ಸಿದ್ದು ಪಶ್ಚಾತ್ತಾಪದ ಮಾತು ಒಡೆದ ಹಾಲಿನಂತೆ : ಸಚಿವ ಅಶೋಕ್ ವ್ಯಂಗ್ಯ

Social Share

ಕಲಬುರಗಿ, ಆ.21- ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಏನೆಲ್ಲ ಮಾಡಬೇಕು ಅದನ್ನು ಮಾಡಿಬಿಟ್ಟಿದ್ದಾರೆ. ಕಡ್ಡಿ ಗೀರಿ ಅವರು ಹಚ್ಚಿರೋ ಬೆಂಕಿ ಹೊತ್ತಿ ಉರಿದು ಬೂದಿಯಾಗಿದೆ. ಬೂದಿಯಿಂದ ಮತ್ತೆ ಕಟ್ಟಿಗೆ ತಯಾರು ಮಾಡಲಾಗುತ್ತಾ? ಹೀಗಾಗಿ ಈಗ ಪಶ್ಚಾತ್ತಾಪದ ಮಾತು ಪ್ರಯೋಜನವಿಲ್ಲವೆಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಆಡಕಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಪಶ್ಚಾತ್ತಾಪದ ಮಾತುಗಳನ್ನಾಡಿದರೂ ಯಾವುದೇ ಲಿಂಗಾಯತರು ಇವರ ಮಾತನ್ನು ನಂಬುವುದಿಲ್ಲ. ನೂರಾರು ವರ್ಷಗಳಿಂದ ಧರ್ಮದ ವಿಚಾರದಲ್ಲಿ ಸಾಮರಸ್ಯ ಕಾಪಾಡಿಕೊಂಡು ಬಂದಂತಹ ನಾಡು ನಮ್ಮದು. ಸಿದ್ದರಾಮಯ್ಯ ಹಾಲಲ್ಲಿ ಹುಳಿ ಹಿಂಡಿದ್ದಾಗಿದೆ. ಹಾಲು ಒಡೆದು ಹೋಗಿದೆ. ಹೀಗಾಗಿ ಈಗ ಮತ್ತೆ ಒಡೆದ ಹಾಲಿನಿಂದ ಉತ್ತಮ ಹಾಲು ಮಾಡಲಾದೀತೆ? ಹಾಗಿದೆ ಸಿದ್ದರಾಮಯ್ಯನವರ ಪಶ್ಚಾತ್ತಾಪದ ಮಾತುಗಳು ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಹೇಳಿಕೊಳ್ಳುವಂತಹ ನಾಯಕತ್ವ ಇಲ್ಲ. ಹೀಗಾಗಿ ಈ ಚುನಾವಣೆಯಲ್ಲಿ ಪಕ್ಷ ಕಣಕ್ಕಿಳಿಯುವ ಅಭ್ಯರ್ಥಿಗಳು ದೊರಕದೆ ಕಂಗಾಲಾಗಲಿದೆ. ದೆಹಲಿಯಲ್ಲಿ ಬ್ಯಾಟರಿ ಹಚ್ಚಿ ಹುಡುಕಿದರೂ ಜನ ಸೆಳೆಯುವ ಮುಖಂಡರು ಆ ಪಕ್ಷದಲ್ಲಿ ಇಂದಿಗೂ ವಿದೇಶಿಗರೇ ಆ ಪಕ್ಷದ ಅಧ್ಯಕ್ಷರಾಗಿದ್ದಾರೆಂದು ಟೀಕಿಸಿದರು.

ವೀರ ಸಾವರ್ಕರ್ ಓರ್ವ ಸ್ವಾತಂತ್ರ್ಯ ಹೋರಾಟಗಾರ. ಗಣೇಶ ಪೆಂಡಾಲ್‍ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಫೋಟೋ ಹಾಕಿದರೆ ತಪ್ಪೇನು? ಖಾಸಗಿ ಸಮಾರಂಭ, ಗಣೇಶ ಪೂಜೆ ಇಲ್ಲಿ ಸಂಘಟನೆಗಳವರು ತಮ್ಮ ಆದರ್ಶ ದೇಶಭಕ್ತನ ಫೋಟೋ ಹಾಕಿದರೆ ತಪ್ಪೇನು ಎಂದು ಪ್ರಶ್ನಿಸಿದರು.

ಇದೇ ವೇಳೆ ಗೋಡ್ಸೆ ಫೋಟೋ ಹಾಕಿದರೆ ಯಾವುದೇ ಕ್ಷಮೆ ಇಲ್ಲ. ಇದು ಅಪರಾಧ. ಇದರಿಂದ ಗಾಂಜಿ ದೇಶಕ್ಕೆ ಅಪಮಾನವಾಗುತ್ತದೆ. ಹೀಗಾಗಿ ಯುವಕರು ಸಾವರ್ಕರ್ ಫೋಟೋ ಹಾಕಲು ಅಡ್ಡಿಯಿಲ್ಲ. ಸಿದ್ದರಾಮಯ್ಯ ಹಿಂದುಗಳ ಬಗ್ಗೆ, ಹಿಂದೂಧರ್ಮದವರ ಬಗ್ಗೆ ಸದಾಕಾಲ ಅವಹೇಳನಕಾರಿ ಮಾತನ್ನಾಡುತ್ತಿದ್ದಾರೆ. ಕೆಲವರು ಕೋಪದಲ್ಲಿ ಮೊಟ್ಟೆ ಎಸೆದು ಉತ್ತರಿಸಿದ್ದಾರೆ.

ಹಾಗಂತ ತಾವು ಮೊಟ್ಟೆ ಸಂಸ್ಕøತಿ ಪ್ರೋತ್ಸಾಹಿಸೋದಿಲ್ಲ, ಆದರೆ ಕೇವಲ ಒಂದು ಧರ್ಮದ ಬಗ್ಗೆ ಹೇಳಿಕೆ ಕೊಡುವುದು ಓಲೈಸುವುದು ಸರಿಯಲ್ಲ ಎಂದರು. ಸಂಘ ಪರಿವಾರದದಲ್ಲಿ ಆರ್‍ಎಸ್‍ಎಸ್ ದೇಶದ್ರೋಹಿ ಅಂತ ಹೇಳುತ್ತಾರೆ. ನಾನು ಸಹ ಅದೇ ಸಂಘಟನೆಯಿಂದ ಬಂದವ. ನಾನು ದೇಶದ್ರೋಹಿನಾ? ಸುಮ್ಮನೆ ಹೇಳಿಕೆ ನೀಡಿ ಗೊಂದಲ ಹುಟ್ಟುಹಾಕಬಾರದು. ಇದರ ಬಗ್ಗೆ ಕಾಂಗ್ರೆಸ್ಸಿಗರಿಗೆ ತಿಳುವಳಿಕೆ ಇರಲಿ ಎಂದರು.

Articles You Might Like

Share This Article