ರಾಹುಲ್ ಪಾದಯಾತ್ರೆಗೆ ಮೆಹಬೂಬಾ ಮುಫ್ತಿ ಸಾಥ್

Social Share

ಕಾಶ್ಮೀರ,ಜ.28- ಭದ್ರತೆಯ ಲೋಪದಿಂದ ನಿನ್ನೆ ಸ್ಥಗಿತಗೊಂಡಿದ್ದ ರಾಹುಲ್‍ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆ ಇಂದು ಅಂತಿಪೊರಾದಿಂದ ಶುರುವಾಯಿತು. ಸ್ಥಳೀಯ ಪಿಡಿಪಿಯ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಇಂದು ರಾಹುಲ್‍ಗಾಂಧಿಯೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ತೀವ್ರವಾದ ಚಳಿಯಿಂದ ತತ್ತರಿಸಿರುವ ರಾಹುಲ್‍ಗಾಂಧಿ ಇಷ್ಟು ದಿನಗಳ ಬಳಿಕ ಇಂದು ಪಾದಯಾತ್ರೆಯಲ್ಲಿ ಜರ್ಕಿನ್ ಮತ್ತು ತಲೆ ಟೋಪಿ ಧರಿಸಿ ನಡಿಯಲ್ಲಿ ಪಾಲ್ಗೊಂಡಿದ್ದರು. ನಿನ್ನೆ ನ್ಯಾಷನಲ್ ಕಾನರೆನ್ಸ್ ಪಕ್ಷದ ಓಮರ್ ಅಬ್ದುಲ್ಲಾ ಯಾತ್ರೆಯಲ್ಲಿ ಜೊತೆಗೂಡಿದ್ದರು. ಆದರೆ ಎರಡು ಕಿಲೋ ಮೀಟರ್ ನಡೆಯುತ್ತಿದ್ದಂತೆ ಭದ್ರತೆಯ ಲೋಪ ಕಾಣಿಸಿಕೊಂಡಿತ್ತು. ಅಗತ್ಯದಷ್ಟು ಪೊಲೀಸ್ ಸಿಬ್ಬಂದಿಗಳು ಇರಲಿಲ್ಲ. ಯಾತ್ರೆಯಲ್ಲಿ ಯಾರು ಎಲ್ಲಿ ಬೇಕಾದರೂ ಓಡಾಡಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.

ರಾಹುಲ್‍ಗಾಂಧಿ ಸುತ್ತಲು ಹಿಡಿಯಲಾಗಿದ್ದ ಹಗ್ಗವನ್ನು ದಾಟಿ ಅಪರಿಚಿತರು ಒಳನುಗ್ಗಲಾರಂಭಿಸಿದರು. ಕಾಂಗ್ರೆಸ್ ಕಾರ್ಯಕರ್ತರೆ ಖುದ್ದು ಭದ್ರತೆಗೆ ಮುಂದಾಗಿದ್ದರು, ರಾಹುಲ್‍ಗಾಂಧಿ ಸುತ್ತಲು ಕಾರ್ಯಕರ್ತರು ಮತ್ತು ಮುಖಂಡರು ಸುತ್ತುವರೆದು ರಕ್ಷಣೆ ಒದಗಿಸಿದರು.

ಭಾರತ್ ಜೋಡೋ ಯಾತ್ರೆಗೆ ಸೂಕ್ತ ಭದ್ರತೆ ಒದಗಿಸಲು ಖರ್ಗೆ ಆಗ್ರಹ

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಭದ್ರತೆಯ ಉಸ್ತುವಾರಿ ಅಧಿಕಾರಿಗಳು ಇದೇ ರೀತಿ ಮುಂದುವರೆಯುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ ಯಾತ್ರೆಯನ್ನು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿತ್ತು.

ಕಾಂಗ್ರೆಸ್ ನಾಯಕರು ಜಮ್ಮು ಕಾಶ್ಮೀರದ ಆಡಳಿತ ವ್ಯವಸ್ಥೆ ವಿರುದ್ಧ ಕಿಡಿಕಾರಿದರು. ಸದ್ಯಕ್ಕೆ ಕಣಿವೆ ರಾಜ್ಯದ ಆಡಳಿತ ವ್ಯವಸ್ಥೆ ಲೇಫ್ಟಿನೆಂಟ್ ಗೌರ್ನರ್ ಮೂಲಕ ಕೇಂದ್ರ ಸರ್ಕಾರದ ಅೀಧಿನದಲ್ಲಿದೆ. ಪೊಲೀಸರನ್ನು ಕೇಂದ್ರ ಗೃಹ ಸಚಿವಾಲಯ ನೇರವಾಗಿ ನಿಯಂತ್ರಿಸುತ್ತಿದೆ. ಹೀಗಾಗಿ ಭದ್ರತೆಯ ಲೋಪಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.

ನಿನ್ನೆಯ ಕಹಿ ಘಟನೆಯಿಂದ ಎಚ್ಚೆತ್ತ ಜಮ್ಮು-ಕಾಶ್ಮೀರ ಪೊಲೀಸರು ಅಗತ್ಯ ಭದ್ರತೆ ಒದಗಿಸಿ ಸುರಕ್ಷತೆಯ ಖಾತ್ರಿ ನೀಡುವುದಾಗಿ ಭರವಸೆ ನೀಡಿದ್ದರು. ಅದರ ಬಳಿಕ ಇಂದು ಮರು ಚಾಲನೆಗೊಂಡ ಯಾತ್ರೆಯಲ್ಲಿ ಮೆಹಬೂಬಾ ಮುಫ್ತಿ ಹೆಜ್ಜೆ ಹಾಕಿದರು. ಈ ಮೂಲಕ ಸ್ಥಳೀಯವಾದ ಎರಡು ಪಕ್ಷಗಳು ರಾಹುಲ್‍ಗಾಂಧಿ ಯಾತ್ರೆಯಲ್ಲಿ ತೊಡಗಿಸಿಕೊಂಡಂತಾಗಿದೆ. ಜೊತೆಗೆ ಅಪಾರ ಸಂಖ್ಯೆಯಲ್ಲಿ ಸ್ಥಳೀಯರು, ಕಾಂಗ್ರೆಸಿಗರು ಪಾದಯಾತ್ರೆಗೆ ಜೊತೆಗೂಡಿದ್ದಾರೆ.

ಬಿಹಾರದಲ್ಲಿ ಸರಸ್ವತಿ ಮೆರವಣಿಗೆಯಲ್ಲಿ ಗುಂಡಿನ ದಾಳಿ, ಒಬ್ಬ ಸಾವು

ಜಮ್ಮು-ಕಾಶ್ಮೀರದ ಕಾಂಗ್ರೆಸ್ ನಾಯಕ ಗುಲಾಮ್ ಅಹ್ಮದ್‍ಮಿರ್ ಪುಲ್ವಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆಯ ಘಟನೆ ಬಗ್ಗೆ ವಿವರಿಸಿದ್ದಾರೆ. ಸಾವಿರಾರು ಜನ ನಿನ್ನೆ ಯಾತ್ರೆಗೆ ಸೇರಲು ಬಯಸಿದ್ದರು. ಆ ವೇಳೆ ಭದ್ರತೆಯ ಅವ್ಯವಸ್ಥೆಗಳಾಗಿವೆ. ಆದರೆ ಸುರಂಗದ ಇನ್ನೊಂದು ಬದಿಯಿಂದ ಜನರು ಬಂದಿದ್ದರು ಎಂಬುದು ಸತ್ಯಕ್ಕೆ ದೂರವಾದ ಹೇಳಿಕೆ. ಆ ಸುರಂಗ 9 ಕಿಮೀ ಉದ್ದವಾಗಿದೆ. ಅಲ್ಲಿಂದ ಜನ ನುಗ್ಗಿ ಬರುವುದು ಸುಲಭವಲ್ಲ ಎಂದರು.

ಬಳಿಕ ರಾಹುಲ್‍ಗಾಂಧಿ ಗಣ್ಯರ ಭದ್ರತಾವೇಗದಲ್ಲಿ ಈ ಭಾಗಕ್ಕೆ ಬಂದರು. ಅಷ್ಟು ವೇಗದಲ್ಲಿ ಅವರನ್ನು ಹಿಂಬಾಲಿಸುವುದು ಸುಲಭವಾಗಿರಲಿಲ್ಲ. ಇಂದು ದಕ್ಷಿಣ ಕಾಶ್ಮೀರ ಮತ್ತು ದೂರೂರು ಕ್ಷೇತ್ರದ ಸ್ಥಳೀಯರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಭದ್ರತೆ ವ್ಯಾಪಕವಾಗಿದೆ. ಯಾತ್ರೆಯಲ್ಲಿ ಭಾಗವಹಿಸುವವರಿಗೆ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡುವುದಾಗಿ ಹೇಳಿದರು.

Mehbooba Mufti, Joins, Rahul Gandhi, Bharat Jodo Yatra,

Articles You Might Like

Share This Article