ಡಿಕೆಶಿ- ಸಿದ್ದು ಉತ್ತರ ದಕ್ಷಿಣ : ಸಚಿವ ಸುಧಾಕರ್ ಟೀಕೆ

Social Share

ಮೈಸೂರು, ಅ. 27- ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಉತ್ತರ ದಕ್ಷಿಣ ಇದ್ದಂತೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ನಾನೊಂದು ತೀರ ನೀನೊಂದು ತೀರ ಎನ್ನುವಂತ್ತಿದ್ದಾರೆ. ಇವರಿಬ್ಬರಲ್ಲಿ ಒಗ್ಗಟ್ಟಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರು ಎಲ್ಲವನ್ನೂ ಕಲಿತಿದ್ದಾರೆ. ಆದರೆ, ಬಹುವಚನದಲ್ಲಿ ಮಾತನಾಡುವುದು ಕಲಿತಿಲ್ಲ ಎಂದರು. ಇತ್ತೀಚೆಗೆ ಯಾತ್ರೆ, ರ್ಯಾಲಿಗಳು ಹೆಚ್ಚಾಗುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚುನಾವಣೆ ಹತ್ತಿರ ಬರುತ್ತಿರುವುದರಿಂದ ಕಾಂಗ್ರೆಸ್ ನವರು ಜನರ ಸಮಸ್ಯೆ ಆಲಿಸಲು ಮುಂದಾಗುತ್ತಿದ್ದಾರೆ. ಹಾಗಾಗಿ ಈ ಯಾತ್ರೆ, ರ್ಯಾಲಿ ಎಂದವರು ವ್ಯಂಗ್ಯವಾಡಿದರು.

ನವೆಂಬರ್‌ನಲ್ಲೂ ಸಾಲು ಸಾಲು ಬ್ಯಾಂಕ್‍ ರಜೆ

ಯಾವ ಪಕ್ಷದವರು ಏನು ಕೆಲಸ ಮಾಡುತ್ತಿದ್ದಾರೆಂದು ಜನರಿಗೆ ಚೆನ್ನಾಗಿ ಗೊತ್ತಿದೆ ಎಂದ ಅವರು, ಕೋವಿಡ್ ಸಂದರ್ಭದಲ್ಲಿ ನಮ್ಮ ಸರ್ಕಾರ ಯಾವ ರೀತಿ ಕೆಲಸ ಮಾಡಿದೆ ಎಂಬುದು ರಾಜ್ಯದ ಜನರಿಗೆ ತಿಳಿದಿದೆ ಎಂದರು.

ಬಿಜೆಪಿಗೆ ಬಂದ ನಮ್ಮ ಟೀಂನ ಯಾವೊಬ್ಬರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಹೇಳಿ ವಿಶ್ವನಾಥ್ ಅವರು ನಮ್ಮ ಟೀಂನಲ್ಲಿ ಇರಲಿಲ್ಲ. ಬಹುಶಃ ಅವರೂ ಸಹ ಬಿಜೆಪಿ ಬಿಡುವುದಿಲ್ಲ ಎಂದು ಸುಧಾಕರ್ ಹೇಳಿದರು.

Articles You Might Like

Share This Article