ಗಸ್ತು ವೇಳೆ ಮಿಗ್-29ಕೆ ಯುದ್ಧ ವಿಮಾನದಲ್ಲಿ ತಾಂತ್ರಿಕ ದೋಷ

Social Share

ಪಣಜಿ, ಅ.12- ಗೋವಾದ ಕರಾವಳಿ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ಮಿಗ್-29ಕೆ ಯುದ್ಧ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ತಕ್ಷಣವೇ ವಾಯು ನೆಲೆಯಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ.

ಪೈಲೆಟ್ ಅವರನ್ನು ಸುರಕ್ಷಿತವಾಗಿ ವಿಮಾನದಿಂದ ಹೊರ ತೆಗೆಯಲಾಗಿದೆ. ಘಟನೆಯ ಬಗ್ಗೆ ತನಿಖಾ ಮಂಡಳಿ ರಚನೆಗೆ ಆದೇಶಿಸಲಾಗಿದೆ. ಮಿಗ್ 29ಕೆ ವಿಮಾನ ಗೋವಾ ಸಮುದ್ರ ಮಾರ್ಗದಲ್ಲಿ ನಿಯಮಿತ ಸುತ್ತು ಹಾಕುವಾಗ ತಾಂತ್ರಿಕ ದೋಷ ಕಂಡು ಬಂದಿದೆ. ತಕ್ಷಣವೇ ಕೆಳಗಿಳಿದ ವಿಮಾನದ ಕ್ಷೀಪ್ರ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ರಷ್ಯಾ ನಿರ್ಮಿತ ಮಿಗ್ 29ಕೆ ಯುದ್ಧ ವಿಮಾನ ಎಲ್ಲ ಹವಾಮಾನದಲ್ಲೂ ಕಾರ್ಯಾಚರಣೆ ನಡೆಸುವ ಬಹುಪಾತ್ರ ನಿರ್ವಹಣೆ ಮಾಡುವ ಸಾಮಥ್ರ್ಯ ಹೊಂದಿದೆ. ರಷ್ಯನ್ ಏರೋಸ್ಪೇಸ್ ಕಂಪೆನಿ ಮೈಕೊಯನ್ (ಮಿಗ್)ನಿಂದ ಭಾರತೀಯ ನೌಕಾ ದಳ ದಶಕಗಳ ಹಿಂದೆ 45 ವಿಮಾನಗಳನ್ನು ಎರಡು ಬಿಲಿಯನ್ ಡಾಲರ್ ವೆಚ್ಚದಲ್ಲಿ ಖರೀದಿ ಮಾಡಿದೆ. ಭಾರತದಲ್ಲಿ ಐಎನ್‍ಎಸ್ ವಿಕ್ರಮಾದಿತ್ಯ ಹೆಸರಿನಲ್ಲಿ ಇವು ಕಾರ್ಯಾಚರಿಸುತ್ತಿವೆ.

2019ರ ನವೆಂಬರ್‍ನಲ್ಲಿ ದಕ್ಷಿಣ ಗೋವಾದಲ್ಲಿ ಎರಡು ಸೀಟುಗಲ ಮಿಗ್-29ಕೆ ಯುದ್ಧ ವಿಮಾನ ಅಪಘಾತಕ್ಕೀಡಾಗಿತ್ತು. ಪೈಲೆಟ್ ಅನ್ನು ಸುರಕ್ಷಿತವಾಗಿ ಹೊರ ಕರೆತರಲಾಗಿತ್ತು. 2020ರ ಫೆಬ್ರವರಿ 23ರಂದು ಗೋವಾ ಕರಾವಳಿಯ ಅರಬಿಯನ್ ಸಮುದ್ರದ ಮೇಲೆ ಮಿಗ್ 29 ಕೆ ಅಪಘಾತಕ್ಕೀಡಾಗಿತ್ತು. ಆ ಘಟನೆಯಲ್ಲೂ ವಿಮಾನದಿಂದ ಪೈಲೆಟ್‍ರನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿತ್ತು.

Articles You Might Like

Share This Article