ಆಪ್ ಶಾಸಕನಿಗೆ ಕಾರ್ಯಕರ್ತರಿಂದಲೇ ಬಿತ್ತು ಗೂಸಾ

Social Share

ನವದೆಹಲಿ,ನ.22- ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಸ್ಥಳೀಯರು ಗೂಸಾ ನೀಡಿದ್ದ ಮಾದರಿಯಲ್ಲೇ ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರನ್ನು ಅವರ ಪಕ್ಷದ ಕಾರ್ಯಕರ್ತರೆ ಅಮಾನುಷವಾಗಿ ಹಲ್ಲೇ ಮಾಡಿರುವ ವಿಡಿಯೋ ವೈರಲ್ ಆಗಿದೆ.

ದೆಹಲಿ ಸಿವಿಲ್ ಚುನಾವಣೆಗೆ ಟಿಕೆಟ್ ನೀಡುವ ಕುರಿತಂತೆ ನಡೆದ ಮಾತುಕತೆ ಸಂದರ್ಭದಲ್ಲಿ ಆಪ್ ಶಾಸಕ ಗುಲಾಬ್ ಸಿಂಗ್ ಯಾದವ್ ಅವರಿಗೆ ಅವರ ಪಕ್ಷದ ಕಾರ್ಯಕರ್ತರೆ ಥಳಿಸುವ ದೃಶ್ಯಗಳನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ.

ಆಪ್ ಶಾಸಕನಿಗೆ ಗೂಸಾ ನೀಡುವ ದೃಶ್ಯ ಇದೀಗ ಎಲ್ಲೇಡೆ ವೈರಲ್ ಆಗಿದ್ದರೂ ಈ ಕುರಿತಂತೆ ದೆಹಲಿ ಮುಖ್ಯಮಂತ್ರಿ ಆರವಿಂದ್ ಕೇಜ್ರಿವಾಲ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವೂ ಟಿಕೆಟ್‍ಗಳನ್ನು ಮಾರಿಕೊಳ್ಳುತ್ತಿರುವುದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ಶಾಸಕರ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಾಕ್ಷಿ ಎಂದು ಬಿಜೆಪಿ ಪಕ್ಷದ ಮುಖಂಡರು ಟ್ವಿಟ್ ಮಾಡಿದ್ದಾರೆ.

ಆರಕ್ಕೇರದ ಬಿಜೆಪಿ, ಮೂರಕ್ಕಿಳಿಯದ ಕಾಂಗ್ರೆಸ್, ಜೆಡಿಎಸ್ ಜೋಶ್

ದೆಹಲಿ ವಿಧಾನಸಭೆಯಲ್ಲಿ ಮಟಿಯಾಲಾ ಕ್ಷೇತ್ರವನ್ನು ಪ್ರತಿನಿಧಿಸುವ ಗುಲಾಬ್ ಸಿಂಗ್ ಯಾದವ್ ಅವರು ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಘಟನೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಆದರೆ, ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಉದ್ರಿಕ್ತ ಕಾರ್ಯಕರ್ತರು ಶಾಸಕರ ಕಾಲರ್ ಹಿಡಿದು ತಳ್ಳಲು ಮುಂದಾದಾಗ ಯಾದವ್ ಅವರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ರೊಚ್ಚಿಗೆದ್ದ ಕಾರ್ಯಕರ್ತರು ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹೊಡೆತ ತಾಳಲಾರದೆ ಶಾಸಕರು ಓಡಲಾರಂಭಿಸಿದರೂ ಬೆನ್ನು ಬಿಡದೆ ಅಟ್ಟಾಡಿಸಿಕೊಂಡು ಹೋಗಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ.

ಚೀನಾದಲ್ಲಿ ಕೈಗಾರಿಕಾ ಸಗಟು ಕೇಂದ್ರದಲ್ಲಿ ಬೆಂಕಿ, 36 ಕಾರ್ಮಿಕರ ಸಾವು

ಪ್ರಾಮಾಣಿಕ ರಾಜಕಾರಣದ ನಾಟಕೀಯ ನಾಟಕದಲ್ಲಿ ತೊಡಗಿದ ಪಕ್ಷದಿಂದ ಅಭೂತಪೂರ್ವ ದೃಶ್ಯಗಳಿವು ಎಂದು ಟ್ವಿಟ್ ಮಾಡಿರುವ ಬಿಜೆಪಿ ಮುಖಂಡರು ಹಲ್ಲೆಗೆ ಟಿಕೆಟ್ ಮಾರಾಟವೇ ಕಾರಣ ಎಂದು ಆರೋಪಿಸಿದೆ.
ಆದರೆ, ಈ ಆರೋಪವನ್ನು ಒದೆ ತಿಂದ ಶಾಸಕ ನಿರಾಕರಿಸಿದ್ದು, ಘಟನೆಗೆ ಕಾರಣ ಏನು ಎಂದು ನಂತರ ಪ್ರತಿಕ್ರಿಯಿಸುವೆ ಎಂದು ಹಿಂದಿಯಲ್ಲಿ ಟ್ವಿಟ್ ಮಾಡಿದ್ದಾರೆ.

MCD, elections, AAP, MLA, Gulab Singh, thrashed, party, workers,

Articles You Might Like

Share This Article