ಕುಡಿದು ಚಿತ್ ಆಗಿದ್ದರಿಂದ ಮಹಿಳೆ ಮೇಲೆ ಮೂತ್ರ ಮಾಡಿದ್ದ ಮಿಶ್ರಾ

Social Share

ನವದೆಹಲಿ,ಜ.9- ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಶಂಕರ್ ಮಿಶ್ರಾ ಅವರು ಅಂದು ಕುಡಿದು ಚಿತ್ ಆಗಿದ್ದರು ಎಂದು ಸಹ ಪ್ರಯಾಣಿಕರೊಬ್ಬರು ಬಾಯ್ಬಿಟ್ಟಿದ್ದಾರೆ.

ಕಳೆದ ನ.26ರಂದು ಏರ್ ಇಂಡಿಯಾ ವಿಮಾನದಲ್ಲಿ ನ್ಯೂಯಾರ್ಕ್‍ನಿಂದ ದೆಹಲಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಶಂಕರ್ ಮಿಶ್ರಾ ಅವರ ಪಕ್ಕದ ಆಸನದಲ್ಲಿದ್ದ ಅಮೆರಿಕ ಮೂಲದ ವೈದ್ಯೆ ಸುಗತ ಭಟ್ಟಾಚಾರ್ಯ ಅವರು ಈ ವಿಷಯ ಬಾಯ್ಬಿಟ್ಟಿದ್ದಾರೆ.

ಅಂದು ಮಿಶ್ರಾ ಅವರು ಪಕ್ಕದಲ್ಲಿ ಕುಳಿತಿದ್ದ ನನಗೆ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದರು ಮಾತ್ರವಲ್ಲ ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಿದ್ದರು ಅವರ ವರ್ತನೆ ಬಗ್ಗೆ ನಾನು ವಿಮಾನ ಸಿಬ್ಬಂದಿಗಳ ಗಮನಕ್ಕೆ ತಂದರೂ ಅವರು ಕೇವಲ ಮುಗುಳ್ನಕ್ಕೂ ಸುಮ್ಮನಾದರು ಎಂದು ಅವರು ಹೇಳಿದ್ದಾರೆ.

ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಗ್ಯಾಂಗ್ ಸೆರೆ

ಆಗ ನಾನೆ ಏಕೆ ಇಷ್ಟೊಂದು ಮದ್ಯಪಾನ ಮಾಡಿದ್ದೀರಿ ಎಂದಾಗ ಅವರು ಬಹಳ ದಿನಗಳಿಂದ ನಿದ್ದೆ ಮಾಡದ ಕಾರಣ ಮದ್ಯಪಾನ ಮಾಡುತ್ತಿದ್ದೆ ಎಂದು ನನಗೆ ಹೇಳಿದ್ದರು ಎನ್ನುವುದನ್ನು ಅವರು ಸ್ಮರಿಸಿಕೊಂಡಿದ್ದಾರೆ.

ನಾವು ಮಾತನಾಡುತ್ತಿದ್ದಂತೆ ಎದ್ದು ಹೋದ ಮಿಶ್ರಾ ಅವರು ಏಕಾಏಕಿ ವಯಸ್ಸಾದ ಮಹಿಳಾ ಪ್ರಯಾಣಿಕರ ಬಳಿಗೆ ತೆರಳಿ ಜಿಪ್ ತೆಗೆದು ಮೂತ್ರ ಮಾಡಿದರು. ಈ ಘಟನೆ ಕುರಿತಂತೆ ನಾನೆ ಏರ್‍ಲೈನ್ಸ್‍ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದಿದ್ದಾರೆ ಅವರು.

Mishra, Air India, Co-Passenger, Shreds, Pee-Gate,

Articles You Might Like

Share This Article