ಶಿವಮೊಗ್ಗ,ಫೆ.20- ರಾಷ್ಟ್ರಧ್ವಜ ವಿಷಯ ಹಿಡಿದುಕೊಂಡು ಅಹೋರಾತ್ರಿ ಧರಣಿ ನಡೆಸುವ ಬದಲು ಜನರೇ ತೀರ್ಮಾನ ಕೈಗೊಳ್ಳಲು ಬಿಡೋಣ ಎಂದು ಕಾಂಗ್ರೆಸ್‍ಗೆ ಸಚಿವ ಈಶ್ವರಪ್ಪ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ತಿರುಚಿ ಸುಖಾಸುಮ್ಮನೆ ಕಲಾಪದ ಸಮಯವನ್ನು ಹಾಳು ಮಾಡಬೇಡಿ. ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅವೇಶನ ನಡೆಯುತ್ತದೆ.
ಕೇವಲ ವೋಟ್ ಬ್ಯಾಂಕ್‍ಗಾಗಿ ಈ ರೀತಿಯ ಹೋರಾಟ ನಡೆಸಿದರೆ ಏನೂ ಪ್ರಯೋಜನವಿಲ್ಲ. ಈ ವಿಷಯವನ್ನು ಇಲ್ಲಿಗೆ ಬಿಟ್ಟು ಜನರ ಬಳಿಗೆ ಹೋಗೋಣ ಅವರೇ ತೀರ್ಮಾನಿಸುತ್ತಾರೆ ಎಂದರು. ಈ ವಿಷಯವನ್ನು ಹೆಚ್ಚು ಮಾತನಾಡಲು ನಾನು ಬಯಸುವುದಿಲ್ಲ. ಅವರ ಹೋರಾಟವನ್ನು ಇಲ್ಲಿಗೆ ಬಿಟ್ಟುಬಿಡಲಿ ಜನರ ತೀರ್ಮಾನಕ್ಕೆ ನಾವು ಹೋಗೋಣ ಎಂದು ಹೇಳಿದ್ದಾರೆ.
ವೈಯಕ್ತಿಕವಾಗಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸ್ನೇಹಿತರೇ. ಆದರೆ ರಾಜಕಾರಣದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂದು ಮಾರ್ಮಿಕವಾಗಿ ಕಾಂಗ್ರೆಸ್‍ಹೋರಾಟಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
