ಬೆಂಗಳೂರು,ಮಾ.2- ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಇಂದು ಮೂರನೆ ದಿನಕ್ಕೆ ಕಾಲಿಟ್ಟಿದ್ದು, ನಗರದ 10ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗಲಿದೆ. ಬೆಳಗ್ಗೆ ಬಿಟಿಎಂ ಲೇಔಟ್ನ ಒಂದನೇ ಹಂತದ ಹಾಫ್ಕಾಮ್ಸ್ ಜಂಕ್ಷನ್ನಿಂದ ಶುರುವಾದ ಪಾದಯಾತ್ರೆ, ಗಂಗೋತ್ರಿ ಸರ್ಕಲ್, ಮಾರುತಿನಗರ ಮುಖ್ಯರಸ್ತೆ, ಹೊಸೂರು ಮುಖ್ಯರಸ್ತೆ, ಸರ್ಜಾಪುರ ಜಂಕ್ಷನ್,
ಮಡಿವಾಳ ಚೆಕ್ಪೋಸ್ಟ್, ಪೋರಂ ಮಾಲ್, ಕೋರಮಂಗಲದ 20ನೇ ಮುಖ್ಯರಸ್ತೆ, 80ಅಡಿ ರಸ್ತೆ, ಮೈಕ್ರೋ ಲ್ಯಾಂಡ್ ಜಂಕ್ಷನ್, ಮಂಗಳ ಕಲ್ಯಾಣ ಮಂಟಪ, ಗಣಪತಿ ದೇವಸ್ಥಾನ, ಬೇತನಿ ಸ್ಕೂಲ್ ಜಂಕ್ಷನ್, ಕೋರಮಂಗಲ ಪೋಲೀಸ್ ಠಾಣೆ, ಎನ್ಜಿವಿ ಬ್ಯಾಕ್ ಗೇಟ್ ಜಂಕ್ಷನ್, ಪಾಸ್ಪೋರ್ಟ್ ಆಫೀಸ್, ಎನ್ಜಿವಿ ಮೈನ್ ಗೇಟ್, ವಿವೇಕನಗರ ಮೋರಿ, ವಿವೇಕನಗರ ಜಂಕ್ಷನ್, ಬಜಾರ್ ಸ್ಟ್ರೀಟ್, ಇನ್ಪ್ಯಾಂಟ್ ಜೀಸಸ್ ಚರ್ಚ್, ಮೆಕ್ಕಾ ಮಸೀದಿ ಬಜಾರ್ ಸ್ಟ್ರೀಟ್, ಜೆಸ್ಮಾ ಭವನ್ವರೆಗೂ ಆಗಮಿಸಲಿದ್ದು, ಅಲ್ಲಿ ಮಧ್ಯಾಹ್ನ ವಿಶ್ರಾಂತಿ ಪಡೆಯಲಿದೆ.
ಸಂಜೆ ಬಳಿಕ ಖಾನ್ಬಹುದೂರ್ ಅಬ್ದುಲ್ ರೆಹಮಾನ್ ರಸ್ತೆಯಿಂದ ಅಂಬೇಡ್ಕರ್ ಪ್ರತಿಮೆ, ಪಾಮ್ಗ್ರೌ ರಸ್ತೆಯಲ್ಲಿ ಬಲ ತಿರುವು ಪಡೆದು, ಹ್ಯಾಸ್ಮ್ಯಾಟ್ ಜಂಕ್ಷನ್, ಆರ್ಎಂ ರಸ್ತೆಯಲ್ಲಿ ಎಡ ತಿರುವು ಪಡೆದು ಬೇಗಮ್ ಮಹಲ್ ಜಂಕ್ಷನ್, ಗುರುದ್ವಾರ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಗಂಗಾಧರ ಚೆಟ್ಟಿ ರಸ್ತೆ, ತಿರುವಳ್ಳುವರ್ ಜಂಕ್ಷನ್, ಅಣ್ಣಸ್ವಾಮಿ ಮೊದಲಿಯರ್ ರಸ್ತೆ,
ವಾರ್ಮೆಮೋರಿಯಲ್ ಜಂಕ್ಷನ್, ಸೆಂಟ್ಜಾನ್ ರಸ್ತೆ, ನಾಗಾ ಜಂಕ್ಷನ್, ಥಾಮಸ್ ಕೆಫೆ, ಕೋಲ್ಸ್ ಪಾರ್ಕ್, ಹೆನ್ಸ್ ಜಂಕ್ಷನ್, ಎಚ್ ಕ್ಯಾಂಪ್ ಜಂಕ್ಷನ್, ನಂದಿದುರ್ಗ ರಸ್ತೆ ಮೂಲಕ ಜಯಮಹಲ್ ರಸ್ತೆ, ಮೇಕ್ರಿ ಸರ್ಕಲ್ ಮಾರ್ಗವಾಗಿ ಅರಮನೆ ಮೈದಾನಕ್ಕೆ ತಲುಪಲಿದೆ.
ನಾಳೆ ಅರಮನೆ ಮೈದಾನದಿಂದ ಪಾದಯಾತ್ರೆ ಆರಂಭಗೊಂಡು ಮಲ್ಲೇಶ್ವರಂ, ಸಂಗೊಳ್ಳಿ ರಾಯಣ್ಣ ಜಂಕ್ಷನ್, ಕಾಟನ್ಪೇಟೆ, ರಾಯನ್ ಸರ್ಕಲ್, ಚಾಮರಾಜಪೇಟೆ ಮೂಲಕ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ತಲುಪಲಿದೆ.
