ಕೆಸರಲ್ಲಿ ಸಿಲುಕಿದ ಸಚಿವ ಬೈರತಿ ಬಸವರಾಜ ಕಾಲು

Social Share

ಚಿಕ್ಕಮಗಳೂರು, ಜು.17- ಮಳೆಯಿಂದ ಹಾನಿಗೊಂಡ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರ ಕಾಲು ಕೆಸರಿನಲ್ಲಿ ಸಿಲುಕಿಕೊಂಡು ಮಳೆ ಅನಾಹುತದಲ್ಲಿ ಸಂಕಷ್ಟ ಅನುಭವಿಸಿದ ಘಟನೆ ಮೂಡಿಗೆರೆಯಲ್ಲಿ ನಡೆದಿದೆ.

ಆಲ್ದೂರು ಸಮೀಪದ ಅರೆನೂರಿನ ಅತಿವೃಷ್ಟಿ ಪ್ರದೇಶಕ್ಕೆ ಭೇಟಿ ನೀಡಿ ಕಾಫಿ ತೋಟ ಕೊಚ್ಚಿ ಹೋಗಿದ್ದ ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಮಂಡಿವರೆಗೂ ಕೆಸರಿನಲ್ಲಿ ಕಾಲು ಸಿಲುಕಿಕೊಂಡಿದ್ದು, ಎಚ್ಚೆತ್ತ ಗನ್‍ಮ್ಯಾನ್ ಹಾಗೂ ಸ್ಥಳೀಯರು ಸಚಿವರನ್ನು ಮೇಲೆತ್ತಿದರು. ಮಳೆಯಿಂದ ಆಗಿರುವ ಅನಾಹುತದ ಬಗ್ಗೆ ಸಚಿವರು ಖುದ್ದು ವೀಕ್ಷಿಸಿ ಸರ್ಕಾರದಿಂದ ಸಕಲ ನೆರವು ನೀಡುವ ಭರವಸೆಯನ್ನು ಸ್ಥಳೀಯರಿಗೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಸಿಇಒ ಪ್ರಭು, ಎಸ್‍ಪಿ ಅಕ್ಷಯï, ಎಸಿ ನಾಗರಾಜ್ ಮುಂತಾದವರು ಜೊತೆಯಲ್ಲಿದ್ದರು.

Articles You Might Like

Share This Article