ಅಗರ್ತಲಾ,ಮಾ.19- ಬಾಂಗ್ಲಾದೇಶ ಮತ್ತು ಭಾರತದ ನಡುವೆ ರೈಲ್ವೆ ಸಂಪರ್ಕ ಯೋಜನೆಯನ್ನು ತ್ವರಿತಗೊಳಿಸಲು ಮುಂದಿನ ವಾರ ಇಂಡೋ-ಬಾಂಗ್ಲಾ ಪ್ರಾಜೆಕ್ಟ್ ಸ್ಕ್ರೀನಿಂಗ್ ಸಮಿತಿ (ಪಿಎಸ್‍ಸಿ) ಮುಂದಿನ ವಾರ ಬಾಂಗ್ಲಾದೇಶದ ಬ್ರಾಹ್ಮಣ್‍ಬಾರಿಯಾದಲ್ಲಿ ಸಭೆ ನಡೆಸಲಿದೆ.
ಎರಡು ರಾಷ್ಟ್ರಗಳ ರೈಲ್ವೆ ನೆಟ್‍ವರ್ಕ್ ಅನ್ನು ಜೋಡಿಸುವ ಪ್ರಮುಖ ಯೋಜನೆ ವಿಳಂಬವಾಗಿದೆ. ದಿಲ್ಲಿ ಮತ್ತು ತ್ರಿಪುರಾದಿಂದ ಸುಮಾರು 11 ಅಧಿಕಾರಿಗಳ ತಂಡ ಭಾರತೀಯ ನಿಯೋಗ ಸ್ಥಳಕ್ಕೆ ಭೇಟಿ ನೀಡಲಿದೆ.
ಸೋಮವಾರ ಬಾಂಗ್ಲಾದೇಶದ ಬ್ರಾಹ್ಮಣಬಾರಿಯಾದ ರೈಲ್ ಭವನದಲ್ಲಿ ಪಿಎಸ್‍ಸಿ ಸಭೆ ನಡೆಯಲಿದೆ. ಗಡಿಯ ಎರಡು ಬದಿಗಳನ್ನು ಸಂಪರ್ಕಿಸುವ 12.6 ಕಿಮೀ ರೈಲ್ವೆ ಯೋಜನೆಯನ್ನು ಪರಿಶೀಲಿಸಲಾಗುವುದು ಎಂದು ತ್ರಿಪುರದ ಸಾರಿಗೆ ಕಾರ್ಯದರ್ಶಿ ಯು.ಕೆ. ಚಕ್ಮಾ ತಿಳಿಸಿದ್ದಾರೆ.
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ ಸಾಧ್ಯತೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ಪ್ರಭಾತ್ ಕುಮಾರ್, ಮುಖ್ಯ ಇಂಜಿನಿಯರ್ ವಿ.ಕೆ.ಗುಪ್ತಾ, ಬಾಂಗ್ಲಾದೇಶ ರೈಲ್ವೆಯ ಹೆಚ್ಚುವರಿ ಕಾರ್ಯದರ್ಶಿ ಎಂ.ಡಿ.ಯಾಸಿನ್, ಬಾಂಗ್ಲಾದೇಶ ರೈಲ್ವೆಯ ಜಂಟಿ ಕಾರ್ಯದರ್ಶಿ ಶಾಹಿದುಲ್ ಇಸ್ಲಾಂ ಸೇರಿದಂತೆ ಉಭಯ ದೇಶಗಳ ಪ್ರತಿನಿಗಳು ಸಭೆ ಸೇರಲಿದ್ದಾರೆ.
ಅಗರ್ತಲಾದಿಂದ ಚಕ್ಮಾ ಮತ್ತು ರಾಮನ್ ಸಿಂಗ್ಲಾ, ಅಗರ್ತಲಾ ಮೂಲದ ಹಿರಿಯ ಕಾರ್ಯನಿರ್ವಾಹಕರೂ ಸಭೆಯಲ್ಲಿ ಉಪಸ್ಥಿತರಿರುತ್ತಾರೆ. ವಿವಿಧ ಕಾರಣಗಳಿಂದ ಆಯಕಟ್ಟಿನ ರೈಲ್ವೆ ಯೋಜನೆಯನ್ನು ಕಾರ್ಯಗತಗೊಳಿಸಲು ವಿಳಂಬವಾಗಿದೆ. ಇದು ಒಂದು ವರ್ಷದ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು ಒಪ್ಪಿಕೊಂಡ ಚಕ್ಮಾ, ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಭಾರತವು ಒತ್ತು ನೀಡಲಿದೆ ಎಂದು ಹೇಳಿದರು.
ಈ ಬಾರಿ 12.6 ಕಿಮೀ ರೈಲ್ವೆ ಯೋಜನೆಯನ್ನು ಜೂನ್‍ಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇಲ್ಲಿಯವರೆಗೆ, ಭಾರತದ ಭಾಗದಲ್ಲಿ ಶೇ.80 ರಷ್ಟು ಹೆಚ್ಚು ಕೆಲಸ ಪೂರ್ಣಗೊಂಡಿದೆ, ಬಾಂಗ್ಲಾದೇಶದ ಭಾಗದಲ್ಲಿ ಶೇ.73ರಷ್ಟು ಕೆಲಸ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಖಾಡಕ್ಕಿಳಿದ ಚುನಾವಣಾ ಆಯೋಗ, ಆಮಿಷವೊಡ್ಡುವವರ ತೀವ್ರ ನಿಗಾ
ಇತ್ತೀಚೆಗೆ ಕೇಂದ್ರ ಸಾಮಾಜಿಕ ಮತ್ತು ಮಹಿಳಾ ಸಬಲೀಕರಣ ಖಾತೆ ರಾಜ್ಯ ಸಚಿವೆ ಪ್ರತಿಮಾ ಭೂಮಿಕ್ ಅವರು ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಇಂಡೋ-ಬಾಂಗ್ಲಾ ರೈಲ್ವೆ ಯೋಜನೆಯನ್ನು ತ್ವರಿತಗೊಳಿಸುವಂತೆ ಮನವಿ ಮಾಡಿದರು. ಬಾಂಗ್ಲಾದೇಶದ ಮೂಲಕ ದೇಶದ ಉಳಿದ ಭಾಗಗಳೊಂದಿಗೆ ಈಶಾನ್ಯ ರಾಜ್ಯಕ್ಕೆ ಸಂಪರ್ಕ ಕಲ್ಪಿಸಲುಇ ಇಂಡೋ-ಬಾಂಗ್ಲಾ ರೈಲ್ವೆ ಪ್ರಮುಖ ಮಾರ್ಗವಾಗಿದೆ.
#Meeting, #speedup #IndoBanglaRailway, #connect,