ಬೆಂಗಳೂರು,ಜ.17-ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಪ್ರಾಣ ಕಳೆದುಕೊಳ್ಳಲು ಎಂಜಿನಿಯರ್ಗಳ ನಿರ್ಲಕ್ಷ್ಯವೇ ಕಾರಣ ಎನ್ನುವುದು ದೃಢಪಟ್ಟಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಚಂದ್ರ ಕಿಶನ್ ಸ್ಪಷ್ಟಪಡಿಸಿದ್ದಾರೆ.
ಅವಘಡ ಕುರಿತಂತೆ ನಾವು ಈಗಾಗಲೇ ಶೇ.80 ರಷ್ಟು ತಾಂತ್ರಿಕ ತನಿಖೆ ನಡೆಸಿದ್ದೇವೆ. ನಮ್ಮ ತನಿಖೆಯಲ್ಲಿ ಎಂಜಿನಿಯರ್ಗಳ ವೈಫಲ್ಯವೆ ಪ್ರಮುಖ ಕಾರಣ ಎನ್ನುವುದು ತಿಳಿದುಬಂದಿದೆ ಎಂದರು. ಇನ್ನು ಮೂರ್ನಾಲ್ಕು ದಿನಗಳಲ್ಲಿ ಐಐಎಸ್ಸಿ ತಜ್ಞರಿಂದ ನಡೆಸಲಾಗಿರುವ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿಯೂ ಅವರು ವಿವರಿಸಿದರು.
ನಾಳೆಯಿಂದ 23ರವರೆಗೆ ಸುತ್ತೂರು ಜಾತ್ರಾ ಮಹೋತ್ಸವ
ಮೆಟ್ರೋ ಪಿಲ್ಲರ್ ಕುಸಿಯಲು ಅತಿ ಎತ್ತರಕ್ಕೆ ಕಂಬಿ ಕಟ್ಟಿರುವುದೇ ಕಾರಣ. ನಮ್ಮ ತಂಡದ ತಜ್ಞರು ಸ್ಪಾಟ್ ವಿಧಿಸಿಟ್ ಮಾಡಿ ಎಂಜಿನಿಯರ್ಸ್ಗಳಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಮಣ್ಣು ,ಕಂಬಿ ಸಲಕರಣೆ ಪರೀಕ್ಷೆ ನಡೆದಿದೆ. ಕಾಮಗಾರಿಯಲ್ಲಿ ಗುಣಮಟ್ಟದ ವಸ್ತುಗಳ ಬಳಕೆ ಆಗಿದೆ ಆದರೆ, 18 ಅಡಿ ಎತ್ತರ ಕಂಬಿ ಕಟ್ಟಿರೋದು ಅನಾಹುತಕ್ಕೆ ಕಾರಣವಾಗಿರುವುದು ಸಾಬೀತಾಗಿದೆ ಎಂದು ಹೇಳಿದರು.
ಎತ್ತರದಲ್ಲಿ ಕಂಬಿ ಕಟ್ಟಿದ್ದರೂ ಅದಕ್ಕೆ ಸರಿಯಾದ ಸಪೋರ್ಟ್ ನೀಡುವಲ್ಲಿ ಎಂಜಿನಿಯರ್ಸ್ಗಳು ವಿಫಲರಾಗಿರುವುದೇ ದುರಂತಕ್ಕೆ ಮೂಲ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
metro pillar, collapse, engineers, negligence,