ಚರ್ಚೆ ವೇಳೆ ಸಚಿವರು, ಅಧಿಕಾರಿಗಳು ಹಾಜರಿಲ್ಲ : ಜೆಡಿಎಸ್ ಶಾಸಕರ ಆಕ್ಷೇಪ

Social Share

ಬೆಂಗಳೂರು,ಮಾ.9- ಅಯವ್ಯಯದ ಮೇಲೆ ಚರ್ಚೆ ನಡೆಯುವಾಗ ಸಚಿವರು, ಅಧಿಕಾರಿಗಳು ಹಾಜರಿಲ್ಲ. ಈ ರೀತಿಯಾದರೆ ಸದನ ಏಕೆ ನಡೆಸಬೇಕು ಎಂದು ಜೆಡಿಎಸ್ ಶಾಸಕರು ವಿಧಾನಸಭೆಯಲ್ಲಿಂದು ಆಕ್ಷೇಪಿಸಿದರು. 2022-23ನೇ ಸಾಲಿನ ಆಯವ್ಯಯದ ಚರ್ಚೆ ಆರಂಭಿಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಅವಕಾಶ ನೀಡಿದರು.
ಕುಮಾರಸ್ವಾಮಿ ಮಾತನಾಡಲು ಎದ್ದು ನಿಂತಾಗ ಸಚಿವರು ಹಾಗೂ ಅಧಿಕಾರಿಗಳ ಹಾಜರಾತಿ ಕೊರತೆ ಎದ್ದು ಕಾಣುತ್ತಿತ್ತು. ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಅನ್ನದಾನಿ, ಸಚಿವರು ಇಲ್ಲ , ಅಧಿಕಾರಿಗಳೂ ಇಲ್ಲ. ನಾವು ಮಾತನಾಡುವುದು ಬೇಡವೆಂದರೆ ಸಭಾತ್ಯಾಗ ಮಾಡುತ್ತೇವೆ ಎಂದರು.
ಇದಕ್ಕೆ ಜೆಡಿಎಸ್ ಸಚೇತಕ ವೆಂಕಟರಾವ್ ನಾಡಗೌಡ ಬೇಸರದಿಂದ ಸದನ ನಡೆಸುವುದು ಬೇಡ ಎಂದು ಆಕ್ಷೇಪಿಸಿದರು. ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಕಾನೂನು ಸಚಿವರು ಏನುಹೇಳುತ್ತಾರೋ ನೋಡೋಣ ಎನ್ನುತ್ತಾ, ಪ್ರಶ್ನೋತ್ತರ ಕಲಾಪ ಬೇಗ ಮುಗಿದ್ದರಿಂದ ಬರುವುದು ತಡವಾಗಿರಬಹುದು ಶುರು ಮಾಡಿ ಬರುತ್ತಾರೆ ಎಂದರು.
ಆಗ ಕಾನೂನು ಸಚಿವ ಮಾಧುಸ್ವಾಮಿ ಐದು ನಿಮಿಷ ಸಮಯ ಕೊಡಿ ಕರೆಸುತ್ತೇನೆ ಎಂದರು. ಆಗ ಜೆಡಿಎಸ್ ಶಾಸಕರು, ಅಲ್ಲಿಯವರೆಗೂ ಸಭೆಯನ್ನು ಮುಂದೂಡಿ ಎಂದು ಒತ್ತಾಯಿಸಿದರು. ಶಾಸಕ ಎ.ಟಿ.ರಾಮಸ್ವಾಮಿ, ಬಜೆಟ್ ಮೇಲೆ ಚರ್ಚೆ ನಡೆಯುವಾಗ ಆರ್ಥಿಕ ಅಧಿಕಾರಿಗಳೇ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಸಚಿವ ಕಾರಜೋಳ ಅವರು ನಾನು ಕೇಳಲು ಸಿದ್ದವಿದ್ದು, ನೋಟ್ ಮಾಡಿಕೊಳ್ಳುತ್ತೇನೆ ಮಾತನಾಡಲಿ ಎಂದರು. ಆಗ ಈ ವಿಚಾರಕ್ಕೆ ತೆರೆಬಿದ್ದಿತು.

Articles You Might Like

Share This Article