ಮಾಧ್ಯಮಗಳು ಸಮಾಜದ ಕನ್ನಡಿಯಾಗಿ ಕಾರ್ಯನಿರ್ವಹಿಸಲಿ : ಜೆ.ಸಿ.ಮಾಧುಸ್ವಾಮಿ

Social Share

ಬೆಂಗಳೂರು,ನ.16-ಜಾತಿ, ಧರ್ಮ, ನೆಲ, ಜಲ ವಿಚಾರಗಳಲ್ಲಿ ತಿಕ್ಕಾಟ ತರುವಂತಹ ಕೆಲಸಗಳನ್ನು ಮಾಧ್ಯಮಗಳು ಮಾಡಬಾರದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಇಂದಿಲ್ಲಿ ಕಿವಿಮಾತು ಹೇಳಿದರು.

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಐಕ್ಯತೆ, ಬದುಕು ಹಾಳಾಗುವಂತಹ ವರದಿಗಳನ್ನು ಪ್ರಸಾರ ಮಾಡಬಾರದು. ದೇಶದ ಅಭಿವೃದ್ಧಿಗೆ ಶಾಂತಿ -ಸುವ್ಯವಸ್ಥೆ ಪ್ರಮುಖ ಪಾತ್ರ ವಹಿಸಲಿದೆ. ದೇಶದ ಅಭಿವೃದ್ಧಿ ಎಂದರೆ ಕೇವಲ ಭೌತಿಕ ಅಭಿವೃದ್ಧಿಯಲ್ಲ.

ಪ್ರತಿಯೊಬ್ಬ ಪ್ರಜೆಗೂ ಸಹ ಅಭಿವೃದ್ಧಿಯ ಬಗ್ಗೆ ತಿಳಿಸುವಂತಹ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು ಎಂದರು.

ಬೆಂಗಳೂರಿನಲ್ಲಿ ಎಲ್ಲ ಅವಿಷ್ಕಾರ ಸಾಧ್ಯ : ಸಿಎಂ ಬೊಮ್ಮಾಯಿ

ಅಧಿಕಾರ ನಡೆಸುತ್ತಿರುವವರಿಗೆ ಮಾರ್ಗದರ್ಶಕರಾಗಿರಬೇಕು. ಟೀಕೆ ಒಂದೇ ವರದಿಗಾರಿಕೆಯಲ್ಲ. ಸಲಹೆ-ಸೂಚನೆಗಳನ್ನು ಸಹ ನೀಡಬೇಕು. ಮಾಧ್ಯಮಗಳು ಎಂದರೆ ಸಮಾಜದ ಕನ್ನಡಿಯಾಗಿ ಕಾರ್ಯನಿರ್ವಹಿಸಬೇಕು. ಯಥಾವತ್ತಾಗಿ ಬರೆಯುವುದು ವರದಿಗಾರಿಕೆಯಲ್ಲ. ಎಲ್ಲಾ ಕ್ಷೇತ್ರಗಳ ಬಗ್ಗೆ ಹಾಳವಾಗಿ ಅಧ್ಯಯನ ಮಾಡಿಕೊಂಡು ದೇಶ ಹಾಗೂ ಜನರಿಗೆ ತಲುಪಿಸುವ ವರದಿಗಳು ಮೂಡಿಬರಬೇಕು ಎಂದು ಹೇಳಿದರು.

ಯಾವುದೇ ಒಂದು ಬರವಣಿಗೆ ಸರಳವಾಗಿ ಓದುವಂತಿರಬೇಕು. ಇತ್ತೀಚೆಗೆ ಡಿಜಿಟಲ್ ಮಾಧ್ಯಮಗಳು ಬಂದಿವೆ. ಆದರೆ, ಅವು ಶಾಶ್ವತವಲ್ಲ. ಪೆನ್ನು, ಪೇಪರ್ಗಳೇ ಶಾಶ್ವತ. ಹೀಗಾಗಿ ಮಾಧ್ಯಮಗಳು ಜನರಿಗೆ ಹೊಸ ಹೊಸ ಅನ್ವೇಷಣೆಗಳನ್ನು ಪರಿಚಯಿಸಬೇಕು. ಸ್ವತಂತ್ರ ಬರುವುದಕ್ಕೆ ಪ್ರಮುಖ ಆಯುಧ ಬರವಣಿಗೆಯಾಗಿತ್ತು.

ಮಹಾತ್ಮಗಾಂೀಧಿಜಿ ಯವರು ಕೂಡ ಬರವಣಿಗೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು. ಹಾಗಾಗಿ ಬರವಣಿಗೆಯ ಪಾತ್ರ ಪ್ರಮುಖವಾಗಿದೆ ಎಂದರು.

2024ರ ಅಮೆರಿಕ ಅಧ್ಯಕ್ಷೀಯ ಚುನಾವನೆಯಲ್ಲಿ ಟ್ರಂಪ್ ಸ್ಪರ್ಧೆ

ಯಾವುದೇ ಒಂದು ಕ್ಷೇತ್ರದ ಪ್ರಗತಿ ಅಭಿವೃದ್ಧಿಯಲ್ಲ. ಪ್ರತಿಯೊಬ್ಬ ಪ್ರಜೆಯೂ ಕೂಡ ಎದೆ ತಟ್ಟಿ ಮಾತನಾಡುವಂತಹ ಕೆಲಸಗಳನ್ನು ಮಾಧ್ಯಮಗಳು ಹೆಚ್ಚು ಹೆಚ್ಚು ಪ್ರಸಾರ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ.ಸದಾಶಿವ ಶೆಣೈ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ, ಹಿರಿಯ ನಟ ಅನಂತ್ನಾಗ್, ಪತ್ರಕರ್ತರಾದ ರಾಜಶೈಲೇಶ ಚಂದ್ರಗುಪ್ತ, ಡಾ.ಆರ್. ಪೂರ್ಣಿಮಾ ಮತ್ತಿತರರು ಪಾಲ್ಗೊಂಡಿದ್ದರು.

Articles You Might Like

Share This Article