Saturday, September 23, 2023
Homeಇದೀಗ ಬಂದ ಸುದ್ದಿಡಬ್ಬಲ್ ಇಂಜಿನ್ ಸರ್ಕಾರದ ನಿರ್ಧಾಗಳಿಂದ ಜನ ಸಾಲಗಾರರಾಗಿದ್ದಾರೆ: ಸಚಿವ ಪ್ರಿಯಾಂಕ ಖರ್ಗೆ

ಡಬ್ಬಲ್ ಇಂಜಿನ್ ಸರ್ಕಾರದ ನಿರ್ಧಾಗಳಿಂದ ಜನ ಸಾಲಗಾರರಾಗಿದ್ದಾರೆ: ಸಚಿವ ಪ್ರಿಯಾಂಕ ಖರ್ಗೆ

- Advertisement -

ಬೆಂಗಳೂರು, ಮೇ 31- ಹಿಂದಿನ ಡಬ್ಬಲ್ ಇಂಜಿನ್ ಸರ್ಕಾರದ ತಪ್ಪು ನಿರ್ಧಾಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ನಮ್ಮ ಸರ್ಕಾರ ರಾಜ್ಯದ ಆರ್ಥಿಕ ಸ್ಥಿರತೆ ಕಾಪಾಡುವುದರ ಜತೆಗೆ ಕನ್ನಡಿಗರ ಹಣಕಾಸು ಪರಿಸ್ಥಿತಿಯನ್ನೂ ಸುಧಾರಿಸಲು ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಸ್ಪಷ್ಟಪಡಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಅನುಸರಿಸಿದ ತಪ್ಪು ನಿರ್ಧಾರಗಳು ಹಾಗೂ ಅವ್ಯವಹಾರಗಳಿಂದಾಗಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ರಾಜ್ಯದ ಜನ ಸಾಲಗಾರರಾಗಿದ್ದಾರೆ. ನಮ್ಮ ಸರ್ಕಾರ ಮೊದಲು ಆರ್ಥಿಕ ಸ್ಥಿರತೆಗೆ ಆದ್ಯತೆ ನೀಡಲಿದೆ ಎಂದು ಹೇಳಿದರು.

- Advertisement -

ಚುನಾವಣೆ ವೇಳೆ ಘೋಷಣೆ ಮಾಡಲಾದ ಐದು ಗ್ಯಾರಂಟಿಗಳ ಬಗ್ಗೆ ಯಾವುದೇ ಅನುಮಾನ ಬೇಡ. ಆ.15ರಂದು ಜಾರಿಯಾಗಲಿದೆ ಎಂಬ ವದಂತಿಗಳು ಆಧಾರ ರಹಿತ. ಒಂದೆರಡು ದಿನಗಳಲ್ಲೇ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡು ಜಾರಿಗೊಳಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಮುಜರಾಯಿ ದೇವಸ್ಥಾನದ ತಸ್ತಿಕ್ ಭತ್ಯೆ ಹೆಚ್ಚಳಕ್ಕೆ ಅರ್ಚಕರ ಮನವಿ

ಭ್ರಷ್ಟಾಚಾರ ಮುಕ್ತಗೊಳಿಸುವುದು ನನ್ನ ವೈಯಕ್ತಿಕವಾದ ಆರನೆ ಗ್ಯಾರಂಟಿ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಪಿಎಸ್‍ಐ ನೇಮಕಾತಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ನಡೆದಿರುವ ಹಗರಣಗಳ ಬಗ್ಗೆ ಸರ್ಕಾರ ಗಂಭೀರ ಚಿಂತೆನ ನಡೆಸಿದೆ. ಈಗಾಗಲೇ ಮೂರ್ನಾಲ್ಕು ವಿಚಾರಗಳ ಕುರಿತು ಇಲಾಖೆಯ ಆಂತರಿಕ ತನಿಖೆ ನಡೆಯುತ್ತಿದೆ. ಅಗತ್ಯವಾದರೆ ಸಿಐಡಿ ತನಿಖೆ ಕೂಡ ನಡೆಸಲಾಗುವುದು ಎಂದು ತಿಳಿಸಿದರು.

ಮೋದಿ ಹತ್ಯೆಗೆ ಸಂಚು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಕಡೆ ಎನ್‍ಐಎ ದಾಳಿ

ಬಿಪಿಎಲ್ ಕಾರ್ಡ್‍ದಾರರು, ನಿರ್ಗತಿಕರಿಗೆ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದ್ದೇವೆ. ಸರ್ಕಾರದ ಪ್ರತಿಯೊಂದು ರೂಪಾಯಿಯನ್ನು ಕೂಡ ಸದುಪಯೋಗಪಡಿಸಿಕೊಳ್ಳುವುದು ನಮ್ಮ ಆದ್ಯತೆ. ಹಾಗಾಗಿ ಯಾರಿಗೆ ಸೌಲಭ್ಯ ನೀಡಬೇಕು ಎಂಬ ಬಗ್ಗೆ ಈಗಾಗಲೇ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಕೇಂದ್ರ ಸರ್ಕಾರದ ಯಾವ ಯೋಜನೆಗಳಿಗೆ ಈ ರೀತಿಯ ಮಾನದಂಡಗಳಿಲ್ಲ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

Minister, #PriyankaKharge, #BJP, #government,

- Advertisement -
RELATED ARTICLES
- Advertisment -

Most Popular