ಖ್ಯಾತ ನಟ ಶಹನವಾಜ್ ಪ್ರಧಾನ್ ನಿಧನ

Social Share

ಮುಂಬೈ,ಫೆ.18-ಮಿರ್ಜಾಪುರ್ ಮತ್ತು ರೈಸ್ ಮತ್ತಿತರ ವೆಬ್‍ಸೀರಿಸ್‍ಗಳಲ್ಲಿ ನಟಿಸಿ ನಾಡಿನಲ್ಲಿ ಮನೆಮಾತಾಗಿದ್ದ ಶಹನವಾಜ್ ಪ್ರಧಾನ್ ಅವರು ಹೃದಯಘಾತದಿಂದ ನಿಧನ ಹೊಂದಿದ್ದಾರೆ.

ನಿನ್ನೆ ಸಂಜೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಶಹನವಾಜ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕೋಕಿಲಾಬೆನ್ರೂ ಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಸಾವನ್ನಪ್ಪಿದ್ದಾರೆ ಎಂದು ನಟ ಯಶ್‍ಪಾಲ್ ಶರ್ಮಾ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಗಡಿಯಲ್ಲಿ ಕಳ್ಳಸಾಗಣಿಕೆ ಯತ್ನ ತಡೆದ ಬಿಎಸ್‍ಎಫ್ ಯೋಧರು

ಕಾರ್ಯಕ್ರಮ ಅದ್ಭುತವಾಗಿತ್ತು. ನೂರಾರು ಕಲಾವಿದರು ಹಾಜರಿದ್ದರು ಆದರೆ ಪ್ರಶಸ್ತಿ ಸ್ವೀಕರಿಸಿದ ಸ್ವಲ್ಪ ಸಮಯದಲ್ಲೇ ನಮ್ಮ ಪ್ರೀತಿಯ ಕಲಾವಿದ ಶಹನವಾಜ್ ಇನ್ನಿಲ್ಲವಾದದ್ದು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಶಹನವಾಜ್ ನಿಧನಕ್ಕೆ ಬಾಲಿವುಡ್‍ನ ಖ್ಯಾತನಾಮರು ಕಂಬನಿ ಮಿಡಿದಿದ್ದಾರೆ.

#Mirzapur, #Actor, #ShahnawazPradhan, #Dies,

Articles You Might Like

Share This Article