ಸಾರಿಗೆ ನೌಕರರು ಮುಷ್ಕರ ನಡೆಸಿದರೆ ಕೆಲಸಕ್ಕೆ ಕತ್ತರಿ : ಸಚಿವ ಶ್ರೀರಾಮುಲು ಎಚ್ಚರಿಕೆ

Social Share

ಬೆಂಗಳೂರು,ಫೆ.10- ಇನ್ನು ಮುಂದೆ ಸಾರಿಗೆ ನೌಕರರು ಮುಷ್ಕರ ಇಲ್ಲವೇ ಪ್ರತಿ ಭಟನೆಯಲ್ಲಿ ಪಾಲ್ಗೊಂಡರೆ ಅಂಥವರು ಶಾಶ್ವತವಾಗಿ ನೌಕರಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಒಬ್ಬ ನೌಕರನ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾದರೆ ಅಂಥವರನ್ನು ಪುನಃ ಇಲಾಖೆಗೆ ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಈಗ ವಜಾಗೊಂಡವರನ್ನು ಮಾನವೀಯತೆ ದೃಷ್ಟಿಯಿಂದ ಮರುನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.

Koo App

ಮುಷ್ಕರದಲ್ಲಿ ಭಾಗಿಯಾಗಿ ಕರ್ತವ್ಯಕ್ಕೆ ಅಧಿಕೃತವಾಗಿ ಗೈರುಹಾಜರಾತಿಯಿಂದ ವಜಾಗೊಂಡ, ಕರ್ತವ್ಯದಿಂದ ಬಿಡುಗಡೆಯಾದ 1353 ಖಾಯಂ, ತರಬೇತಿ, ಪರೀಕ್ಷಣಾರ್ಥಿ ನೌಕರರ ಪೈಕಿ ಇಂದು 100 ಸಾರಿಗೆ ನೌಕರರಿಗೆ ಪುನರ್ ನೇಮಿಸಿಕೊಳ್ಳಲು ಆದೇಶ ನೀಡಲಾಗಿದೆ ಜೊತೆಗೆ ಹಂತಹಂತವಾಗಿ ಉಳಿದ ಸಾರಿಗೆ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳಲಾಗುವುದು. #ಜನಸ್ನೇಹಿಸಾರಿಗೆ_ನನ್ನ_ಧ್ಯೇಯ

B Sriramulu (@sriramulubjp) 10 Feb 2022


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ನಡೆಸಿ ನೌಕರರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ವಜಾಗೊಂಡವರನ್ನು ಹಂತ ಹಂತವಾಗಿ ಮರುನೇಮಕ ಮಾಡಲಾಗುತ್ತದೆ. ಈಗ ನೇಮಕಗೊಂಡವರು ಇನ್ನುಮುಂದೆ ಮುಷ್ಕರಕ್ಕೆ ಹೋಗಬಾರದು ಎಂಬ ಷರತ್ತು ವಿಧಿಸಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆ ನಡೆಸಿದ್ದ 1500 ನೌಕರರನ್ನು ಅಮಾನತ್ತುಗೊಳಿಸಲಾಗಿತ್ತು. ಒಂದು ಬಾರಿ ವಜಾಗೊಂಡರೆ ಪುನಃ ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ನೌಕರರ ಕುಟುಂಬಗಳ ಸ್ಥಿತಿಗತಿ, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಮರುನೇಮಕ ಮಾಡಲಾಗಿದೆ. ಇಂತಹ ಪ್ರತಿಭಟನೆಗೆ ಹೋಗಬೇಡಿ ಎಂದು ನೌಕರರಿಗೆ ಕಿವಿಮಾತು ಹೇಳಿದರು.
1353 ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈಗ ಸರ್ಕಾರದ ವಿವಿಧ ಹಂತಗಳಲ್ಲಿ ಚರ್ಚೆ ನಡೆಸಿ ಮರು ನೇಮಕಾತಿ ಮಾಡಿಕೊಂಡಿದ್ದೇವೆ. ಇಂದು ಮೊದಲ ಹಂತದಲ್ಲಿ 100 ಮಂದಿ ನೌಕರರಿಗೆ ನೇಮಕಾತಿ ಪತ್ರದ ಆದೇಶವನ್ನು ನೀಡಿದ್ದೇವೆ. ನಾಳೆ 200 ಮಂದಿಗೆ ಸೇರಿದಂತೆ ಒಟ್ಟು ಈ ತಿಂಗಳೊಳಗೆ 700 ನೌಕರರನ್ನು ನೇಮಕಾತಿ ಮಾಡಲಿದ್ದೇವೆ ಎಂದರು.
ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೌಕರರ ಪರವಾಗಿ ಇದ್ದುದ್ದರಿಂದಲೇ ನಿಮ್ಮ ರಕ್ಷಣೆ ಮಾಡಲಾಗಿದೆ. ನಿಮ್ಮನ್ನು ಕೆಲವು ಸಂಘಟನೆಗಳು ಮತ್ತು ಮುಖಂಡರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಪ್ರಚೋದನೆ ನೀಡುತ್ತಾರೆ. ರಕ್ಷಣೆ ಮಾಡುವುದು ಯಾರು ಎಂದು ಪ್ರಶ್ನಿಸಿದರು.
ನೀವು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದು ತಪ್ಪು ಎಂದು ಹೇಳುವುದಿಲ್ಲ. ಆದರೆ ಅದಕ್ಕೆ ರೀತಿನೀತಿಗಳು, ನಿಯಮಗಳು ಇರುತ್ತವೆ. ಪ್ರಚೋದನೆ ನೀಡಿ ಪ್ರತಿಭಟನೆ ನಡೆಸಿದ ಮೇಲೆ ನೀವು ಕೆಲಸದಿಂದ ವಜಾಗೊಂಡಿದ್ದೀರೀ. ಪ್ರಚೋದನೆ ನೀಡಿದವರು ನಿಮ್ಮನ್ನು ರಕ್ಷಣೆ ಮಾಡಿದರೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

Articles You Might Like

Share This Article