ಬೆಳಗಾವಿ,ಡಿ.28- ಪಶು ಸಂಜೀವಿನಿ ಯೋಜನೆಗೆ ಕೇಂದ್ರ ಸರ್ಕಾರದ ನೆರವಿನಲ್ಲಿ 275 ಆ್ಯಂಬುಲೆನ್ಸ್ಗಳನ್ನು ಖರೀದಿ ಮಾಡಲಾಗಿದ್ದರೂ, ಈವರೆಗೂ ವೈದ್ಯಕೀಯ, ಇತರ ಸಿಬ್ಬಂದಿಗಳನ್ನು ನೇಮಿಸದಿರುವ ಕುರಿತು ವಿಧಾನ ಪರಿಷತ್ನಲ್ಲಿ ಪ್ರತಿಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದ ಘಟನೆ ನಡೆಯಿತು.
ಪ್ರಶ್ನೋತ್ತರದ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ, ರಾಜ್ಯದಲ್ಲಿ ಚರ್ಮಗಂಟು ರೋಗದಿಂದ 28 ಸಾವಿರ ಜಾನುವಾರುಗಳ ಸಾವನ್ನಪ್ಪಿವೆ. ಜುಲೈನಲ್ಲಿ ಪಶು ಸಂಜೀವಿನಿ ಯೋಜನೆ ಜಾರಿ ಮಾಡಲಾಗಿದೆ. ಭಾರೀ ಜಾಹಿರಾತ ನೀಡಿ ಪ್ರಚಾರ ಪಡೆಯಲಾಗಿದೆ. ಪ್ರತಿ ವಾಹನಕ್ಕೆ ಮೂರು ಮಂದಿ ಸಿಬ್ಬಂದಿ ಬೇಕು. ಸಿಬ್ಬಂದಿ ನೇಮಕಾತಿಗೆ ಎರಡು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಅದು ಪೂರ್ಣಗೊಂಡಿಲ್ಲ.
ಹೀಗಾಗಿ ಆ್ಯಂಬುಲೆನ್ಸ್ ಇದ್ದರೂ ವೈದ್ಯಕೀಯ ಸಿಬ್ಬಂದಿ ಇಲ್ಲದೆ ಜಾನುವಾರುಗಳ ಚಿಕಿತ್ಸೆಗೆ ಅನುಕೂಲವಾಗುತ್ತಿಲ್ಲ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಶು ಸಂಗೋಪನಾ ಸಚಿವ ಪ್ರಭುಚವ್ಹಾಣ್, ಪ್ರಾಯೋಗಿಕವಾಗಿ ರಾಜ್ಯದಲ್ಲಿ 15 ಆ್ಯಂಬುಲೇನ್ಸ್ ಖರೀದಿ ಮಾಡಿ ಸೇವೆಗೆ ಸಮರ್ಪಿಸಲಾಗಿತ್ತು. ಅದು ಯಶಸ್ವಿಯಾದ ಬಳಿಕ ದೇಶಾದ್ಯಂತ ಜಾರಿಗೊಳಿಸಲಾಗಿದೆ.
106ಗೆ ಕರೆ ಮಾಡಿದರೆ ಆ್ಯಂಬುಲೆನ್ಸ್ ರೈತರ ಮನೆ ಬಾಗಿಲಿಗೆ ತೆರಳಿ ವೈದ್ಯಕೀಯ ಸೇವೆ ಒದಗಿಸುತ್ತಿದೆ. ಕೇಂದ್ರದ ನೆರವಿನಲ್ಲಿ 275 ಆ್ಯಂಬುಲೆನ್ಸ್ ಒದಗಿಸಲಾಗಿದೆ. ಸಿಬ್ಬಂದಿ ನೇಮಕಾತಿಗೆ ಟೆಂಡರ್ ಪ್ರಕ್ರಿಯೆ ನಡೆಯಿತ್ತಿದೆ ಎಂದರು.
ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಯೋಜನೆ ಜಾರಿಯಾಗಿದೆ. ಕಲ್ಬುರ್ಗಿ, ಮೈಸೂರು ಭಾಗದಲ್ಲಿ ಜಾರಿಯಾಗಬೇಕಿದೆ. ಚರ್ಮಗಂಟು ರೋಗಕ್ಕೂ ಲಸಿಕೆಯನ್ನು ಈ ಆ್ಯಂಬುಲೇನ್ಸ್ ನಲ್ಲಿ ಸಾಗಿಲಸಲಾಗುತ್ತಿದೆ.
ಕೋಟಿ ಕೋಟಿ ಲೂಟಿ ಹೊಡೆದ ಭ್ರಷ್ಟ ಬಿಬಿಎಂಪಿ ಅಧಿಕಾರಿಗಳಿಗೆ ಇಡಿ ಚಾಟಿ
ನಾವು ಪ್ರಚಾರಕ್ಕೆ ಅಂಟಿಕೊಂಡಿಲ್ಲ. ವಾಸ್ತವವಾಗಿ ಕೆಲಸ ಮಾಡುತ್ತಿದ್ದೇವೆ. ವೈದ್ಯರ ಕೊರತೆ ಹಲವು ವರ್ಷಗಳಿಂದ ಬಾಕಿ ಇದೆ. ಅದನ್ನು ನಿಗಿಸಲು ಪಶು ವೈದ್ಯರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಸಿಬ್ಬಂದಿ ನೇಮಕಾತಿಗೆ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಹೇಳಿದರು.
ಸಚಿವರ ಉತ್ತರದಿಂದ ಅಸಮದಾನಗೊಂಡ ಸದಸ್ಯರು ಇದು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು. ಸಭಾಪತಿ ಪೀಠದಲ್ಲಿದ್ದ ಎಂ.ಕೆ.ಪ್ರಾಣೇಶ್ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿದರು.
ಮನೆಗೆ ಬೆಂಕಿ ಬಿದ್ದು ಒಂದೇ ಕುಟುಂಬದ ಐವರು ಸಜೀವ ದಹನ
ಸಚಿವ ವಿ.ಸೋಮಣ್ಣ ಮಧ್ಯ ಪ್ರವೇಶಿಸಿ, ಇದು ಬಹಳ ಮುಖ್ಯವಾದ ವಿಚಾರ. ಮೂಕ ಪ್ರಾಣಿಗಳ ಚಿಕಿತ್ಸೆಗೆ ತೊಂದರೆಯಾಗದಂತೆ ಸಿಬ್ಬಂದಿ ನೇಮಿಸುವ ಅಗತ್ಯವಿದೆ. ತಾವು ಖುದ್ದಾಗಿ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದರು. ಸಚಿವರ ಭರವಸೆಯಿಂದ ಸದಸ್ಯ ಎಸ್.ರವಿ ಸಮಾದಾನಗೊಂಡು ಕುಳಿತುಕೊಂಡರು.
medical staff, recruitment, Delay, Belgaum, Legislative Council,