ಢಾಖಾ, ಫೆ.6- ಬಾಂಗ್ಲಾದೇಶದಲ್ಲಿ ಸುಮಾರು 14 ಹಿಂದೂ ದೇವಾಲಯಗಳ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿ ದೇವರ ವಿಗ್ರಹಗಳನ್ನು ಧ್ವಂಸ ಮಾಡಿದೆ. ದೇಶದ ವಾಯುವ್ಯ ಪ್ರದೇಶದ ಠಾಕೂರ್ಗಾಂವ್‍ನ ಬಲಿಯಾದಂಗಿಯಲ್ಲಿ ಈ ಘಟನೆ ನಡೆದಿದ್ದು ಇದರಿಂದ ಹಿಂದೂಗಳು ಭಯಭೀತರಾಗಿದ್ದಾರೆ.
ಕೋಲು ಮತ್ತಿತರ ಆಯುಧಗಳೊಂದಿಗೆ ಬಂದ ದುಷ್ಕರ್ಮಿಗಳು ದೇವಸ್ಥಾನಗಳಿಗೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ ಅನೇಕ ವಿಗ್ರಹಗಳು ತುಂಡುಗಳಾಗಿ ಮುರಿದು ಕೊಳಕ್ಕೆ ಎಸೆದಿದ್ದಾರೆ. ದಾಳಿ ಮಾಡಿದ ಆರೋಪಿಗಳನ್ನು ಗುರುತಿಸಲಾಗಿದ್ದು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಟರ್ಕಿ, ಸಿರಿಯಾದಲ್ಲಿ ಭಾರಿ ಭೂಕಂಪ, 95 ಮಂದಿ ಸಾವು
ವಿಧ್ವಂಸಕ ಘಟನೆಯನ್ನು ಖಂಡಿಸಿರುವ ಹಿಂದೂ ಸಮುದಾಯದ ಮುಖಂಡ ಬಿದ್ಯನಾಥ್ ಬರ್ಮನ್ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ದುಷ್ಕರ್ಮಿಗಳು ಕತ್ತಲೆಯಲ್ಲಿ ಒಮ್ಮಲೆ ದಾಳಿ ನಡೆಸಿದ್ದಾರೆ. ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿ ವಾಸಿಸುವ ಹಿಂದೂಗಳು ತಮ್ಮ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ. ಕೂಡಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Miscreants, vandalise, 14 Hindu, temples, northwestern, Bangladesh,