ಸೇವೆ-ಸಮರ್ಪಣೆ-ಸಂಕಲ್ಪ ಮನೋಭಾವದಿಂದ ಕೆಲಸ ಮಾಡಬೇಕು : ಸಚಿವ ಸೋಮಣ್ಣ

Social Share

ಬೆಂಗಳೂರು, ಜ.7- ಜನ ಸಾಮಾನ್ಯರ ಸಂಕಷ್ಟಗಳಿಗೆ ಮತ್ತು ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಸಮರ್ಪಕ ರೀತಿಯಲ್ಲಿ ಒದಗಿಸಲು ಸೇವೆ, ಸಮರ್ಪಣೆ ಮತ್ತು ಸಂಕಲ್ಪ ಮನೋಭಾವನೆಯಿಂದ ಕೆಲಸ ಮಾಡಬೇಕು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ, ನಾಯಂಡಹಳ್ಳಿ, ನಾಗರಭಾವಿ ಮತ್ತು ಕಾವೇರಿಪುರ ವಾರ್ಡ್‍ಗಳಲ್ಲಿ ಎಸ್‍ಎಲïವಿ ಲೇಔಟ್ ಮತ್ತು ಪಂತರ ಪಾಳ್ಯ ಆಸ್ಪತ್ರೆ, ರೈಲ್ವೆ ಅಂಡರ್ ಪಾಸ್, ಇಂಡಿಯನ್ ಆಯಿಲ್ ಬಳಿ ಇರುವ ತಿಗಳರ ಬಡಾವಣೆ, ಮಾನಸನಗರ ಶಾಲೆ ಮತ್ತು ಪಂಚಶೀಲನಗರದ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ ಪರಿಶೀಲನೆ ಮಾಡಿ ಮಾತನಾಡಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮಧ್ಯಮ ವರ್ಗ ಮತ್ತು ಬಡವರು, ಶ್ರಮಿಕ ವರ್ಗದವರು ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ. ಸಾರ್ವಜನಿಕರಿಗೆ ಬೇಕಾದ ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು ಎಂದರು.
ಸಾಮಾನ್ಯ ಜನರಿಗೆ ಉತ್ತಮ ಸೌಲಭ್ಯ ಲಭಿಸಬೇಕು ಎಂದು ದಾಸರಹಳ್ಳಿ ಮತ್ತು ಪಂತರಪಾಳ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕಿಡ್ನಿ ಸಂಭಂದಿಸಿದ ಸಮಸ್ಯೆಗೆ ಡಯಾಲಿಸಿಸ್ ಸೆಂಟರ್ ಮತ್ತು ಮಾದರಿ ಹೈಟೆಕ್ ಶಾಲೆಗಳು ಮತ್ತು ಪರಿಸರ ಬಗ್ಗೆ ಕಾಳಜಿ ವಹಿಸಿ ಉದ್ಯಾನವನಗಳು ಮತ್ತು ಪ್ರತಿಯೊಂದು ರಸ್ತೆಗಳು ಮಾದರಿ ರಸ್ತೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಜನರ ಬಳಿಗೆ ಆಡಳಿತ ಎಂಬಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು, ಸೌಲಭ್ಯಗಳು ಪ್ರತಿ ಮನೆಗೆ ತಲುಪಿಸುವಂತಹ ಗುರಿ ನಮ್ಮದು ಎಂದು ಹೇಳಿದರು. ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಬಿಬಿಎಂಪಿ ನಿಕಟಪೂರ್ವ ಸದಸ್ಯ ದಾಸೇಗೌಡ ಮತ್ತು ಬಿಬಿಎಂಪಿ ಜಲಮಂಡಳಿ ಮತ್ತು ಬೆಸ್ಕಾಂ ಇಲಾಖೆಯ ಅಕಾರಿಗಳು ಪಾಲ್ಗೊಂಡಿದ್ದರು.

Articles You Might Like

Share This Article