126 ಮಕ್ಕಳಲ್ಲಿ ದಡಾರ ಸೋಂಕು : ಮಗು ಸಾವು

Social Share

ಮುಂಬೈ(ಮಹಾರಾಷ್ಟ್ರ),ನ.15-ಮುಂಬೈನಲ್ಲಿ ದಡಾರ ರೋಗ ಹೆಚ್ಚಾಗಿದ್ದು, ಒಂದು ವರ್ಷದ ಮಗುವೊಂದು ಸಾವನ್ನಪ್ಪಿದೆ. ಈ ವೈರಾಣು ಸೋಂಕು ಮುಂಬೈ 126 ಮಕ್ಕಳಿಗೆ ತಗುಲಿದೆ. ದಡಾರ ಸೋಂಕಿನಿಂದ ನುಲ್ಲು ಬಜಾರ್ ಪ್ರದೇಶದ ಬಾಲಕನಿಗೆ ಅಸ್ವಸ್ಥನಾಗಿದ್ದು, ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಸೋಮವಾರ ಮೃತಪಟ್ಟಿದ್ದಾನೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ದಡಾರದಿಂದಾಗಿ ಮಗುವಿನ ಮೂತ್ರಪಿಂಡ ಸಮಸ್ಯೆಗೊಳಗಾಗಿದ್ದು ಸಾವಿಗೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

“ರಸ್ತೆಗುಂಡಿ ಮುಚ್ಚಲು 2 ದಿನ ಸಮಯ ಕೊಡಿ ಸಾಕು”

ಮುಂಬೈನ ಕೆಲವು ಭಾಗಗಳಲ್ಲಿ ದಡಾರ ಸೋಂಕು ತೀವ್ರಗೊಂಡಿದೆ. ಸೆಪ್ಟೆಂಬರ್‍ನಿಂದೀಚೆಗೆ 99 ಮಕ್ಕಳು ಸೋಂಕಿಗೆ ಸಿಲುಕಿದ್ದಾರೆ. ಮುಂಬೈ ಮಹಾನಗರ ಪಾಲಿಕೆ ಆಸ್ಪತ್ರೆಗಳಲ್ಲಿ ಇದಕ್ಕಾಗಿ ವಿಶೇಷ ವಾರ್ಡ್‍ಗಳನ್ನು ಸ್ಥಾಪಿಸಲಾಗಿದೆ.

Articles You Might Like

Share This Article