ರೆವಾ,ಫೆ.5- ಮೊಬೈಲ್ ಕಳ್ಳತನದ ಆರೋಪ ಹೊರಿಸಿದ್ದ ಕಾರಣಕ್ಕೆ 16 ವರ್ಷದ ಬಾಲಕನೊಬ್ಬ, ತನ್ನ ನೆರೆ ಮನೆಯ 58 ವರ್ಷದ ಮಹಿಳೆ ಮೇಲೆ ವಿಕೃತವಾಗಿ ಅತ್ಯಾಚಾರ ನಡೆಸಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ.
ಕೃತ್ಯವೆಸಗಿದ್ದಾಗಿ ಒಪ್ಪಿಕೊಂಡಿರುವ ಬಾಲಕನ ಮನಸ್ಥಿತಿ ಕಂಡು ಪೊಲೀಸರೆ ಬೆಚ್ಚಿ ಬಿದ್ದಿದ್ದಾರೆ. ರೇವಾ ಜಿಲ್ಲೆಯ ಹನುಮಾನ್ ಪೊಲೀಸ್ ಠಾಣೆಯ ಕೈಲಾಸಪುರಿ ಗ್ರಾಮದಲ್ಲಿ ಜನವರಿ 30ರಂದು ಕೃತ್ಯ ನಡೆದಿದೆ.
ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರಲ್ಲಿ ಭೀಕರವಾಗಿ ಕೊಲೆಯಾದ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪ್ರಕರಣ ದಾಖಲಿಸಿ ಮಹಿಳೆಯ ಕುಟುಂಬದ ಸದಸ್ಯರು ನೀಡಿದ ಸುಳಿವಿನ ಆಧಾರದ ಮೇಲೆ ತನಿಖೆ ಆರಂಭಿಸಿದರು.
ಯುವಜನರಿಗೆ ಆಕಾಶವೇ ಮಿತಿ : ಅವನಿ ಚತುರ್ವೇದಿ
ಕಳೆದ ಎರಡು ವರ್ಷದ ಹಿಂದೆ ನೆರೆಮನೆಯ ಬಾಲಕನೊಬ್ಬ ಮಹಿಳೆಯ ಮನಗೆ ಟಿವಿ ನೋಡಲು ಬರುತ್ತಿದ್ದ. ಆ ವೇಳೆ ಮೊಬೈಲ್ ಕಳ್ಳತನವಾಗಿದ್ದು ಅದನ್ನು ಬಾಲಕನೆ ಮಾಡಿರಬಹುದು ಎಂದು ಮಹಿಳೆಯ ಕುಟುಂಬ ಅನುಮಾನಿಸಿತ್ತು. ಇದರಿಂದ ಗ್ರಾಮದಲ್ಲಿ ಬಾಲಕ ಅವಮಾನವನ್ನು ಎದುರಿಸಿದ್ದ. ಅಂದಿನಿಂದ ಕುಟುಂಬದೊಂದಿಗೆ ದ್ವೇಷ ಬೆಳೆಸಿಕೊಂಡಿದ್ದ ಮತ್ತು ಪ್ರತಿಕಾರಕ್ಕೆ ಹವಣಿಸುತ್ತಿದ್ದ ಎನ್ನಲಾಗಿದೆ.
ಕೊಲೆ ನಡೆದ ದಿನ ಮಹಿಳೆಯ ಪತಿ ಮತ್ತು ಮಗ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಆಕೆಯ ಮನೆಗೆ ನುಗ್ಗಿದ ಬಾಲಕ ಮಂಚದ ಮೇಲೆ ಮಗಲಿದ್ದ ಮಹಿಳೆಯ ಮೇಲೆ ಅತಿಯಾದ ಬಲಪ್ರಯೋಗ ಮಾಡಿ ಕಟ್ಟಿ ಹಾಕಿದ್ದಾನೆ. ಆಕೆ ಕಿರುಚಲು ಯತ್ನಿಸಿದಾಗ ಪ್ಲಾಸ್ಟಿಕ್ ಮತ್ತು ಬಟ್ಟೆಯನ್ನು ಬಾಯಿಗೆ ತುರುಕಿದ್ದಾನೆ.
ನಂತರ ಪ್ಲಾಸ್ಟಿಕ್ ಚೀಲವನ್ನು ಆಕೆಯ ಮುಖಕ್ಕೆ ಹಗ್ಗ ಬಳಸಿ ಕಟ್ಟಿ ಉಸಿರು ಕಟ್ಟುವಂತೆ ಮಾಡಿದ್ದಾನೆ. ಆಕೆ ಕಿರುಚಲು ಆಗದೆ, ಉಸಿರಾಡಲು ಆಗದೇ ನರಳುತ್ತಿರುವಾಗ ಹತ್ತಿರದ ನಿರ್ಮಾಣ ಹಂತದ ಕಟ್ಟಡದೊಳಗೆ ಎಳೆದುಕೊಂಡು ಹೋಗಿದ್ದಾನೆ.
ಅಲ್ಲಿ ಬಾಗಿಲಿಗೆ ಮಹಿಳೆಯನ್ನು ಕಟ್ಟಿ ಹಾಕಿ ಉಸಿರಾಡಲು ಆಗದೆ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಆಕೆಯ ಮೇಲೆ ಪದೇ ಪದೇ ಹಲ್ಲೆ ನಡೆಸಿದ್ದು, ಅತ್ಯಾಚಾರವೆಸಗಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿ ಚಲನೆ ರಹಿತಳಾದ ಆಕೆಯ ಕೈ, ತಲೆ, ಕತ್ತು, ಎದೆ ಭಾಗಕ್ಕೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ.
ಖಾಸಗಿ ಅಂಗವನ್ನು ಛೇಸಿ, ಕಡ್ಡಿಯಿಂದ ಘಾಷಿಗೊಳಿಸಿದ್ದಾನೆ. ಬಳಿಕ ಮಹಿಳೆಯ ಮನೆಯಲ್ಲಿದ್ದ ಒಂದು ಸಾವಿರ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಧೋನಿಗಾಗಿ ನಂತರ ದೇಶಕ್ಕಾಗಿ ಕ್ರಿಕೆಟ್ ಆಡಿದ್ದೇನೆ : ರೈನಾ
ಸುಳಿವಿನ ಆಧಾರದ ಮೇಲೆ ಪೊಲೀಸರು ಬಾಲಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿರೆ 302 ಕೊಲೆ, 376 ಅತ್ಯಾಚಾರ, 460 ಮನೆಗೆ ಅತಿಕ್ರಮ ಪ್ರವೇಶ, 380 ಕಳ್ಳತ, 201 ಸಾಕ್ಷ ನಾಶ ಸೇರಿದಂತೆ ಹಲವು ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ವಿವೇಕ್ ಲಾಲ್ ತಿಳಿಸಿದ್ದಾರೆ.
Minor boy, rapes, kills, 53-yr-old, woman, suspected, revenge,