ಶ್ರೀನಗರ, ಅ 12 -ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲಾಯಲ್ಲಿ ಬಿಹಾರದ ಮೂಲದ ವಲಸೆ ಕಾರ್ಮಿಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.
ಅಜಾಶ್ ವಲಯದಲ್ಲಿ ಕಳೆದ ಮಧ್ಯರಾತ್ರಿಯಲ್ಲಿ ಮನೆಗೆ ನುಗ್ಗಿದ ಭಯೋತ್ಪಾದಕರು ಮೊಹಮ್ಮದ್ ಅಮ್ರೇಜ್‍ನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಈತ ಬಿಹಾರದ ಮಾಧೇಪುರ ಪ್ರದೇಶದ ಸೋದಾನರಾ ಸುಂಬಲನ ನಿವಾಸಿ ಎನ್ನಲಾಗಿದ್ದು ಕಾಶ್ಮೀರದಲ್ಲಿ ಆತ ಕೆಲಸಮಾಡುತ್ತಿದ್ದ.
ಮನೆಯಲ್ಲಿ ಮಲಗಿದ್ದಾಗ ಬಾಗಿಲು ತಟ್ಟಿ ನಂತರ ಒಳಗೆ ನುಗ್ಗಿ ಗುಂಡುಹಾರಿಸಿ ಭಯೋತ್ಪಾದಕರು ಅಲ್ಲಿಂದ ಪರಾರಿಯಾಗಿದ್ದಾರೆ.
ಮತ್ತೊಬ್ಬನ ಮೇಲೂ ಗುಂಡು ಹಾರಿಸಲಾಗಿದ್ದು ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.