ಶಾಸಕ ಅರವಿಂದ ಲಿಂಬಾವಳಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

Social Share

ಬೆಂಗಳೂರು,ಜ.3- ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣದಲ್ಲಿ ಕೇಳಿ ಬಂದಿರುವ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರನ್ನು ಬಂಧಿಸುವಂತೆ ಕಾಂಗ್ರೆಸ್ ನಾಯಕರ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿಂದು ಪ್ರದೀಪ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಣದೀಪ್ ಸುರ್ಜೆವಾಲಾ, ಪ್ರದೀಪ್ ಸಾವು ಆತ್ಮ ಹತ್ಯೆಯಲ್ಲ, ಅದೊಂದು ಕೊಲೆ. ಅದಕ್ಕೆ ಕಾರಣರಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು. ಕೂಡಲೇ ಅವರನ್ನು ಬಂಧಿಸಿ ಕಂಬಿ ಹಿಂದೆ ಕಳಿಸಬೇಕು ಎಂದು ಒತ್ತಾಯಿಸಿದರು.

ಪ್ರದೀಪ್ ಅವರ ಮಗಳು, ಪತ್ನಿಯ ಕಣ್ಣೀರು ಒರೆಸಲು ಬಿಜೆಪಿ ಸರ್ಕಾರದ ಕೈನಲ್ಲಿ ಸಾಧ್ಯವಿದೆಯಾ? ಭ್ರಷ್ಟಾಚಾರದಿಂದಾಗಿಯೇ ಇದೆಲ್ಲ ಆಗುತ್ತಿದೆ. ಪ್ರದೀಪ್ ಕುಟುಂಬಕ್ಕೆ ರಿಪೇರಿ ಮಾಡಲಾಗದಷ್ಟು ನೋವಾಗಿದೆ.

ಕುಟುಂಬದ ದುಃಖ ಹಂಚಿಕೊಳ್ಳಲು ಬಂದಿದ್ದೇವೆ. ಪ್ರದೀಪ್ ಅತಿರೇಕದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಗುತ್ತಿಗೆದಾರರಾದ ಸಂತೋಷ್ ಪಾಟೀಲ್, ಪ್ರಸಾದ್, ಉದ್ಯಮಿ ಪ್ರದೀಪ್ ಇವೆಲ್ಲ ಕೇವಲ ಹೆಸರುಗಳಲ್ಲ. ಭ್ರಷ್ಟ ಸರ್ಕಾರದಿಂದ ಆಗುತ್ತಿರುವ ಸಾವುಗಳು. ಶೇ.40 ಕಮಿಷನ್ ಹಾವಳಿಯಿಂದಾಗಿ ಜೀವದ ಮೇಲೆ ಜೀವ ಬಲಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್

ಗುತ್ತಿಗೆದಾರ ಸಂತೋಷ್ ಪಾಟೀಲ್ ಕೂಡ ಬಿಜೆಪಿಯ ಮುಖಂಡರಾಗಿದ್ದರು ಅವರಿಗೂ ಹಣಕಾಸಿನ ಸಮಸ್ಯೆಯಾಗಿತ್ತು. ಪ್ರಸಾದ್ ಸಾವಿಗೂ ಹಣಕಾಸಿನ ಸಮಸ್ಯೆಯೇ ಕಾರಣವಾಗಿತ್ತು. ಪ್ರದೀಪ್ ಸಾವಿನ ಪ್ರಕರಣದಲ್ಲೂ ಹಣಕಾಸಿನ ಸಮಸ್ಯೆ ಕಂಡು ಬಂದಿದೆ. ಬಿಜೆಪಿ ನಾಯಕರು ಯಾಕೆ ಹಣಕಾಸಿನ ವ್ಯವಹಾರಗಳಲ್ಲಿ ತಲೆ ಹಾಕುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಇದು ನಡೆಯಬಾರದಾಗಿದ್ದ ಘಟನೆ. ಹಣಕಾಸಿನ ವ್ಯವಹಾರದಲ್ಲಿ ಈ ಸಾವು ಸಂಭವಿಸಿದೆ. ಪ್ರದೀಪ್ ಪತ್ನಿ ನ್ಯಾಯ ಕೊಡಿಸಿ ಅಂತ ಕೇಳುತ್ತಿದ್ದಾರೆ. ಒಂದುವರೆ ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾಗಿ ಹೇಳುತ್ತಿದ್ದಾರೆ. ಒಂದೇ ಒಂದು ಪೈಸೆ ಲಾಭ ಬಂದಿಲ್ಲ. ನಮ್ಮ ಹಣ ವಾಪಸ್ ಕೊಡಿ ಎನ್ನುವುದು ಅವರ ವಾದ.

ಬಿಜೆಪಿಯ ಅರವಿಂದ ಲಿಂಬಾವಳಿ ಈ ಭಾಗದ ಶಾಸಕರು. ಪ್ರದೀಪ್ ಮತ್ತು ಇತರರ ನಡುವೆ ಸೆಟ್ಲಮೆಂಟ್ ಮಾಡಿದ್ದಾರೆ. ಪ್ರದೀಪ್ ಸಾವಿಗೂ ಮುನ್ನಾ ಬರೆದ ಡೆತ್ ನೋಟ್ ನಲ್ಲಿ 6 ಜನರ ಹೆಸರು ಇದೆ. ಅದರಲ್ಲಿ ಲಿಂಬಾವಳಿಯ ಹೆಸರೂ ಇದೆ. ಈಗಾಗಲೇ ಎಫ್‍ಐಆರ್ ಆಗಿದೆ. ಪೊಲೀಸರು ಹಣವನ್ನು ವಾಪಸ್ ಕೊಡಿಸಬೇಕು ಮತ್ತು ಆರೋಪಿ ಸ್ಥಾನದಲ್ಲಿರುವ ಎಲ್ಲರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು.

ಕಂಜಾವಾಲ ಅಪಘಾತದ ವೇಳೆ ಸ್ನೇಹಿತೆ ಸ್ಥಳದಿಂದ ಪರಾರಿ

ಪ್ರದೀಪ್ ಸಾವಿಗೆ ಕಾರಣವಾದರ ಮೇಲೆ ಕಾನೂನು ಕ್ರಮ ಆಗಲೇಬೇಕು. ಸರ್ಕಾರ ತಪಿತಸ್ಥರಿಗೆ ಶಿಕ್ಷೆಯಾಗುವಂತೆ ಎಚ್ಚರಿಕೆ ವಹಿಸಬೇಕು. ಶಾಸಕರಿರಲಿ, ಯಾರೇ ಇರಲಿ. ತಪ್ಪು ಯಾರು ಮಾಡಿದ್ದರೂ ಅದು ತಪ್ಪೇ, ಕಾನೂನು ಪ್ರಕಾರ ಕ್ರಮ ಆಗಬೇಕು ಎಂದರು.

ಶಾಸಕರನ್ನು ಬಂಧಿಸಬೇಕು, ಇಲ್ಲವಾದರೆ ಸಾಕ್ಷಿ ನಾಶ ಮಾಡಬಹುದು. ಪೊಲೀಸರು ಪ್ರದೀಪ್ ಮನೆಯವರ ಮೊಬೈಲ್‍ಗಳನ್ನು ಕೇಳುತ್ತಿದ್ದಾರೆ ಅಂತೆ. ಹೀಗೆಲ್ಲ ಮಾಡೋದು ಸರಿಯಲ್ಲ. ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಈ ಮೊದಲು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ತಮ್ಮ ಸಾವಿಗೆ ಈಶ್ವರಪ್ಪ ಕಾರಣ ಎಂದು ಹೇಳಿದ್ದರು. ಆ ತನಿಖೆ ನಡೆದು 3 ತಿಂಗಳಲ್ಲಿ ಬಿ ವರದಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲೂ ಅದೇ ರೀತಿಯಾಗಬಾರದು ಎಂದು ಎಚ್ಚರಿಸಿದರು.

ಈ ಸರ್ಕಾರದ ಆಡಳಿತದಲ್ಲಿ ಅನೇಕ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇನ್ನೂ ಕೆಲವರು ದಯಾ ಮರಣ ಕೇಳುತ್ತಿದ್ದಾರೆ. ಇದಕ್ಕೆಲ್ಲಾ ಭ್ರಷ್ಟಾಚಾರವೇ ಕಾರಣ. ಭ್ರಷ್ಟರ ವಿರುದ್ಧ ಸರಿಯಾಗಿ ಕ್ರಮ ತೆಗೆದುಕೊಳ್ಳದೇ ಇರುವುದಕ್ಕೆ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು.

ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಇದೇ ವೇಳೆ ಸಂತಾಪ ಸೂಚಿಸಿದ ಸಿದ್ದರಾಮಯ್ಯ, ಅವರು ಮಹಾ ಸಂತರು. ಪ್ರಚವಚನ ಮೂಲಕ ಜಾಗೃತಿ ಮೂಡಿಸುತ್ತಿದ್ದರು. ಅತ್ಯಂತ ಸರಳವಾಗಿ ಬದುಕಿದ್ದರು. ನುಡಿದಂತೆ ನಡೆದವರು. ಬಸವಣ್ಣನ ತತ್ವ ಆದರ್ಶ ಪಾಲಿಸಿದರು. ಶ್ರೀಗಳು ಲಿಂಗೈಕ್ಯ ಆಗಿರೋದು ನಾಡಿಗಾದ ದೊಡ್ಡ ನಷ್ಟ ಎಂದರು.

MLA Arvind Limbavali arrest Congress demands

Articles You Might Like

Share This Article