ಲೂಸಿಯಾನ,ಜ.15-ಇಲ್ಲಿನ ನ್ಯೂ ಓರ್ಲಿಯನ್ಸ್ನ ನ್ಯೂ ಓರ್ಲಿಯನ್ಸ್ ಮೋರಿಯಲ್ ಕನ್ವೆನ್ಷನ್ ಸೆಂಟರ್ನಲ್ಲಿ ಜಗಮಗಿಸುವ ವಾತಾವರಣದಲ್ಲಿ ಅಮೆರಿಕದ ಆರ್.ಬೊನಿ ಗೇಬ್ರಿಯಲ್ ಭುವಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ತೀವ್ರ ನಿರೀಕ್ಷೆ ಮೂಡಿಸಿದ್ದ 71ನೇ ಭುವನ ಸುಂದರಿ ಆವೃತ್ತಿಯಲ್ಲಿ ವಿಶ್ವದ ಬಹುತೇಖ ದೇಶಗಳ ಸುಂದರಿಯರು ಭಾಗವಹಿಸಿದ್ದರು ಮುದ್ದು ಕಂಗಳ ಚತುರೆ ಅಮೆರಿಕದ ಬೊನಿ ಗೇಬ್ರಿಯಲ್ ವಿಶ್ವ ಸುಂದರಿಯಾಗಿ ಆಯ್ಕೆಯಾದರು.ಫ್ಯಾಶನ್ ಡಿಸೈನರ್,ಮಾಡಲ್ ಆಗಿರುವ 28ರ ಹರೆಯದ ಗೇಬ್ರಿಯಲ್ ಪರಿಸರ ಕ್ಷೇತ್ರದಲ್ಲಿ ತೊಡಗಿದ್ದಾರೆ .
ಡೊಮಿನಿಕನ್ ರಿಪಬ್ಲಿಕ್ನ ಆಂಡ್ರೇನಾ ಮಾರ್ಟಿನೆಜï, ವೆನೆಜುವೆಲಾದ ಅಮಂಡಾ ಡುಡಾಮೆಲ್ 2 ಹಾಗು ಮೂರನೆ ಸ್ಥಾನ ಪಡೆದರು.
ಟಾಪ್ 16 ರ ಸ್ಥಾನದಲ್ಲಿ ಭಾರತದ ದಿವಿತಾ ರೈ ಅವರು ಕಾಣಿಸಿಕೊಂಡಿದ್ದರು ಆದರೆ ಕೊನೆ ಹಂತದಲ್ಲಿ ಸ್ಪರ್ಧೆಯಿಂದ ಪರಾಭವಗೊಂಡರುಈ ಹಿಂದೆ ಭಾರತದ ಚಲುವೆಯರಾದ ಸುಶ್ಮಿತಾ ಸೇನ್ 1994 ನಂತರ 2000 ಲಾರಾ ದತ್ತಾ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಜಯಿಸಿದ್ದರು.
#MissUSA, #RBonneyGabriel, #crowned, #MissUniverse2022,