ಮೈಸೂರು,ಆ.7- ಗಜಪಡೆ ಪೂಜೆ ವೇಳೆ ಅರಣ್ಯ ಸಚಿವ ಉಮೇಶ್ ಕತ್ತಿ ಎಡವಟ್ಟು ಮಾಡಿದ್ದಾರೆ. ಗಜಪಡೆಗೆ ಪೂಜೆ ಸಲ್ಲಿಸುವ ವೇಳೆ ಸಚಿವರು ಶೂ ಧರಿಸಿದ್ದು, ಇದೀಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ ಗಜಪಡೆಯ ಪಯಣಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರೆ ಗಣ್ಯರು ಬರಿಗಾಲಲ್ಲಿ ಬಂದಿದ್ದರೆ, ಸಚಿವ ಉಮೇಶ್ ಕತ್ತಿ ಮಾತ್ರ ಶೂ ಧರಿಸಿ ಪೂಜೆ ಸಲ್ಲಿಸಿದರು.
ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವಾಗ ಚಪ್ಪಲಿ, ಶೂ ಧರಿಸುವುದಿಲ್ಲ. ಆದರೆ, ಉಮೇಶ್ ಕತ್ತಿ ಎಲ್ಲವನ್ನೂ ಮರೆತು ಶೂ ಧರಿಸಿ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿದ್ದಾರೆ.