ಬೆಂಗಳೂರು, ಜೂ.3- ಗೃಹಜ್ಯೋತಿ ಯೋಜನೆಯಡಿ ಸರ್ಕಾರ ನಿಗದಿಪಡಿಸಿದ ಮಾನದಂಡ ಮೀರಿ ಬಳಕೆ ಮಾಡುವ ವಿದ್ಯುತ್‍ಗೆ ಮಾತ್ರ ಶುಲ್ಕ ಪಾವತಿಸಬೇಕಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
200 ಯುನಿಟ್‍ವರೆಗೂ ಗೃಹಬಳಕೆಯ ವಿದ್ಯುತ್‍ಗೆ ಗ್ರಾಹಕರು ಬಿಲ್ ಪಾವತಿಸಬೇಕಿಲ್ಲ. ನಿಯಮಿತವಾಗಿ ಅದಕ್ಕಿಂತಲೂ ಹೆಚ್ಚಿನ ವಿದ್ಯುತ್ ಬಳಕೆ ಮಾಡುವವರು ಪೂರ್ಣ ಪ್ರಮಾಣದ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ರೈಲು ದುರಂತ : 300 ದಾಟಿದ ಸಾವಿನ ಸಂಖ್ಯೆ, 1000ಕ್ಕೂ ಹೆಚ್ಚು ಜನರಿಗೆ ಗಾಯ
ಕಳೆದ 12 ತಿಂಗಳಿನಿಂದ ಬಳಕೆ ಮಾಡಿರುವ ವಿದ್ಯುತ್‍ನ ಸರಾಸರಿಯನ್ನು ಪರಿಗಣಿಸಲಾಗುತ್ತದೆ. ಅದರ ಮೇಲೆ ಶೇ. 10 ರಷ್ಟು ಹೆಚ್ಚು ವಿದ್ಯುತ್ ಬಳಕೆಗೆ ಅವಕಾಶ ನೀಡಲಾಗಿದೆ. ಇಷ್ಟಕ್ಕೇ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಹಣ ಪಾವತಿಸಬೇಕಿಲ್ಲ. ಒಂದು ವೇಳೆ ಸರಾಸರಿ ಬಳಕೆ ಮತ್ತು ಶೇ.10 ರಷ್ಟು ಹೆಚ್ಚುವರಿ ಪ್ರಮಾಣವನ್ನು ದಾಟಿ ವಿದ್ಯುತ್ ಬಳಕೆಯಾಗಿದ್ದರೆ, ಆ ಹೆಚ್ಚುವರಿ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಒಟ್ಟಾರೆ ವಿದ್ಯುತ್ ಬಳಕೆಯ ಮಿತಿ 200 ಯುನಿಟ್ ಒಳಗಿರಲಿದೆ. ನಿಯಮಿತವಾಗಿ 100 ಯುನಿಟ್ ಬಳಕೆ ಮಾಡುತ್ತಿದ್ದವರು ಗೃಹಜ್ಯೋತಿ ಯೋಜನೆ ಮಾನದಂಡದ ಪ್ರಕಾರ ಶೇ. 10 ರಷ್ಟನ್ನು ಸೇರಿ 110 ಯುನಿಟ್‍ಗಳಿಗೆ ಶುಲ್ಕ ವಿನಾಯಿತಿ ಪಡೆಯಬಹುದು. ಒಂದು ವೇಳೆ 115 ಯುನಿಟ್ ಬಳಕೆ ಮಾಡಿದ್ದಾದರೆ ಹೆಚ್ಚುವರಿಯಾದ 5 ಯುನಿಟ್‍ಗೆ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಸ್ಪಷ್ಟನೆಯನ್ನು ಸಚಿವರು ನೀಡಿದ್ದಾರೆ.
Minister, #KJGeorge, #GruhaJyothi, #scheme, #electricitybill,