ಮಧ್ಯವಯಸ್ಕರಿಗೆ ಮಾರಿಯಾಗುತ್ತಿದೆ ಕಿಲ್ಲರ್ ಕೊರೊನಾ

Social Share

ಬೆಂಗಳೂರು,ಜ.13-ನೀವು ಮಧ್ಯ ವಯಸ್ಕರೆ ಹಾಗಾದರೆ ಇರಲಿ ಎಚ್ಚರ. ಯಾಕೇ ಅಂತೀರಾ…ಕಳೆದ ಹತ್ತು ದಿನಗಳಿಂದ ಕೊರೊನಾ ಹೆಮ್ಮಾರಿ 50 ವರ್ಷ ದಾಟಿದವರ ಮೇಲೆ ಹೆಚ್ಚು ದಾಳಿ ನಡೆಸಿ ಸಾವು-ನೋವಿಗೆ ಕಾರಣವಾಗುತ್ತಿರುವುದು ದಿಗಿಲು ಹುಟ್ಟಿಸಿದೆ. ಕಳೆದ 12 ದಿನಗಳಲ್ಲಿ ರಾಜ್ಯದಲ್ಲಿ 55 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. 55 ಮಂದಿಯಲ್ಲಿ 48 ಮಂದಿ 50 ವರ್ಷ ದಾಟಿದವರು ಎಂಬುದು ದಾಖಲೆಗಳಿಂದ ಬಹಿರಂಗಗೊಂಡಿದೆ.
ಕೊರೊನಾ ಮಹಾಮಾರಿಗೆ 15 ವರ್ಷದ ಬಾಲಕ ಹಾಗೂ 40 ವರ್ಷ ಮೇಲ್ಪಟ್ಟ ಆರು ಜನರು ಬಿಟ್ಟರೆ ಉಳಿದವರೆಲ್ಲಾ 50 ವರ್ಷ ದಾಟಿದವರಾಗಿದ್ದಾರೆ. ಜನವರಿ ಒಂದರಂದು 45, 60, 60, 48 ಹಾಗೂ 66 ವರ್ಷದ ಐದು ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದರೆ, ಜ.2ರಂದು 55, 62, 74, 66, 51 ಹಾಗೂ 55 ವರ್ಷದ ಆರು ಮಂದಿ ಬಲಿಯಾಗಿದ್ದಾರೆ.
ಜ.3ರಂದು 76,84,69,78 ಹಾಗೂ 55 ವರ್ಷದ ಐದು ಮಂದಿ, ಜ.4ರಂದು 59, 64 ಹಾಗೂ 88 ವರ್ಷದ ಇಬ್ಬರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಜ.5 ರಂದು 15 ಹಾಗೂ 72 ವರ್ಷದ ಇಬ್ಬರು, ಜ.6ರಂದು 65 ವರ್ಷದ ಒಬ್ಬ ವ್ಯಕ್ತಿ, ಜ.7ರಂದು 55, 60, 70, 45 ವರ್ಷದ ನಾಲ್ವರು, ಜ.8ರಂದು 62, 82, 61, 40 ವರ್ಷದ ನಾಲ್ವರು, ಜ.9ರಂದು 83, 81, 77,50 ವರ್ಷದ ನಾಲ್ವರು, ಜ.10ರಂದು 53, 88, 79,77 ವರ್ಷದ 4 ಮಂದಿ, ಜ.11ರಂದು 82, 61,66,72,86 ವರ್ಷದ 5 ಮಂದಿ ಮೃತಪಟ್ಟಿದ್ದಾರೆ.
ನಿನ್ನೆ ಒಂದೇ ದಿನ ರಾಜ್ಯದಾದ್ಯಂತ 67, 30,40,84, 90, 53, 51, 49, 65 ಹಾಗೂ 75 ವರ್ಷದ 10 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ದಾಖಲೆಗಳನ್ನು ನೋಡಿದರೆ 50 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಮಹಾಮಾರಿ ಹೆಮ್ಮಾರಿಯಾಗಿ ಪರಿಣಮಿಸುತ್ತಿರುವುದು ಸಾಬೀತಾಗಿರುವುದರಿಂದ ಮಧ್ಯ ವಯಸ್ಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಅವಶ್ಯಕತೆ ಹೆಚ್ಚಾಗಿದೆ. ಅದರಲ್ಲೂ ಎರಡು ಡೋಸ್ ಲಸಿಕೆ ಹಾಕಿಸಿಕೊಂಡವರು 9 ತಿಂಗಳು ಕಳೆದಿದ್ದರೆ ಬೂಸ್ಟರ್ ಡೋಸ್ ಪಡೆದುಕೊಳ್ಳುವ ಮೂಲಕ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಬೇಕಿದೆ.

Articles You Might Like

Share This Article