ನಟಿ ಸಂಜನಾಗೆ ಅಸಭ್ಯ ಮೆಸೇಜ್ ಕಳುಹಿಸುತ್ತಿದ್ದ ಆ್ಯಡಮ್ ಅರೆಸ್ಟ್

Social Share

ಬೆಂಗಳೂರು,ಮಾ.4- ನಟಿ ಸಂಜನಾ ಗೆಲ್ರಾನಿ ಅವರ ವಾಟ್ಸಪ್‍ಗೆ ಅಸಭ್ಯ ಮೆಸೇಜ್ ಕಳುಹಿಸುತ್ತಿದ್ದ ಆರೋಪಿ ಆ್ಯಡಮ್ ಬಿದ್ದಪ್ಪನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖ್ಯಾತ ಫ್ಯಾಷನ್ ಡಿಸೈನರ್, ಕೊರಿಯೋಗ್ರಾಫರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಮ್ ಬಿದ್ದಪ್ಪ ಬಂಧಿತ ಆರೋಪಿ.
ಆ್ಯಡಮ್ ಬಿದ್ದಪ್ಪ ಮತ್ತ್ತು ಸಂಜನಾ ಹಲವು ದಿನಗಳಿಂದ ಸ್ನೇಹಿತರಾಗಿದ್ದರು. ಆದರೆ ಕೆಲವು ದಿನಗಳಿಂದ ಸಂಜನಾ ಅವರ ಮೊಬೈಲ್‍ಗೆ ಅಸಭ್ಯ ಮೆಸೇಜ್ ಕಳುಹಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಆ್ಯಡಮ್ ಬಿದ್ದಪ್ಪ ಸಂಜನಾ ಅವರ ಮೊಬೈಲ್‍ಗೆ ಅಸಭ್ಯ ಮೆಸೇಜ್ ಕಳುಹಿಸಿದ್ದು, ಈ ಸಂಬಂಧ ಸಂಜನಾ ಇಂದಿರಾನಗರ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ್ಯಡಮ್ ಬಿದ್ದಪ್ಪನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈತ ರಾತ್ರಿ 10 ರಿಂದ 12ರ ವರೆಗೆ ಮೆಸೇಜ್ ಕಳುಹಿಸಿದ್ದಾರೆ ಎಂದು ಸಂಜನಾ ದೂರಿನಲ್ಲಿ ತಿಳಿಸಿದ್ದಾರೆ.

Articles You Might Like

Share This Article