ಆರೋಗ್ಯಯುತ ಜೀವನಕ್ಕೆ ಯೋಗಾಸನ ರಹದಾರಿ: ಸಚಿವ ಅಶೋಕ್

Social Share

ಬೆಂಗಳೂರು ಜ.22- ರಕ್ತದೊತ್ತಡ, ಮಧುಮೇಹ ನಿಯಂತ್ರಣ ಸೇರಿದಂತೆ ಆರೋಗ್ಯಯುತ ಜೀವನ ನಡೆಸಲು ಯೋಗಾಭ್ಯಾಸವು ರಹದಾರಿಯಾಗಿದೆ. ಸದೃಢ ಮನಸ್ಸು ಮತ್ತು ಆರೋಗ್ಯಕ್ಕೆ ಯೋಗಾಸನಗಳು ಪೂರಕ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಹೊಸಕೋಟೆ ತಾಲ್ಲೂಕಿನ ಸಹಜವೇ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜಿನಲ್ಲಿ ನಿನ್ನೆ ರಾತ್ರಿ ವಾಸ್ತವ್ಯ ಮಾಡಿದ್ದ ಸಚಿವರು, ಇಂದು ಬೆಳಿಗ್ಗೆ ವಿದ್ಯಾರ್ಥಿಗಳ ಯೋಗ ಶಿಬಿರದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಸತತ ಯೋಗಾಭ್ಯಾಸದಿಂದ ಒತ್ತಡ ರಹಿತವಾದ ಆರೋಗ್ಯಯುತ ಜೀವನ ನಿರ್ವಹಿಸಬಹುದು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಯೋಗಾಸನಗಳಿಂದ ಏಕಾಗ್ರತೆ ಸಾಧ್ಯವಾಗುತ್ತದೆ ಎಂದರು. ನಾನು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕಬಡ್ಡಿ ಆಟಗಾರನಾಗಿದ್ದೆ. ಈವರೆಗೂ ತಮ್ಮ ಬಳಿ ರಕ್ತದೊತ್ತಡ, ಮಧುಮೇಹ ಸುಳಿದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಪ್ರತಿನಿತ್ಯ ಯೋಗಾಭ್ಯಾಸ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ವೇಗದ ಬೌಲರ್ ಉಮೇಶ್ ಯಾದವ್‍ಗೆ ಸ್ನೇಹಿತನಿಂದಲೇ ವಂಚನೆ

ಮೊರಾರ್ಜಿ ದೇಸಾಯಿ ವಸತಿ ಪ.ಪೂ.ಕಾಲೇಜು ಪ್ರಾಚಾರ್ಯ ಕಿರಣಕುಮಾರ್,ವಿದ್ಯಾರ್ಥಿಗಳಿಗೆ ಉಚಿತ ಯೋಗಾಭ್ಯಾಸ ತರಬೇತಿ ನೀಡುವ ಆನಂದ್ ಅವರಿಗೆ ಸಚಿವರು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ಸಸಿ ನೆಟ್ಟರು. ಪೌರಾಡಳಿತ ಸಚಿವ ಎನ್.ನಾಗರಾಜು(ಎಂಟಿಬಿ),ಜಿಲ್ಲಾಧಿಕಾರಿ ಆರ್.ಲತಾ ಮತ್ತಿತರರು ಇದ್ದರು.

ಪರಿಶಿಷ್ಠರ ಮನೆಯಲ್ಲಿ ಉಪ್ಪಿಟ್ಟು ಸವಿದ ಸಚಿವರು: ಜಡಿಗೇನಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರು ಇಂದು ಗ್ರಾಮದ ಪರಿಶಿಷ್ಟ ಜಾತಿಯ ಗಿರಿಜಮ್ಮ ಹಾಗೂ ಮುನಿಯಪ್ಪ ದಂಪತಿಗಳ ಮನೆಯಲ್ಲಿ ಉಪಹಾರ ಸೇವಿಸಿದರು.

ಅಮೆರಿಕ ಅಧ್ಯಕ್ಷ ಬಿಡೆನ್ ಮನೆಯಲ್ಲಿ ಎಫ್‍ಬಿಐ ಶೋಧ ದಾಖಲೆಗಳ ವಶ

ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಮನೆ ಮಾಲೀಕರು ಸಾಕಾಣೆ ಮಾಡಿರುವ ಕುರಿಮರಿಗಳನ್ನು ಎತ್ತಿ ಸಂತಸ ಪಟ್ಟರು. ಕುಟುಂಬದ ಸದಸ್ಯರು ತಯಾರಿಸಿದ್ದ ಕೇಸರಿಬಾತ್,ಉಪ್ಪಿಟ್ಟು,ಚಿತ್ರಾನ್ನ,ವಡೆ,ಚಟ್ನಿಯನ್ನು ಸವಿದರು. ಮನೆಯವರು ತೋರಿದ ಪ್ರೀತಿ ಹಾಗೂ ಶುಚಿ ರುಚಿಯಾದ ಉಪಹಾರ ಬಡಿಸಿದ್ದಕ್ಕೆ ತೃಪ್ತಿ ವ್ಯಕ್ತಪಡಿಸಿ,ಉಪಹಾರದ ರುಚಿಗೆ ಮನಸಾರೆ ಮೆಚ್ಚುಗೆ ಸೂಚಿಸಿದರು.

ಕುಟುಂಬದಲ್ಲಿರುವ ಸದಸ್ಯರ ಮಾಹಿತಿ ಪಡೆದ ಸಚಿವರು ಗ್ರಾಮದಲ್ಲಿ ಗುರುತಿಸಲಾಗಿರುವ ಸರ್ಕಾರಿ ನಿವೇಶನಗಳಲ್ಲಿ ಎರಡು ನಿವೇಶನಗಳನ್ನು ಒದಗಿಸಲು ಸೂಚಿಸಿದರು. ಉಪಹಾರದ ನಂತರ ಮನೆಯ ಆವರಣದಲ್ಲಿ ಕೆಲಕಾಲ ಕುಳಿತು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಚಿವರು ಸ್ಥಳೀಯ ಆಶಾ ಕಾರ್ಯಕರ್ತೆ ನಂಜಮ್ಮ ಅವರು ತಮ್ಮ ಪುತ್ರ ಭರತನ ಚಿಕಿತ್ಸೆಗೆ ನೆರವಾಗಲು ಕೋರಿದಾಗ,

ತಕ್ಷಣ ಸ್ಪಂದಿಸಿದ ಸಚಿವರು ಮಾರತ್ತಹಳ್ಳಿಯ ಶಂಕರ ಕಣ್ಣಿನ ಆಸ್ಪತ್ರೆಯ ತಜ್ಞವೈದ್ಯರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ,ಆಶಾ ಕಾರ್ಯಕರ್ತೆಯ ಮಗನ ಚಿಕಿತ್ಸೆಗೆ ಅಗತ್ಯ ಸಹಾಯ ನೀಡಲು ಸೂಚಿಸಿದರು. ಸಚಿವ ಎನ್.ನಾಗರಾಜು(ಎಂಟಿಬಿ),ಜಿಲ್ಲಾಧಿಕಾರಿ ಆರ್.ಲತಾ ಮತ್ತಿತರರು ಇದ್ದರು.

Minister, #Ashok, #jilladhikarinadehallikade, #Hosakote, #Taluk, #Jadigenahalli, #Village,

Articles You Might Like

Share This Article