ಸ್ಯಾನ್ ಫ್ರಾನ್ಸಿಸ್ಕೋ,ಡಿ.24- ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಫೆಸ್ಬುಕ್ನ ಪೋಷಕ ಸಂಸ್ಥೆ ಮೇಟಾ, ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಚುನಾವಣಾ ಪ್ರಚಾರದ ಸಂಸ್ಥೆಯೊಂದಕ್ಕೆ ನೀಡಿದ ವಿವಾದಿತ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಲು 725 ಮಿಲಿಯನ್ ಪಾವತಿಸಲು ಒಪ್ಪಿಕೊಂಡಿದೆ.
2016ರಲ್ಲಿ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ವೇಳೆ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ರನ್ನು ಬೆಂಬಲಿಸುವ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡ ಆರೋಪವನ್ನು ಮೇಟಾ ಹೊತ್ತುಕೊಂಡಿದೆ.
ಫೇಸ್ಬುಕ್ ಮತ್ತು ಇನ್ಸಟಾಗ್ರಾಮ್ ಸಾಮಾಜಿಕ ಮಾಧ್ಯಮಗಳ ಪೋಷಕ ಸಂಸ್ಥೆಯಾಗಿರುವ ಮೇಟಾ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ದಾಖಲೆಗಳು ಗಂಭೀರವಾಗಿವೆ. ಅವುಗಳು ಇನ್ನೂ ಸ್ಯಾನ್ಪ್ರಾನ್ಸಿಕೋ ಒಕ್ಕೂಟ ನ್ಯಾಯಾಲಯದಿಂದ ಅಂಗೀಕಾರಗೊಳ್ಳಬೇಕಿದೆ.
ಟ್ರಂಪ್ ರಾಜಕೀಯ ತಂತ್ರಗಾರ ಸ್ಟೀವ್ ಬ್ಯಾನನ್ ಅವರೊಂದಿಗೆ ಸಂಬಂಧ ಹೊಂದಿರುವ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ಮೇಟಾ ತನ್ನ 87 ಮಿಲಿಯನ್ ಬಳಕೆದಾರರ ವೈಯಕ್ತಿಕ ಮಾಹಿತಿ ಪಡೆಯಲು ಅವಕಾಶ ಮಾಡಿಕೊಟ್ಟಿತ್ತು. ಇದು 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಲ್ಲದೆ, ಟ್ರಂಪ್ ಅಮೆರಿಕಾದ 45 ನೇ ಅಧ್ಯಕ್ಷರಾಗಿ ಆಯ್ಕೆಯಾಗಲು ನೆರವಾಯಿತು ಎಂಬ ಆರೋಪಗಳಿವೆ.
ದೆಹಲಿ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ, ರಾಹುಲ್ ಜೊತೆ ಹೆಜ್ಜೆ ಹಾಕಿದ ಸೋನಿಯಾ, ಪ್ರಿಯಾಂಕಾ
ವಿಶ್ವಾದ್ಯಂತ 200 ಕೋಟಿ ಬಳಕೆದಾರರನ್ನು ಹೊಂದಿರುವ ಫೆಸ್ಬುಕ್, ಇನ್ಸಟಾಗ್ರಾಮ್ ವಿರುದ್ಧ ಆಗ ಭಾರೀ ಕೋಲಾಹಲ ವ್ಯಕ್ತವಾಗಿತ್ತು. ಟ್ರಂಪ್ ಅವರ ರಾಜಕೀಯ ಎದುರಾಳಿಗಳು ಮೇಟಾ ವಿರುದ್ಧ ಸಮರ ಸಾರಿದರು. ಕೆಲವರು ಮೇಟಾ ಒಡೆತನದ ಸಾಮಾಜಿ ಮಾಧ್ಯಮಗಳನ್ನು ಬಳಕೆಯಿಂದ ಹೊರಗುಳಿಯುವಂತೆ ಕರೆ ನೀಡಿದರು.
ಅದರ ಪರಿಣಾಮ ಫೆಸ್ಬುಕ್ನ ಪ್ರತಿಸ್ರ್ಪಯಾಗಿದ್ದ ಟಿಕ್ಟಾಕ್ನ ಸದಸ್ಯತ್ವ ಹೆಚ್ಚಾಗಿತ್ತು. ಅಮೆರಿಕಾ ಮತ್ತು ಕೆನಾಡದಲ್ಲೇ 200 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಮೇಟಾಗೆ ಭಾರೀ ಹಿನ್ನೆಡೆಯೂ ಆಗಿತ್ತು.
ಕಾನೂನು ಸಂಘರ್ಷದಲ್ಲಿ ಗೌಪ್ಯತೆ ಉಲ್ಲಂಘನೆಯಾಗಿರುವುದು ಸಾಬೀತಾಗಿತ್ತು. ಕಳೆದ ಆಗಸ್ಟ್ನಲ್ಲಿ ಎರಡು ಬದಿಯಲ್ಲೂ ತಾತ್ಕಾಲಿಕ ಇತ್ಯರ್ಥಕ್ಕೆ ಸಮ್ಮತಿಸಲಾಗಿತ್ತು. ಕಳೆದ ಸೆಪ್ಟಂಬರ್ 20ರವರೆಗೂ ಗಡುವು ನಿಗದಿ ಪಡಿಸಲಾಗಿತ್ತು.
ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಮತ್ತು ಅವರ ದೀರ್ಘಾವಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶೆರಿಲ್ ಸ್ಯಾಂಡ್ಬರ್ಗ್ ಅವರು ಠೇವಣಿಗಳನ್ನು ಸಲ್ಲಿಸಲು ಒಪ್ಪಿದ್ದರು. ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್ ಮೂಲದ ಕಂಪನಿಯು ತನ್ನ ಸಮುದಾಯ ಮತ್ತು ಷೇರುದಾರರ ಹಿತದೃಷ್ಟಿಯಿಂದ ಇತ್ಯರ್ಥವನ್ನು ಜಾರಿಗೊಳಿಸುವುದಾಗಿ ತಿಳಿಸಿದೆ.
ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೆ ಕೊರೋನ ಕರಿನೆರಳು
ಕಳೆದ ಮೂರು ವರ್ಷಗಳಲ್ಲಿ ನಾವು ಗೌಪ್ಯತೆಗೆ ಸಂಬಂಧಿಸಿದ ವಿಧಾನವನ್ನು ಪರಿಷ್ಕರಿಸಿದ್ದೇವೆ. ಸಮಗ್ರ ಗೌಪ್ಯತೆ ಕಾರ್ಯಕ್ರಮವನ್ನು ಜಜಾರಿಗೊಳಿಸಿದ್ದೇವೆ ಎಂದು ವಕ್ತಾರ ದಿನಾ ಎಲ್-ಕಸ್ಸಾಬಿ ಲೂಸ್ ಸ್ಪಷ್ಟಪಡಿಸಿದ್ದಾರೆ.
Meta, pay $725 million, settlement, Cambridge, Analytica, scandal,