ಬೆಂಗಳೂರು,ಮಾ.7- ವಿಧಾನಸಭೆಯಲ್ಲಿಂದು ಶಾಸಕರ ಹಾಜರಾತಿ ಪ್ರಮಾಣ ವಿರಳವಾಗಿತ್ತು. ಹಾಗೆಯೇ ಪ್ರೇಕ್ಷಕರ ಗ್ಯಾಲರಿಯು ಭಣಗುಡುತ್ತಿತ್ತು.
ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಶಾಸಕರ ಹಾಜರಾತಿ ಕೊರತೆ ಎದ್ದುಕಾಣುತ್ತಿತ್ತು. ಆಡಳಿತ ಮತ್ತು ಪ್ರತಿಪಕ್ಷಗಳ ಸಾಲಿನಲ್ಲೂ ಸದಸ್ಯರ ಹಾಜರಾತಿ ವಿರಳವಾಗಿತ್ತು.
ಬಜೆಟ್ ಅಧಿವೇಶನದ 2ನೇ ದಿನವಾದ ಇಂದು ಕೂಡ ಪೂರ್ಣ ಪ್ರಮಾಣದಲ್ಲಿ ಶಾಸಕರ ಹಾಜರಾತಿ ಇರಲಿಲ್ಲ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನದ ಕಾರ್ಯಕಲಾಪಗಳಲ್ಲಿ ಪ್ರತಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಪ್ರತಿಯೊಬ್ಬರು ಸದನಕ್ಕೆ ಹಾಜರಾಗಬೇಕು ಎಂದು ಪದೇ ಪದೇ ಮನವಿ ಮಾಡುತ್ತಾ ಬಂದಿದ್ದಾರೆ. ಆದರೂ ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಶಾಸಕರ ಹಾಜರಾತಿ ಗರಿಷ್ಠ ಪ್ರಮಾಣದಲ್ಲಿ ಇರಲಿಲ್ಲ.
