ಕುರ್ಚಿ ತರಲು ತಡ ಮಾಡಿದ ಕಾರ್ಯಕರ್ತನ ಮೇಲೆಯೇ ಕಲ್ಲೆಸೆದ ಸಚಿವ

Social Share

ಚೆನ್ನೈ,ಜ.25- ತಿರುವಳ್ಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಗೆ ಕುರ್ಚಿ ತರಲು ವಿಳಂಬ ಮಾಡಿದ್ದಕ್ಕಾಗಿ ಡಿಎಂಕೆ ಪಕ್ಷದ ಎಸ್‍ಎಂ ನಾಸರ್ ಅವರು ಕಾರ್ಯಕರ್ತರ ಮೇಲೆ ಕಲ್ಲು ಎಸೆದಿರುವ ಘಟನೆ ವೈರಲ್ಲಾಗಿದೆ.

ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವರಾದ ನಾಸರ್ ನಡೆಯಬೇಕಿದ್ದ ಕಾರ್ಯಕ್ರಮದ ವ್ಯವಸ್ಥೆಗಳನ್ನು ಪರಿಶೀಲಿಸಲು ಬಂದಿದ್ದರು. ಈ ವೇಳೆ ಕಾರ್ಯಕರ್ತರು ಕುರ್ಚಿ ನೀಡಲು ತಡವಾಗಿದ್ದಕ್ಕೆ ಕೋಪಗೊಂಡು ಕಾರ್ಯಕರ್ತರ ಮೇಲೆ ಕಲ್ಲು ಎಸೆದಿದ್ದಾರೆ.

ಸ್ಥಳೀಯರು ಸಚಿವರ ಈ ವರ್ತನೆಯನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿವರು ಕಲ್ಲು ಎಸೆದಿರುವ ದೃಶ್ಯ ವೈರಲ್ ಆಗಿದ್ದು, ಸಚಿವರ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಈ ಘಟನೆ ಬಗ್ಗೆ ಟ್ವೀಟ್ ಮಾಡಿ, ಪಕ್ಷದ ಕಾರ್ಯಕರ್ತರಿಗೆ ಅಗೌರವ ತೋರಿದ್ದಾರೆ. ದೇಶದ ಇತಿಹಾಸದಲ್ಲಿ ಸಚಿವರಾದವರು ಜನರ ಮೇಲೆ ಕಲ್ಲು ಎಸೆಯುವುದನ್ನು ಯಾರಾದರೂ ನೋಡಿದ್ದೀರಾ?ಎಂದು ಪ್ರಶ್ನಿಸಿದ್ದಾರೆ.

ವಿವಿಗಳಲ್ಲಿ ಮೋದಿ ಕುರಿತ BBC ಸಾಕ್ಷ್ಯಚಿತ್ರ ಪ್ರದರ್ಶನ, ಹೆಚ್ಚಿದ ಸಂಘರ್ಷ

ತಮಿಳುನಾಡಿನ ಸಚಿವರು ಹತಾಶೆಯಿಂದ ಜನರ ಮೇಲೆ ಕಲ್ಲು ಎಸೆಯುತ್ತಿದ್ದಾರೆ. ಕಾರ್ಯಕರ್ತರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಖಾರವಾಗಿ ಬಿಜೆಪಿ ಪ್ರತಿಕ್ರಿಯಿಸಿದೆ.

ಸಚಿವರ ಪುತ್ರನ ಜಾಮೀನು ಅರ್ಜಿಗೆ ಇಂದು ಸುಪ್ರೀಂಕೋರ್ಟ್ ಆದೇಶ ತಮಿಳುನಾಡಿನ ತಿರುವಳ್ಳೂರಿನಲ್ಲಿ ಭಾಷಾ ಹೋರಾಟದ ಹೋರಾಟಗಾರರ ಕಾರ್ಯಕ್ರಮ ಇಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕೂಡ ಭಾಗಿಯಾಗಲಿದ್ದಾರೆ.

ಬಿಜೆಪಿಯಲ್ಲಿ ರಾಜಾಹುಲಿ ಬಿಎಸ್‍ವೈಗೆ ಇದೀಗ ಭಾರೀ ಬೇಡಿಕೆ

ಇದಕ್ಕಾಗಿ ನಿನ್ನೆ ತಿರುವಳ್ಳೂರು ಐಸಿಎಂಆರ್ ಬಳಿ 15 ಎಕರೆ ಜಾಗದಲ್ಲಿ ವೇದಿಕೆ ನಿರ್ಮಿಸಲಾಗುತ್ತಿತ್ತು. ವೇದಿಕೆ ನಿರ್ಮಾಣದ ಪರಿಶೀಲನೆಗಾಗಿ ಸಚಿವ ಎಸ್.ಎಂ.ನಾಸರ್ ತೆರಳಿದ್ದ ವೇಳೆ ಕುರ್ಚಿ ಪ್ರಸಂಗ ನಡೆಸಿದೆ.

Minister, SM Nasar, Throwing, Stone, Party Workers,

Articles You Might Like

Share This Article