ಬೆಂಗಳೂರು,ಸೆ.13-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲೇ ರಾಜಕೀಯ ಹೆಜ್ಜೆ ಇಟ್ಟಿರುವುದಾಗಿ ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರಿಸುವಾಗ, ಕೃಷ್ಣಭೈರೇಗೌಡರು ಇದ್ದ ಮೇಲೆ ಚಿಕ್ಕ ಭಾಷಣ ಇರಲೇಬೇಕು ಎಂದರು.
ಆಗ ಕಾಲದಿಂದ ಕಾಲಕ್ಕೆ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಹೆಜ್ಜೆ ಇಟ್ಟಿರುವುದಾಗಿ ಕೃಷ್ಣಭೈರೇ ಗೌಡ ಉತ್ತರಿಸಿದರು. ಆಗ ಮುಖ್ಯಮಂತ್ರಿ ಇದನ್ನು ಒಪ್ಪುವುದಿಲ್ಲ ಎಂದರು.
ಇದನ್ನೂ ಓದಿ : ಅತಿವೃಷ್ಟಿ, ಪ್ರವಾಹ ಕುರಿತ ಚರ್ಚೆಗೆ 3 ದಿನ ಅವಕಾಶ : ಸಭಾಧ್ಯಕ್ಷ ಕಾಗೇರಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಿಮ್ಮ ತಯಾರಿಯಲ್ಲಿ ರಾಜಕೀಯ ಹೆಜ್ಜೆ ಇಟ್ಟಿರುವುದಾಗಿ ಹೇಳಿದ್ದಾರೆ ಎಂದರು. ಆಗ ಬೊಮ್ಮಾಯಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದಾಗ, ಕೃಷ್ಣಭೈರೇಗೌಡರು, ನಾನು ಕೃಷಿ ಸಚಿವರಾಗಿದ್ದಾಗ ನೀವು ಮಾರ್ಗದರ್ಶನ ಮಾಡಿಲಿಲ್ಲವೇ ಹೇಳಿ ಎಂದರು. ಆಗ ಮುಖ್ಯಮಂತ್ರಿ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಹೇಳಿ ಈ ವಿಚಾರದ ಚರ್ಚೆಗೆ ತೆರೆ ಎಳೆದರು.