ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆಯ ಕೆನ್ನೆಗೆ ಬಾರಿಸಿದ ಸಚಿವ ಸೋಮಣ್ಣ

Social Share

ಚಾಮರಾಜನಗರ, ಅ.23- ಸಮಸ್ಯೆ ಹೇಳಲು ಬಂದ ಮಹಿಳೆಯೊಬ್ಬರಿಗೆ ವಸತಿ ಸಚಿವ ವಿ.ಸೋಮಣ್ಣ ಅವರು ಕಪಾಳ ಮೋಕ್ಷ ಮಾಡಿರುವ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸೋಮಣ್ಣ ಅವರ ಈ ಧೋರಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಂಖಡರು ಖಂಡಿಸಿದ್ದು, ಕೂಡಲೇ ಅವರು ಕಪಾಳ ಮೋಕ್ಷ ಮಾಡಿಸಿಕೊಂಡ ಮಹಿಳೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಸೋಮಣ್ಣ ಅವರ ಈ ವರ್ತನೆ ಅವರಲ್ಲಿರುವ ಎರಡು ಮುಖಗಳನ್ನು ಜನರಿಗೆ ಪರಿಚಯಿಸಿದೆ. ಮೇಲ್ನೋಟಕ್ಕೆ ಅವರು ಇರೋದೆ ಬೇರೆ ಅವರ ವರ್ತನೆಯೇ ಬೇರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ಈ ಹಿಂದೆ ಹಲವಾರು ಸಚಿವರು ಇದೇ ಧೋರಣೆ ಅನುಸರಿಸಿದ್ದರು. ಇದು ಬಿಜೆಪಿಯವರ ಮಾಮೂಲಿ ಸಂಸ್ಕøತಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ನಿಧನ

ನಿನ್ನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಮಧ್ಯಾಹ್ನ ನಿಗದಿಯಾಗಿತ್ತು. ಆದರೆ ಸಂಜೆ 6.50ಕ್ಕೆ ಆಗಮಿಸಿದ ಸೋಮಣ್ಣ ಅವರು, ಹಕ್ಕುಪತ್ರ ವಿತರಿಸಲು ಮುಂದಾದಾಗ ಜನ ತಾ ಮುಂದು ನಾ ಮುಂದು ಎಂದು ಮುಗಿಬಿದ್ದಾಗ ತಳ್ಳು ನೂಕಾಟ ಆರಂಭವಾಯಿತು.
ಒಂದು ಹಂತದಲ್ಲಿ ನಿವೇಶನದ ಹಕ್ಕು ಪತ್ರ ದೊರಕದೆ ನಿರಾಶರಾದವರು ಬಾಯಿಗೆ ಬಂದಂತೆ ಮಾತನಾಡಲಾರಂಭಿಸಿದರು.

ಜನರ ಆಕ್ರೋಶ ಕಟ್ಟೆ ಹೊಡೆದಿದ್ದರಿಂದ ವಿಚಲಿತರಾದಂತೆ ಕಂಡು ಬಂದ ಸೋಮಣ್ಣ ಅವರು ಈ ಸಂದರ್ಭದಲ್ಲಿ ತಮ್ಮ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆ ಕಪಾಳಕ್ಕೆ ಹೊಡೆದಿದ್ದರು. ಸೋಮಣ್ಣ ಅವರ ಈ ಧೋರಣೆಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

PayCM ಅಭಿಯಾನ : ಕಾಂಗ್ರೆಸ್ ಕಾರ್ಯಕರ್ತರಿಗೆ ನೊಟೀಸ್

ರೀ ಸ್ವಾಮಿ ಸಚಿವ ಸೋಮಣ್ಣನವರೆ .. ಒಬ್ಬ ಹೆಣ್ಣುಮಗಳ ಕಪಾಳಕ್ಕೆ ಹೊಡಿಯೋ ಅಷ್ಟು ದುರಂಕಾರಿಯೇ ನೀವು. ಧಿಕ್ಕಾರವಿರಲಿ ನಿಮ್ಮ ಈ ನೀಚ ಮನಸ್ಥಿತಿಗೆ . ನಮ್ಮ ಚಾಮರಾಜನಗರದಿಂದ ತೊಲಗಿ. ನಮ್ಮ ಹೆಣ್ಣು ಮಕ್ಕಳನ್ನು ಮುಟ್ಟಲು ನೀವು ಯಾರು ಎಂದು ನೆಟ್ಟಿಗರು ತಿರುಗಿಬಿದ್ದಿದ್ದಾರೆ.

ನಮ್ ಕಡೆ ಒಂದು ಮಾತು ಹೇಳ್ತಾರೆ ಅತ್ತೆ ಕೋಪ ಕೊತ್ತಿಮೇಲೆ ಅಂತ. ಅಧಿಕಾರದ ಮದ ಮುಖ್ಯಮಂತ್ರಿಗಳೆ ಇದ ನಿಮ್ಮ ಸರ್ಕಾರದ ಕೊಡುಗೆ. ಮಹಿಳಾ ದೌರ್ಜನ್ಯ ಕಾಯ್ದೆ ಅಡಿ ಸೋಮಣ್ಣ ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಿ ಎಂದು ಕೆಲವರು ಒತ್ತಾಯಿಸಿದ್ದಾರೆ.

Articles You Might Like

Share This Article