ನವದೆಹಲಿ,ಮಾ.2- ಈಶಾನ್ಯ ಭಾಗದ ಮೂರು ರಾಜ್ಯಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯ ಮತಎಣಿಕೆ ಇಂದು ನಡೆದಿದ್ದು, ಬಿಜೆಪಿ ಮತ್ತು ಸ್ಥಳೀಯ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ಮುನ್ನೆಡೆ ಸಾಧಿಸಿವೆ.
ತಲಾ 60 ಕ್ಷೇತ್ರಗಳನ್ನು ಹೊಂದಿರುವ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‍ನಲ್ಲಿ ಎಂದಿನಂತೆ ಕಾಂಗ್ರೆಸ್ ಕಳಪೆ ಸಾಧನೆ ಮಾಡಿದೆ. ಬಿಜೆಪಿ ಯಶಸ್ಸಿನತ್ತ ಹೆಜ್ಜೆ ಹಾಕಿದೆ. ಈಗಾಗಲೇ ಈಶಾನ್ಯ ಭಾಗದ ಅಸ್ಸಾಂನಲ್ಲಿ ದಿಗ್ವಿಜಯ ಸಾಧಿಸಿರುವ ಕೇಂದ್ರ ಆಡಳಿತಾ ರೂಢ ಬಿಜೆಪಿ ಪ್ರಸ್ತುತ ಚುನಾವಣೆ ನಡೆದ ಮೂರು ರಾಜ್ಯಗಳ ಪೈಕಿ ನಾಗಾಲ್ಯಾಂಡ್ ಮತ್ತು ತ್ರಿಪುರದಲ್ಲಿ ಅಧಿಕಾರ ಹಿಡಿಯುವತ್ತ ಹೆಜ್ಜೆ ಹಾಕಿದೆ.
ಅದಾನಿ ವಿರುದ್ಧ ತನಿಖೆಗೆ ಸಮಿತಿ ರಚಿಸಿದ ಸುಪ್ರೀಂ
ತ್ರಿಪುರದಲ್ಲಿ ಬಿಜೆಪಿ 33 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಕೂಟ 15ಕ್ಷೇತ್ರಗಳಲ್ಲಿ, ಸಿಪಿಎಂ 10ರಲ್ಲಿ, ತಿಪ್ರಾ ಪಕ್ಷ 10ರಲ್ಲಿ ಗೆಲುವು ಸಾಧಿಸಿದೆ. ಹಿಂದಿನ ವರ್ಷದ ಫಲಿತಾಂಶಕ್ಕೆ ಹೊಲಿಕೆ ಮಾಡಿದರೆ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಹಿನ್ನೆಡೆ ಅನುಭವಿಸಿದೆ, ಐಪಿಎಫ್‍ಟಿ ಒಂದರಲ್ಲಿ ಗೆಲುವು ಸಾಧಿಸಿದ್ದು, ಏಳರಲ್ಲಿ ಹಿನ್ನಡೆ ಅನುಭವಿಸಿದೆ.
ಕಾಂಗ್ರೆಸ್ ಮತ್ತು ಎಡ ಪಕ್ಷಗಳ ಮಿತ್ರಕೂಟ ಎರಡು ಕ್ಷೇತ್ರಗಳನ್ನು ಕಳೆದುಕೊಂಡಿವೆ. ವೈಯಕ್ತಿಕವಾಗಿ ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ ಗಳಿಕೆ ಕಂಡಿದೆ. ಸಿಪಿಎಂ ಏಳರಲ್ಲಿ, ಹೊಸದಾಗಿ ಸಂಚಲನ ಸೃಷ್ಟಿಸಿದ ತಿಪ್ರಾ 10 ಕ್ಷೇತ್ರಗಳಲ್ಲೂ ಗಳಿಕೆಯಲ್ಲಿದೆ.
ಮೇಘಾಲಯದಲ್ಲಿ ಆಡಳಿತಾರೂಢ ಎನ್‍ಪಿಪಿ 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಸಂಗ್ಮಾ ತಮ್ಮ ಎದುರಾಳಿ ಪಕ್ಷಗಳಿಗಿಂತ ಮುನ್ನೆಡೆ ಸಾಸಿದ್ದಾರೆ. ಮತ್ತೆ ಎನ್‍ಪಿಪಿ ಆಡಳಿತ ಮುನ್ನಡೆಯುವ ಸಾಧ್ಯತೆ ಇದೆ. ಬಿಜೆಪಿ 5, ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಟಿಎಂಸಿ 5ರಲ್ಲಿ, ಯುಡಿಪಿ 6ರಲ್ಲಿ, ಉಳಿದ ಕ್ಷೇತ್ರಗಳಲ್ಲಿ ಪಕ್ಷೇತರರು ಮುನ್ನಡೆಯಲ್ಲಿದ್ದರು. ಈ ಮೂಲಕ ಸಂಗ್ಮಾ ನೇತೃತ್ವದ ಸರ್ಕಾರ ಮರಳಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ.
ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿ : ವ್ಯಕ್ತಿಸಾವು
ಇನ್ನೂ ನಾಗಾಲ್ಯಾಂಡ್‍ನಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಎನ್‍ಡಿಪಿಪಿ 22ರಲ್ಲಿ ಮುನ್ನಡೆ ಸಾಧಿಸಿದ್ದು, ಚುನಾವಣಾ ಪೂರ್ವದ ಬಿಜೆಪಿ ಮತ್ತು ಎನ್‍ಡಿಪಿಪಿ ಮಿತ್ರಕೂಟ ಒಟ್ಟು 34 ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿ ಸರ್ಕಾರ ರಚಿಸುವ ನಿಶ್ಚಳತೆ ಪ್ರದರ್ಶಿಸಿವೆ. ಕಳೆದ ಚುನಾವಣೆಗಿಂತಲೂ ಎನ್‍ಡಿಪಿಪಿ ಐದು ಕ್ಷೇತ್ರಗಳಲ್ಲಿ ಗಳಿಕೆ ಕಂಡಿದೆ. ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಎನ್‍ಪಿಎಫ್ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಮುನ್ನೆಡೆ ಗಳಿಸಿದ್ದು, 22ರಲ್ಲಿ ಹಿನ್ನಡೆ ಅನುಭವಿಸಿದೆ.
Meghalaya, Nagaland, Tripura, Assembly election, results,