ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ : ಶ್ರೀರಾಮುಲು

Social Share

ಗಂಗಾವತಿ,ನ.13- ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಗಂಗಾವತಿಯ ಪಂಪಸಾಗರದಲ್ಲಿ ಮಾತನಾಡಿರುವ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಭಯಕ್ಕಿಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಭಯವೇ ಹೆಚ್ಚು ಕಾಡುತ್ತಿದೆ. ಅವರು ಬಾದಾಮಿಗೆ ಗುಡ್‍ಬೈ ಹೇಳಿ ಕೋಲಾರಕ್ಕೆ ಹೋಗಿದ್ದಾರೆ. ಅವರು ಎಲ್ಲೇ ಸ್ರ್ಪಧಿಸಿದರು ಅವರ ವಿರುದ್ಧ ಪ್ರಬಲ ವ್ಯಕ್ತಿಯನ್ನು ಕಣಕ್ಕಿಳಿಸುತ್ತೇವೆ ಎಂದರು.

ಸಿದ್ದರಾಯಮ್ಮಯವರನು ಕೋಲಾರಕ್ಕೆ ಇಂದು ತಮ್ಮ ಆಪ್ತರೊಂದಿಗೆ ತೆರಳಿ ಕ್ಷೇತ್ರದಲ್ಲಿ ಸ್ಪರ್ಧೆಯ ಸುಳಿವು ನೀಡುತ್ತಿದ್ದಂತೆ ಅತ್ತ ಗಂಗಾವತಿಯಲ್ಲಿ ಸಚಿವ ಶ್ರೀರಾಮುಲು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಮೈಸೂರಿನ ಸಿವಿಲ್ ಕಾಂಟ್ರಾಕ್ಟರ್ ಕುನಾಲ್‍ಗೆ ಐಐಬಿ ಪ್ರಶಸ್ತಿ

ಕಳೆದ ಬಾರಿ ಬಾದಾಮಿಯಲ್ಲಿ ಶ್ರೀರಾಮುಲು ಅವರು ಸಿದ್ದರಾಮಯ್ಯರಿಗೆ ಪ್ರಬಲ ಪೈಪೋಟಿ ನೀಡಿ ಸಿದ್ದು ಗೆಲುವಿಗೆ ಅಡ್ಡಿಯಾಗಿದ್ದರು. ಸಿದ್ದರಾಮಯ್ಯ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದರು. ನಂತರ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರ ತೊರೆಯುವ ಲಕ್ಷಣಗಳು ಕಂಡು ಬಂದಿದ್ದವು.

ಚಾಮರಾಜಪೇಟೆ ವರುಣಾ ಕ್ಷೇತ್ರದಲ್ಲಿ ಸ್ರ್ಪಸುವ ಮಾತುಗಳು ಕೇಳಿ ಬಂದಿದ್ದವಾದರು, ಇಂದು ಕೋಲಾರಕ್ಕೆ ಭರ್ಜರಿ ಎಂಟ್ರಿಕೊಟ್ಟು ಮತ್ತೆ ಕೋಲಾರಕ್ಕೆ ನಾಮಪತ್ರ ಸಲ್ಲಿಸಲು ಬರುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಅತ್ತ ಶ್ರೀರಾಮುಲು ಹೇಳಿಕೆ ನೀಡಿ ಅವರು ಎಲ್ಲೇ ಸ್ರ್ಪಧಿಸಿದರು ನಾವು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ತಿಳಿಸಿದರು.

ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನ ಕಾಂಗ್ರೆಸಿಗರನ್ನು ಮನೆಗೆ ಕಳಿಸುತ್ತಾರೆ : ಜೋಷಿ

ಡಿಕೆಶಿ ಪ್ರಭಾವ ಇಲ್ಲದ ಕ್ಷೇತ್ರ ಹುಡುಕಾಟ ನಡೆಸುತ್ತಿದ್ದಾರೆ. ಅವರಿಗೆ ಸೋಲಿನ ಭೀತಿ ಎದುರಾಗಿದೆ ಎಂದು ಶ್ರೀರಾಮುಲು ಟಾಂಗ್ ನೀಡಿದ್ದಾರೆ.

ವಿಶೇಷ ಬಸ್‍ನಲ್ಲಿ ಕೋಲಾರಕ್ಕೆ ಬಂದ ಸಿದ್ದರಾಮಯ್ಯ

ಚುನಾವಣಾ ಗಿಮಿಕ್ಕಿಗಾಗಿ ಕೋಲಾರದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಕೊನೆಗೆ ವರುಣಾ ಕ್ಷೇತ್ರದಿಂದಲೇ ಕಣಕ್ಕಿಳಿಯುವುದು. ಅಲ್ಲಿ ನಾವು ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಅವರು ಹೇಳಿದರು.
ರಾಜಕೀಯ ಪುನರ್ ಜನ್ಮ ನೀಡಿದ ಬಾದಾಮಿ ಕ್ಷೇತ್ರದ ಜನಕ್ಕೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಹೇಳಿದರು.

Articles You Might Like

Share This Article