ಮೃತ ಬಾಲ ಕಲಾವಿದೆ ಸಮನ್ವಿ ನಿವಾಸಕ್ಕೆ ಸಚಿವ ಸೋಮಶೇಖರ್ ಭೇಟಿ

Social Share

ಬೆಂಗಳೂರು, ಜ. 20 : ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಾಲಕಲಾವಿದೆ ಸಮನ್ವಿ ತಂದೆ ರೂಪೇಶ್ ಹಾಗೂ ತಾಯಿ ಅಮೃತ ನಾಯ್ಡು ಅವರನ್ನು ಭೇಟಿ ಮಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಗುಬ್ಬಲಾಳದಲ್ಲಿನ ಸಮನ್ವಿ ನಿವಾಸಕ್ಕೆ ತೆರಳಿದ ಸಚಿವರು, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ, ಸಾಂತ್ವನ ಹೇಳಿದರು. ಸಮನ್ವಿ ಬಾಲ ಕಲಾವಿದೆಯಾಗಿ ಜನರ ಮನಗೆದ್ದಿದ್ದಳು. ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಸಮನ್ವಿ ಚಿಕ್ಕ ವಯಸ್ಸಿನಲ್ಲೇ
ಅಪಾರ ಅಭಿಮಾನಿಗಳನ್ನು ಹೊಂದಿದ್ದಳು. ಆಕೆಯ ಸಾವು ನಿಜಕ್ಕೂ ದುರದೃಷ್ಟಕರ. ಅವರ ಕುಟುಂಬವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.

Articles You Might Like

Share This Article