ಬೆಂಗಳೂರು,ಜ.20- ಮೆಟ್ರೋ ಪಿಲ್ಲರ್ ಬಿದ್ದು ತಾಯಿ-ಮಗು ಸಾವು ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಪೊಲೀಸರು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ್ದಾರೆ.
ಇದರ ಜೊತೆಗೆ ನಮ್ಮ ಮೆಟ್ರೋ ಸಂಸ್ಥೆಯ 15 ಅಧಿಕಾರಿಗಳಿಗೂ ನೋಟೀಸ್ ಜಾರಿ ಮಾಡಲಾಗಿದೆ. ಆದರೆ, ಅಂಜುಮ್ ಪರ್ವೇಜ್ ಅವರು ಅನಾರೋಗ್ಯದ ನೆಪದಿಂದ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಗೋವಿಂದಪುರ ಪೊಲೀಸರು ನೋಟೀಸ್ ನೀಡಿದ್ದರು ಆದರೆ, ಅನಾರೋಗ್ಯದ ನೆಪ ಹೇಳಿರುವ ಪರ್ವೇಜ್ ಅವರು ವಿಚಾರಣೆಗೆ ಕೆಲ ದಿನಗಳ ಕಾಲಾವಕಾಶ ಕೇಳಿದ್ದಾರೆ.
ಘಟನೆ ಕುರಿತಂತೆ ಐಐಎಸ್ಸಿ, ಎಫ್ಎಸ್ಎಲ್ ಹಾಗೂ ಸಿವಿಲ್ ತಜ್ಞರು ನೀಡಿರುವ ವರದಿಯನ್ನಾಧರಿಸಿ ಗೋವಿಂದಪುರ ಪೊಲೀಸರು ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ನೋಟೀಸ್ ಜಾರಿ ವಿಚಾರಣೆ ತೀವ್ರಗೊಳಿಸಿದ್ದಾರೆ.
BIG NEWS : ಶೂಟಿಂಗ್ ವೇಳೆ ತಮಿಳು ನಟ ವಿಜಯ್ ಅಂತೋನಿಗೆ ತೀವ್ರ ಗಾಯ
ಮಾತ್ರವಲ್ಲ ಸ್ವತಃ ಆಖಾಡಕ್ಕೆ ಇಳಿದಿರುವ ಪೊಲೀಸರು ಹತ್ತು ಮೀಟರ್ಗೂ ಹೆಚ್ಚು ಎತ್ತರವಿರುವ ಪಿಲ್ಲರ್ಗಳ ಕಂಬಿಗಳನ್ನು ಕಟ್ ಮಾಡುತ್ತಿದ್ದಾರೆ. ಹಂತ ಹಂತವಾಗಿ ಕಾಂಕ್ರೀಟ್ ಹಾಕಿದಮೇಲೆ ಸರಳುಗಳನ್ನ ಹಾಕುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ನಾಳೆ ಐಐಎಸ್ಸಿ ವರದಿ: ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿರುವ ಪ್ರಕರಣದ ನಿಖರ ಕಾರಣ ಕುರಿತಂತೆ ತನಿಖೆ ನಡೆಸಿರುವ ಐಐಎಸ್ಸಿ ತಜ್ಞರು ನಾಳೆ ಬಿಎಂಆರ್ಸಿಎಲ್ಗೆ ಅಂತಿಮ ವರದಿ ಸಲ್ಲಿಸಲಿದ್ದಾರೆ.
ಘಟನಾ ಸ್ಥಳದಿಂದ ಕಂಬಿ, ಮರಳು, ಸಿಮೆಂಟ್ ಮತ್ತು ಕ್ವಾಲಿಟಿ ರಿಪೋರ್ಟ್ ಪಡೆದುಕೊಂಡಿದ್ದ ಐಐಎಸ್ಸಿ ತಜ್ಞರು ಈಗಾಗಲೇ ತಾಂತ್ರಿಕ ತನಿಖೆ ನಡೆಸಿ ವರದಿ ಸಿದ್ಧಪಡಿಸಿದ್ದು ಅದರಲ್ಲಿ ಎಂಜಿನಿಯರ್ಗಳ ವೈಫಲ್ಯಗಳನ್ನು ತೆರೆದಿಟ್ಟಿದ್ದಾರೆ ಎನ್ನಲಾಗಿದೆ.
Metro, pillar, collapse, MD, Anjum Parvez, Police notice,