Wednesday, May 31, 2023
Homeಇದೀಗ ಬಂದ ಸುದ್ದಿಇಂದಿರಾ ಕ್ಯಾಂಟಿನ್‍ಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ

ಇಂದಿರಾ ಕ್ಯಾಂಟಿನ್‍ಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ

- Advertisement -

ಬೆಂಗಳೂರು, ಮೇ 26- ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್ ಸೇವೆಯನ್ನು ಉತ್ತಮಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ, ಕ್ಯಾಂಟಿನ್‍ಗಳ ನಿರ್ವಹಣೆಗಾಗಿ ಪ್ರತ್ಯೇಕ ಅಧಿಕಾರಿಗಳ ನಿಯೋಜನೆ ಕುರಿತು ಪರಿಶೀಲನೆ ನಡೆಸಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ನಗರದ ಹಡ್ಸನ್ ವೃತ್ತದ ಬಳಿಯ ಇಂದಿರಾ ಕ್ಯಾಂಟೀನ್ ಗೆ ಭೇಟಿ, ಪರಿಶೀಲನೆ ನಡೆಸಿದ ಅವರು, ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದೆ ಕಾಂಗ್ರೆಸ್ ಸರ್ಕಾರ, ಪ್ರತಿ ವಿಧಾನಸಭಾ ಕ್ಷೇತ್ರ ಹಾಗೂ ಆಸ್ಪತ್ರೆಗಳಲ್ಲಿ ಕ್ಯಾಂಟೀನ್ ಇರಲಿವೆ ಎಂದಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಣ ನೀಡದೇ ರಿಯಾಯಿತಿ ದರದಲ್ಲಿ ಆಹಾರ ಪೂರೈಸುವ ಕ್ಯಾಂಟಿನ್‍ಗಳು ಮುಚ್ಚಿ ಹೋಗಿದ್ದವು. ಬಿಜೆಪಿಯವರು ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಕ್ಯಾಂಟೀನ್ ಮುಚ್ಚಿಸಿದ್ದರು. ಬಿಜೆಪಿ ಸರ್ಕಾರದ ನಿಲುವುಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಕೂಡ ನಡೆಸಿತ್ತು. ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಯೋಜನೆ ಪುನರಾರಂಭವಾಗಲಿವೆ ಎಂದರು.

ಬೆಂಗಳೂರಿಗೆ ಬೇರೆ ಬೇರೆ ಊರುಗಳಿಂದ ಜನರು ಬರುತ್ತಾರೆ. ಬೆಂಗಳೂರಿಗರಿಗೆ ಹಾಗೂ ಅಗತ್ಯ ಇರುವವರಿಗೆ ಅನುಕೂಲವಾಗಲಿ ಎಂದು ಇಂದಿರಾ ಕ್ಯಾಂಟಿನ್ ಮಾಡಲಾಗಿತ್ತು. ಐದು ರೂಪಾಯಿ ಗೆ ತಿಂಡಿ, ಹತ್ತು ರೂಪಾಯಿಗೆ ಊಟ ದೊರೆಯುತ್ತಿತ್ತು. ಬಡವರಿಗೆ ಅನುಕೂಲವಾಗುವುದನ್ನು ಬಿಜೆಪಿ ಸ್ಥಗಿತ ಮಾಡಿತ್ತು ಎಂದು ಅವರು ದೂರಿದರು.

ಸಮವಸ್ತ್ರ ನಿರ್ಧರಿಸುವ ಹಕ್ಕು ಶಾಲೆಗಳಿಗಿದೆ : ಕೇರಳ ರಾಜ್ಯಪಾಲ

ಹಡ್ಸನ್‍ವೃತ್ತದ ಬಳಿಕ ಕ್ಯಾಂಟಿನ್‍ನಲ್ಲಿ ನೀರಿನ ಸಮಸ್ಯೆ ಇದ್ದು, ಅದನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ ಒಳ್ಳೆಯದಾಗಲಿದೆ, ಅದರ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ. ಸ್ವಚ್ಚತೆ ನಿರ್ವಹಣೆ, ಊಟ, ತಿಂಡಿ, ಟೋಕನ್ ಸೇರಿ ಎಲ್ಲ ನಿರ್ವಹಣೆಗೂ ಪ್ರತ್ಯೇಕ ಅಕಾರಿಗಳಿದ್ದರೆ ಉತ್ತಮ ಎಂದರು.

ಮುಂದಿನ ದಿನಗಳಲ್ಲಿ ಕ್ಯಾಂಟಿನ್‍ನಲ್ಲಿ ಗುಣಮಟ್ಟ ಮತ್ತು ಆಹಾರದ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಅನಗತ್ಯ ಆರೋಪ ಮಾಡುತ್ತಾರೆ. ಈ ಮೊದಲು ಅಕಾರದಲ್ಲಿದ್ದಾಗ ಅವರು ನುಡಿದಂತೆ ನಡೆಂ ಯಲಿಲ್ಲ. ಆದರೆ ನಾವು ಆ ರೀತಿ ಅಲ್ಲ ನಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡುತ್ತೇವೆ.

ನೂತನ ಸಂಸತ್ ಉದ್ಘಾಟನೆ ಸವಿನೆನಪಿಗಾಗಿ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ

ಕಾಂಗ್ರೆಸ್ 135 ಸ್ಥಾನ ಪಡೆದಿರುವುದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಈ ಮೊದಲು ನಾವು ಅಧಿಕಾರದಲ್ಲಿದ್ದಾಗ 7 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಬಿಜೆಪಿಯವರು ಅದನ್ನು 3 ಕೆಜಿಗೆ ಇಳಿಸಿದ್ದರು. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ . ನಾವು ಇನ್ನೂ ಮುಂದೆ 10 ಕೆಜಿ ನೀಡುತ್ತೆವೆ ಎಂದರು.
ಅಕೌಂಟ್ ದುಡ್ಡು ಹಾಕಲು ಫಲಾನುಭವಿಗಳ ಖಾತೆ ತೆರೆಯಬೇಕು, ಅಕೌಂಟ್ ನಂಬರ್ ಬೇಕು ಎಲ್ಲದಕ್ಕೂ ಸಮಯಾವಕಾಶ ಬೇಕಿದೆ. ಪ್ರತಾಪ್ ಸಿಂಹ ಹಾಗೂ ಸಿ.ಟಿ.ರವಿ ಎಲ್ಲಿರಬೇಕು ಅಲ್ಲಿರಬೇಕು. ನಮ್ಮ ಸರ್ಕಾರ ಬಂದು ಕೆಲವೇ ದಿನ ಆಗಿದೆ ಈಗಲೆ ಬೊಬ್ಬೆ ಹೊಡಿಯುತ್ತಿದ್ದಾರೆ. ಮುಂದಿನ ಸಂಪುಟದಲ್ಲಿ ಎಲ್ಲವೂ ನಿರ್ಧಾರವಾಗಲಿದೆ. ಅಲ್ಲಿಯವರೆಗೂ ಬಿಜೆಪಿಯವರು ತಾವು ಸೋತಿದ್ದು ಏಕೆ ಯೋಜನೆ ಮಾಡಲಿ ಎಂದು ಲೇವಡಿ ಮಾಡಿದ್ದರು.

#Minister, #ramalingareddy, #visited, #IndiraCanteen,

- Advertisement -
RELATED ARTICLES
- Advertisment -

Most Popular