್ಷಗಳ ಸಮಾನ ಎದುರಾಳಿ ಎಂದು ಸಾಬೀತು ಪಡಿಸಿದೆ ಎಂದು ಅಮ್‍ಆದ್ಮಿಯ ವಕ್ತಾರರು ಹೇಳಿದ್ದಾರೆ.
ಪ್ರೀತಿಸಿದ ಹುಡುಗಿ ಸಿಗದಿದ್ದಕ್ಕೆ ಯುವಕ ಆತ್ಮಹತ್ಯೆ
ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಕಳೆದ 15 ವರ್ಷಗಳಿಂದ ಮೂರು ಅವಧಿಗೆ ದೆಹಲಿ ಪಾಲಿಕೆಯಲ್ಲಿ ಅಧಿಕಾರ ಹಿಡಿದ್ದು, ನಾಲ್ಕನೇ ಅವಧಿಗೂ ದಿಗ್ವಿಜಯ ಮುಂದುವರೆಸುವ ಹವಣಿಕೆಯಲ್ಲಿತ್ತು. ಬಿಜೆಪಿಯ ಸ್ಥಳೀಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಮುಂದಿಟ್ಟುಕೊಂಡು ಮತ ಯಾಚನೆ ಮಾಡಿತ್ತು. ಇತ್ತ ಅಮ್ ಆದ್ಮಿ ಪಕ್ಷ ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಪ್ರಚಾರ ಮಾಡಿತ್ತು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಅನೇಕರು ಪಾಲಿಕೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಿದ್ದರು.
ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ : ಕೆಲ ಅಧಿಕಾರಿಗಳಿಗೆ ನಡುಕ ಶುರು
ಡಿ 4ರಂದು ನಡೆದಿದ್ದ ಚುನಾವಣೆಯಲ್ಲಿ 1349 ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣಾ ಆಯೋಗ ಮತ ಎಣಿಕೆಗೆ 42 ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಿದ್ದಲ್ಲದೆ, ಬಿಗಿ ಬಂದೋಬಸ್ತ್ ಆಯೋಜಿಸಿತ್ತು. ಈ ಚುನಾವಣೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಮತದಾರರ ಗಮನ ಸೆಳೆಯುವ ಯತ್ನ ನಡೆಸಿದ್ದವು.
ಮಹಾರಾಷ್ಟ್ರಕ್ಕೆ ಒಂದಿಂಚೂ ಜಾಗ ಬಿಡಲ್ಲ : ಕಾರಜೋಳ
ಅಮ್‍ಆದ್ಮಿ 138. ಬಿಜೆಪಿ 136, ಕಾಂಗ್ರೆಸ್ 129 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 2017ದಲ್ಲಿ ನಡೆದಿದ್ದ ಪಾಳಿಕೆ ಚುನಾವಣೆಯಲ್ಲಿ 270 ವಾರ್ಡ್‍ಗಳಿದ್ದವು. ಆ ಚುನಾವಣೆಯಲ್ಲಿ ಬಿಜೆಪಿ 181 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದಿಂದ ಅಧಿಕಾರ ಹಿಡಿದಿತ್ತು. ಅಮ್‍ಆದ್ಮಿ ಪಕ್ಷದ 48, ಕಾಂಗ್ರೆಸ್‍ನ 27 ಅಭ್ಯರ್ಥಿಗಳು ಗೆದ್ದಿದ್ದರು.
ಪಾಲಿಕೆಯ ಪುನಾರಚನೆ ಮತ್ತು ಕ್ಷೇತ್ರ ವಿಂಗಡಣೆಯ ಬಳಿಕ ಕ್ಷೇತ್ರಗಳ ಸಂಖ್ಯೆ 250 ಆಗಿದ್ದು, ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಶೇ.50.48ರಷ್ಟು ಮತದಾನವಾಗಿತ್ತು.
#Delhi, #MCDElectionResult2022, #AAP, #Wins,