ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ವಿನಾಕಾರಣ ಅಡ್ಡಿ : ಸಚಿವ  ಕಾರಜೋಳ

ಹುಬ್ಬಳ್ಳಿ, ಸೆ.5- ನಾವು ಕುಡಿಯೋದಕ್ಕೆ ನೀರು ಕೇಳ್ತಾ ಇದೀವಿ ಹೊರತು ಕೃಷಿಗಾಗಿ ಅಲ್ಲ. ಮೇಕೆದಾಟು ಯೋಜನೆಯಲ್ಲಿ ತಮಿಳುನಾಡು ಸರ್ಕಾರ ವಿನಾಕಾರಣ ಅಡ್ಡಿಪಡಿಸುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯಲ್ಲಿ ನಾವು ಹೆಚ್ಚಿನ ನೀರನ್ನು ತೆಗೆದುಕೊಳ್ಳುತ್ತಿಲ್ಲ.

ಕುಡಿಯುವ ನೀರಿಗಾಗಿ ಸುಪ್ರೀಂಕೋರ್ಟ್ ಈಗಾಗಲೇ ಆದೇಶ ನೀಡಿದೆ. ನಾವು ನೀರು ಕೇಳ್ತಿರೋದು ಕುಡಿಯೋ ನೀರಿಗಾಗಿ ಹೊರತು ಕೃಷಿಗಾಗಿ ಅಲ್ಲ. ಆದರೆ ತಮಿಳನಾಡು ವಿನಾಕಾರಣ ಅಡ್ಡಿ ಪಡಿಸ್ತಿದೆ. ಈಗಾಗಲೇ ತಮಿಳುನಾಡಿನವರು ಪಿಐಎಲ್ ಹಾಕಿದ್ದಾರೆ ನಾವು ಕೂಡ ಹಾಕಿದೀವಿ. ಇದನ್ನು ಕೂಡಲೇ ಇತ್ಯರ್ಥಪಡಿಸಲಿಕ್ಕೆ ಸುಪ್ರೀಂ ಕೋರ್ಟ್‍ನಲ್ಲಿ ನಾವು ಕಾನೂನು ಪ್ರಕಾರ ಹೋರಾಟ ಮಾಡ್ತೀವಿ ಎಂದರು.

ಕಳಸಾ ಬಂಡೂರಿ ಯೋಜನೆಯಲ್ಲಿ ನಮಗೆ 13 ಟಿಎಂಸಿ ನೀರು ಸಿಕ್ಕಿದೆ. ಅದರಲ್ಲಿ 5.4 ಟಿಎಂಸಿ ನೀರು ಕುಡಿಯೋದಕ್ಕೆ ಮತ್ತು ಉಳಿದದ್ದು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತದೆ. ಕಳಸಾ ಬಂಡೂರಿ ಯೋಜನೆಗೆ ಎನ್ವಿರಾನಮೆಂಟ್ ಮತ್ತು ಫಾರೆ¸್ಟï ಕ್ಲಿಯರೆ£್ಸï 2015ರಲ್ಲೇ ಆಗಿದೆ. ಆದರೆ ಈ ಯೋಜನೆ ಕುರಿತು ಗೋವಾ ಮತ್ತು ಮಹಾರಾಷ್ಟ್ರ ಪಿಐಎಲ್ ಸಲ್ಲಿಸಿದ್ದಾರೆ.

ನಾವು ಕೂಡ ಸಲ್ಲಿಸಿದ್ದೇವೆ. ಅದಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸಿ ಒಪ್ಪಿಗೆ ನೀಡಬೇಕು ಎಂದು ಕೇಂದ್ರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಕಾರಜೋಳ ಹೇಳಿದರು.