ಸಚಿವ ಬೈರತಿ ಬಸವರಾಜ್ ಕೆಲಸಕ್ಕೆ ಸಿಎಂ ಶ್ಲಾಘನೆ

Social Share

ಕೆ. ಆರ್ ಪುರ , ಜ.31- ಸಚಿವ ಬೈರತಿ ಬಸವರಾಜ ಅವರ ಸೇವಾ ಕಾರ್ಯವನ್ನು ಹೃದಯ ಪೂರ್ವಕವಾಗಿ ಶ್ಲಾಘಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕೆ. ಆರ್ ಪುರ ಕ್ಷೇತ್ರದ ಹೆಚ್‍ಎಎಲ್‍ನಲ್ಲಿ ನೆಲಮಟ್ಟದ ನೀರು ಸಂಗ್ರಹಾಗಾರ, ಕೆ. ಆರ್ ಪುರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತಾಯಿ-ಮಗು ಆಸ್ಪತ್ರೆ ಹಾಗೂ ಕೋವಿಡ್‍ನಿಂದ ಮೃತಪಟ ್ಟಕುಟುಂಬಕ್ಕೆ ಚೆಕ್‍ಅನ್ನು ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ವಿತರಿಸಿ ಅವರು ಮಾತನಾಡಿದರು.
ಎಂಟೂವರೆ ಕೋಟಿ ರೂ. ವೆಚ್ಚದಲ್ಲಿ ಜಿಎಲ್‍ಆರ್ ನಿರ್ಮಾಣ ಮಾಡಿದ್ದೇವೆ ಕೆಆರ್‍ಪುರದ ಪ್ರಮುಖ 9 ಬಡಾವಣೆಗಳಿಗೆ ಇದರಿಂದ ನೀರು ಕಳಿಸಲಾಗುತ್ತದೆ ಎಂದು ಅವರು, ಬೈರತಿ ಅವರು ದಾಖಲೆ ಕೆಲಸ ಮಾಡುತ್ತಿದ್ದಾರೆ. ಜನಪರ ಕಾಳಜಿ ಇರುವ ಜನಸೇವಕರಾಗಿದ್ದಾರೆ ಎಂದರು. ಇವರು ಇತರರಿಗೆ ಆದರ್ಶರಾಗಿದ್ದಾರೆ. ಈ ನೀರನ್ನು ಸದುಪಯೋಗ ಪಡೆಸಿಕೊಳ್ಳಿ , ಕೋವಿಡ್‍ನಿಂದ ಮೃತಪಟ್ಟ ಕುಟುಂಬಕ್ಕೆ ಸಾಂತ್ವಾನ ಸಹಾಯದ ಮೂಲಕ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಾತನಾಡಿ, ಕೆಆರ್‍ಪುರ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚು ಅನುದಾನ ನೀಡಿದ್ದಾರೆ, ಆಸ್ಪತ್ರೆ ಮೇಲ್ದರ್ಜೆಗೇರಿಸಲು ಸಹಕರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವೈಯಕ್ತಿಕವಾಗಿ ಒಂದು ಕೋಟಿ ಹದಿನೈದು ಲಕ್ಷ ರೂ.ಗಳನ್ನು ಕೋವಿಡ್‍ನಿಂದ ಮೃತಪಟ್ಟ ಕುಟುಂಬಕ್ಕೆ ನೆರವು ನೀಡಲಾಗಿದೆ. ಈಗ ಕೋವಿಡ್ ಹಿನ್ನೆಲೆ ಸರಳವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, 200 ಜನಕ್ಕೆ ಮಾತ್ರ ಇಲ್ಲಿ ನೀಡಲಾಗುತ್ತಿದೆ. ಉಳಿದವರಿಗೆ ನಂತರ ನೀಡಲಾಗುತ್ತದೆ ಎಂದು ಹೇಳಿದರು.
ಸಚಿವ ಸುಧಾಕರ್ ಮಾತನಾಡಿ, ಕೋಲಾರದಿಂದ ಬೆಂಗಳೂರುವರೆಗಿನ ಮೊದಲ ತಾಯಿ ಮಗುವಿನ ಆಸ್ಪತ್ರೆ, ಕಳೆದ ಬಾರಿ ಭೇಟಿ ನೀಡಿದಾಗ ಬೈರತಿ ಬಸವರಾಜರವರಿಗೆ ಭರವಸೆ ನೀಡಿದ್ದೆ, ಇಂದು ನೆರವೇರಿಸಿದ್ದೇವೆ ಎಂದು ಹೇಳಿದರು. ಕಳೆದ 75 ವರ್ಷದಲ್ಲಿ ಕಾಣದೆ ಇರುವ ಅಭಿವೃದ್ಧಿ ಆರೋಗ್ಯಇಲಾಖೆಯಲ್ಲಿ ಆಗಿದೆ. ಇದೊಂದು ದಾಖಲೆಯ ಅಭಿವೃದ್ಧಿ. ಆಕ್ಸಿಜನ್ ಹಾಸಿಗೆ ಜಿಲ್ಲಾ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸೀಮಿತವಾಗಿತ್ತು. ಇದೀಗ ಸಮುದಾಯದ ಆಸ್ಪತ್ರೆಗಳಲ್ಲಿ ಸಹ ಆಕ್ಸಿಜನ್ ಬೆಡ್ ಅಳವಡಿಸುವ ಕೆಲಸ ಮಾಡಲಾಗಿದೆ ಎಂದು ವಿವರಿಸಿದರು.
ದೊಡ್ಡ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯ ಮೊದಲ ಸ್ಥಾನದಲ್ಲಿದೆ, ಶೇ.100 ರಷ್ಟು ಮೊದಲ ಲಸಿಕೆ ಕೊಡಲಾಗಿದೆ. ಎರಡನೇ ಡೋಸ್ ಶೇ.87 ರಷ್ಟು ಆಗಿದೆ. ಒಳ್ಳೆಯ ಕೆಲಸ ಮಾಡಿದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಆರೋಗ್ಯ ಇಲಾಖೆಗೆ ವಿಶೇಷ ಸ್ಪರ್ಶವನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ, ಅನೇಕ ಜನರು ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೆ ಪರದಾಡುತ್ತಿದ್ದರು, ನಮ್ಮ ಸರ್ಕಾರ ಸಿಎಂ ನೇತೃತ್ವದಲ್ಲಿ ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಸೇವೆ ಲಭಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೃದಯ, ಕ್ಯಾನ್ಸರ್‍ಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗ ಮಾಡಲು ತೀರ್ಮಾನಿಸಲಾಗಿದೆ ಎಂದರು. 30 ಕೋಟಿರೂ.ಆಸ್ಪತ್ರೆಯಲ್ಲಿ ಈಗಾಗಲೇ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಇನ್ನು ಮೇಲ್ದರ್ಜೆಗೇರಿಸಲು ಸ್ಥಳದಲ್ಲೇ 20 ಕೋಟಿರೂ ನೀಡಲು ಸಿಎಂ ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ಸಚಿವ ಸೋಮಶೇಖರ್, ಎಂಎಲ್‍ಸಿ ಗೋಪಿನಾಥ್‍ರೆಡ್ಡಿ, ಪಾಲಿಕೆ ಮಾಜಿ ಸದಸ್ಯರಾದಜಯಪ್ರಕಾಶ್, ಶ್ರೀಕಾಂತ್, ಸುರೇಶ್, ಎಸ್.ಜಿ.ನಾಗರಾಜ್, ಸಿದ್ದಲಿಂಗಯ್ಯ, ಆಂತೋಣಿಸ್ವಾಮಿ, ಮುಖಂಡರಾದ ಮಾರ್ಕೆಟ್ ರಮೇಶ್, ಎಂಎಲ್‍ಡಿಸಿ ಮುನಿರಾಜು, ಕೃಷ್ಣಪ್ಪ, ಶಿವಪ್ಪ, ಪಟಾಕಿರವಿ ಮತ್ತಿತರರಿದ್ದರು.

Articles You Might Like

Share This Article