ಉಕ್ರೇನ್‍ನಿಂದ ಪ್ರೀತಿಯ ಬೆಕ್ಕನ್ನು ಕರೆತಂದ ಯುವತಿ

Social Share

ಮೈಸೂರು,ಮಾ.5- ಉಕ್ರೇನ್‍ನಲ್ಲಿ ಜನರು ಜೀವ ಉಳಿಸಿಕೊಳ್ಳಲು ಹೆಣ ಗಾಡುತ್ತಿದ್ದಾರೆ. ಇನ್ನು ಮೂಕ ಪ್ರಾಣಿಗಳ ಕಥೆಯನ್ನು ಕೇಳಲು ಯಾರೂ ಇಲ್ಲ. ಆದರೆ, ಉಕ್ರೇನ್‍ನ ಹಾರ್ಕಿವ್‍ನಲ್ಲಿ 4ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಶರಣ್ಯ ಶ್ರೀ ಪರಮೇಶ್ವರಪ್ಪ ಮೂಲತಃ ಮೈಸೂರಿನವರು. ಉಕ್ರೇನ್‍ನಿಂದ ಭಾರತಕ್ಕೆ ಬರುವಾಗ ತನ್ನ ಜೊತೆ ಇದ್ದ ಬೆಕ್ಕನ್ನು ಕರೆತಂದಿದ್ದಾರೆ.
ಸಾಕಷ್ಟು ಕಷ್ಟ ಪಟ್ಟು ಉಕ್ರೇನ್‍ನ ಗಡಿ ದಾಟಿ vಲೆಂಡ ಮೂಲಕ ಭಾರತಕ್ಕೆ ಬಂದಿರುವ ಅವರು ಯುದ್ದ ಭೂಮಿಯಲ್ಲಿ ಪ್ರಾಣ ಹೋದರೂ ಸರಿ, ತನ್ನ ಪ್ರೀತಿಯ ಬೆಕ್ಕು ಕ್ರಿಸ್ಟಲ್‍ನ್ನು ಬಿಟ್ಟು ಹೊರಡದೆ ಅದನ್ನು ಜತೆಗೆ ಕರೆ ತಂದಿದ್ದಾರೆ.
ಈ ಬೆಕ್ಕನ್ನು ಆಕೆ ಕಳೆದ ಎರಡು ವರ್ಷಗಳಿಂದ ಸಾಕುತ್ತಿದ್ದಾರೆ. ಪ್ರೀತಿಯ ಬೆಕ್ಕನ್ನು ಬಿಟ್ಟು ಬರಲು ಮನಸ್ಸು ಆಗಲಿಲ್ಲ. ಬೆಕ್ಕನ್ನು ನೋಡಿ ಕೊಳ್ಳಲು ಅಲ್ಲಿ ಯಾರೂ ಇರಲಿಲ್ಲ. ಹಾಗಾಗಿ ನಾನು ನನ್ನ ಜೊತೆಯಲ್ಲಿಯೇ ಬೆಕ್ಕನ್ನು ಕರೆ ತಂದಿದ್ದೇನೆ. ಕರೆ ತರುವಾಗ ಏನೂ ಸಮಸ್ಯೆ ಆಗಲಿಲ್ಲ. ನಾನು ಮೈಸೂರಿನ ಮನೆಯಲ್ಲಿಯೇ ಬೆಕ್ಕು ಸಾಕುತ್ತೇನೆ ಎಂದು ಶರಣ್ಯ ಹೇಳಿದ್ದಾರೆ.

Articles You Might Like

Share This Article