ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅತ್ಯುತ್ತಮ ಶಾಸಕ ಪ್ರಶಸ್ತಿ

Social Share

ಬೆಳಗಾವಿ,ಡಿ.28- ಕಾಂಗ್ರೆಸ್‍ನ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿ ಇಂದು ಗೌರವಿಸಲಾಯಿತು. ನಿಗದಿತ ಸಮಯಕ್ಕಿಂತ ಅರ್ಧಗಂಟೆ ತಡವಾಗಿ ವಿಧಾನಸಭೆ ಪ್ರಾರಂಭವಾದಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆರ್.ವಿ.ದೇಶಪಾಂಡೆ ಅವರನ್ನು ಆಯ್ಕೆ ಮಾಡಿರುವುದಾಗಿ ಪ್ರಕಟಿಸಿದರು.

ಕಳೆದ 1995ರಿಂದಲೂ ಸಂಸತ್‍ನಲ್ಲಿ ಅಸಾಧಾರಣ ಸಂಸದೀಯ ಪಟ್ಟು ಪ್ರಶಸ್ತಿ ನೀಡಿ ಗೌರವಿಸುವುದು ರೂಢಿಯಲ್ಲಿದೆ. ಅದೇ ರೀತಿ ಅನೇಕ ರಾಜ್ಯಗಳಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗುತ್ತಿದೆ. ಸಂಸದೀಯ ವ್ಯವಸ್ಥೆಯಲ್ಲಿ ವಿಧಾನಮಂಡಲದ ಕಲಾಪದ ಚರ್ಚೆ ಭಾಗವಹಿಸಿದವರನ್ನು ಗುರುತಿಸುವುದು ವ್ಯವಸ್ಥೆಗೆ ಶಕ್ತಿ ಕೊಡುವ ಕೆಲಸವಾಗಲಿದೆ.

ನಮ್ಮ ರಾಜ್ಯದಲ್ಲೂ ಅತ್ಯುತ್ತಮ ಸಂಸದೀಯಪಟು, ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಕಾರಣಾಂತರಗಳಿಂದ ಮಧ್ಯೆ ಮಧ್ಯೆ ನೀಡಲು ಆಗಿರಲಿಲ್ಲ. ಈಗಾಗಲೇ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸುವ ಬಗ್ಗೆ, ಚುನಾವಣೆ ಸುಧಾರಣೆ ಬಗ್ಗೆ ಚರ್ಚೆ ನಡೆಸಲಾಗಿದೆ. ಕಳೆದ 2021ರಿಂದ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡುವುದು ಮರು ಜಾರಿಯಾಗಿದೆ.

ಕಳೆದ ವರ್ಷ ಲೋಕಸಭಾ ಅಧ್ಯಕ್ಷರಾದ ಓಂ ಬಿರ್ಲಾ ಅವರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಿದ್ದೆವು. ಈ ಪ್ರಶಸ್ತಿ ಆಯ್ಕೆಗೆ ಸಭಾಧ್ಯಕ್ಷರು, ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರು, ಕಾನೂನು ಸಚಿವರು ಒಳಗೊಂಡ ಸಮಿತಿ ರಚಿಸಲಾಗಿತ್ತು.

ಪ್ರಧಾನಿ ಮೋದಿ ತಾಯಿ ಹೀರಾ ಬೇನ್ ಆರೋಗ್ಯದಲ್ಲಿ ಏರುಪೇರು

ಕಳೆದ ಸೆ.15ರಂದು 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ವರನ್ನು ಸರ್ವಾನುಮತದಿಂದ ಸಮಿತಿಯಿಂದ ಆಯ್ಕೆ ಮಾಡಲಾಯಿತು ಎಂದು ಪ್ರಕಟಿಸಿದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಬಳಿಕ ಮಾತನಾಡಿದ ಸಭಾಧ್ಯಕ್ಷರು 1983ರಲ್ಲಿ ವಿಧಾನಸಭೆಗೆ ಮೊದಲ ಬಾರಿಗೆ ದೇಶಪಾಂಡೆ ಆಯ್ಕೆಯಾಗಿದ್ದರು. 8 ಬಾರಿ ಆಯ್ಕೆಯಾಗಿರುವ ಹಿರಿಯ ಶಾಸಕರಾಗಿದ್ದು, ವಿವಿಧ ಖಾತೆಗಳ ಸಚಿವರಾಗಿದ್ದು ಸೇವೆ ಸಲ್ಲಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮಾರ್ಗದರ್ಶನದಲ್ಲಿ ಬೆಳೆದವರು. ಸುಮಾರು 10 ಮಂದಿ ಮುಖ್ಯಮಂತ್ರಿಗಳ ಜೊತೆ ಸೇವೆ ಸಲ್ಲಿಸಿದ ಅನುಭವವಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, 2004ರಲ್ಲಿ ಹಂಗಾಮಿ ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಸಾಹಿತ್ಯ ಲೋಕದ ಅಪ್ಪಟ ಕವಿಕೋಗಿಲೆ ರಸಋಷಿ ಕುವೆಂಪು

ಸದನದ ಚೌಕಟ್ಟಿನಲ್ಲಿ ಮಾತನಾಡುವವರಾಗಿದ್ದು, ಹಳಿಯಾಳದಲ್ಲಿ ತುಳಜಾ ಭವಾನಿ ದೇವಾಲಯ ನಿರ್ಮಿಸಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು. ಅಷ್ಟೇ ಅಲ್ಲ ಶಿಕ್ಷಣ ಕ್ಷೇತ್ರಕ್ಕೂ ಸೇವೆ ಸಲ್ಲಿಸಿದ್ದಾರೆ. ಅವರು ಸ್ಥಾಪಿಸಿದ ರುಡ್ ಶೆಡ್ ನಿಂದ ಯುವಕರ ಉದ್ಯೋಗಕ್ಕೆ ಅನುಕೂಲವಾಗಿದೆ. ಅವರು ಆಲಸಿಗಳಲ್ಲ ಕಠಿಣ ಪರಿಶ್ರಮವುಳ್ಳವರು ಎಂದು ಅಭಿನಂದಿಸಿದರು.

ಬಳಿಕ ದೇಶಪಾಂಡೆ ಅವರಿಗೆ ಸಭಾಧ್ಯಕ್ಷರ ಪೀಠದ ಬಳಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ದೇಶಪಾಂಡೆ ಅವರಿಗೆ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಆರ್.ವಿ.ದೇಶಪಾಂಡೆ ಅವರಿಗೆ ನೀಡಿರುವುದರಿಂದ ಪ್ರಶಸ್ತಿಯ ಗೌರವ ಹೆಚ್ಚಾಗಿದೆ. 8 ಬಾರಿ ಶಾಸಕರಾಗಿ ಅವರು ವಿಧಾನಸಭೆಯ ನಡುವಳಿಕೆಯನ್ನು ಪಾಲಿಸಿದ್ದಾರೆ. ಅವರ ಆಯ್ಕೆ ಅತ್ಯುತ್ತಮವಾಗಿದೆ.

ಹಿಂದುಳಿದಿದ್ದ ಅವರ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ರಾಜ್ಯದ, ದೇಶದ ಹಿತಕ್ಕಾಗಿ ಸದಾಕಾಲ ಚಿಂತಿಸುವವರು. 1983ರಲ್ಲಿ ದೊಡ್ಡ ತಂಡವೇ ಶಾಸನ ಸಭೆ ಪ್ರವೇಶಿಸಿ ರಾಜಕೀಯದಲ್ಲಿ ಬದಲಾವಣೆಯಾಯಿತು. ಆಗ ದೇಶಪಾಂಡೆಯವರು ಶಾಸಕರಾಗಿ ದಕ್ಷತೆಯಿಂದ ನಿರ್ವಹಿಸಿದ್ದಾರೆ. ಕೈಗಾರಿಕಾ ನೀತಿ ರೂಪಿಸುವಲ್ಲಿ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ.

ಆನ್‌ಲೈನ್‌ನಲ್ಲಿ ಆಸ್ತಿ ವಿವರಗಳ ವ್ಯವಸ್ಥೆ, ನಕಲಿ ದಾಖಲೆಗೆ ಕಡಿವಾಣ

ಆತ್ಮೀಯವಾದ ನಡವಳಿಕೆಯುಳ್ಳ ಅವರು ಪ್ರತಿಪಕ್ಷದವರಾಗಿದ್ದರೂ ಆಡಳಿತ ಪಕ್ಷದ ಜೊತೆ ಹೆಚ್ಚು ಪ್ರೀತಿಯುಳ್ಳವರಾಗಿದ್ದಾರೆ ಎಂದು ಅಭಿನಂದಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿನಂದಿಸಿ ಮಾತನಾಡಿದರು

MLA Award, Senior, Congress MLA, deshpande, Assembly,

Articles You Might Like

Share This Article