ಬೆಂಗಳೂರು,ಜ.12-ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ನ್ಯೂಜಿಲೆಂಡ್‍ನ ಸ್ಟಾರ್ ಆಲ್‍ರೌಂಡರ್ ಮಿಚೆಲ್ ಸ್ನಾಂಟರ್ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಪಾಕಿಸ್ತಾನ ವಿರುದ್ಧ ಇಂದಿನಿಂದ (ಜನವರಿ 12) ಐದು ಪಂದ್ಯಗಳ ಟ್ವೆಂಟಿ- 20 ಸರಣಿ ಅಂಗವಾಗಿ ಮೊದಲ ಪಂದ್ಯವು ಅಕ್ಲೆಂಡ್‍ನ ಈಡನ್ ಪಾರ್ಕ್‍ನಲ್ಲಿ ನಡೆಯಲಿದ್ದು ಸ್ನಾಂಟರ್ ಅವರಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ರಾಮಮಂದಿರ ಬಗ್ಗೆ ಭಾವನಾತ್ಮಕವಾಗಿದ್ದೇನೆ ; ಪ್ರಧಾನಿ ಮೋದಿ
`ಮಿಚೆಲ್ ಸ್ನಾಂಟರ್ ಅವರಿಗೆ ಬೆಳಗ್ಗೆ ಕೊರೊನಾ ಸೋಂಕು ತಗುಲಿರುವುದರಿಂದ ಇಂದು ಸಂಜೆ ಅಕ್ಲೆಂಡ್‍ನ ಈಡನ್ ಪಾರ್ಕ್‍ನಲ್ಲಿ ನಡೆಯಲಿರುವ ಕೆಎಫ್‍ಸಿ ಟಿ- 20 ಪಂದ್ಯದಿಂದ ದೂರ ಉಳಿದಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಗಾಗಿರುವ ಅವರ ವರದಿಗಳು ಬಂದ ನಂತರ ಸ್ನಾಂಟರ್ ಏಕಾಂಗಿಯಾಗಿಯೇ ಹ್ಯಾಮಿಲ್ಟನ್‍ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಕ್ರಿಕೆಟ್ ಮಂಡಳಿ ಟ್ವಿಟ್ ಮೂಲಕ ತಿಳಿಸಿದೆ.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಆಲ್ ರೌಂಡರ್ ಪ್ರದರ್ಶನದಿಂದ 16 ವಿಕೆಟ್ ಪಡೆದಿದ್ದರು. ಕೇನ್ ವಿಲಿಯಮ್ಸ್ ಅನುಪಸ್ಥಿತಿಯಲ್ಲಿ ಮಿಚೆಲ್ ಸ್ನಾಂಟರ್ ಅವರು ತಂಡವನ್ನು ಮುನ್ನಡೆಸಿದ್ದರು. 2023ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‍ಕೆ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.